ಪುಟ:ಪ್ರೇಮ ಮಂದಿರ.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


90 ವಾಗ್ಯೂಷಣ, Mhhhhhhhhhh h} { f {\ # # # # # # # ಅರಮನೆಯ ಶಿಖರದ ಮೇಲಿನ ಆ ಏಕಾಂತವಾದ ಸ್ಥಳದಲ್ಲಿ ಕುಳಿತು ಲಲಿತೆಯು ಕರುಣಿಸಿಂಹನ ವಿಷಯವಾಗಿಯೇ ಆಲೋಚನೆ ಮಾಡುತ್ತಿದ್ದಳು. ಮುಕ್ಕಾವಲಿಯ ತರಂಗಗಳ ಮೇಲೆ ಹಾಯ್ದು ಬರುವ ಶೀತಲವಾಯುವಿನಿಂದ ಅವಳ ತಸ್ಯಹೃದಯವು ಶಾಂತಿಯನ್ನು ಹೊಂದಲಿಲ್ಲ. ತನ್ನ ತಂದೆಯ ಶತ್ರುವಿನ ಮಗನಿಗೆ ತನ್ನನ್ನು ವಿವಾಹ ಮಾಡಿಕೊಡನೆಂದು ಅವಳಿಗೆ ಪೂರ್ಣವಾಗಿ ತಿಳಿದಿತ್ತು. ಕುಮಾರನಾದರೂ ಸಾಹಸ ದಿಂದ ದುರ್ಗವನ್ನು ಪ್ರವೇಶಿಸುವದು ಶಕ್ಯವಾಗಿದ್ದಿಲ್ಲ. ಆದರೂ ಚಂದ್ರಚೂಡನ ಆಶ್ರ “ಮದಿಂದ ಲಲಿತೆಯು ದುರ್ಗಕ್ಕೆ ಬಂದ ಬಳಿಕ ಕುಮಾರಸಿಂಹನು ಒಂದು ಬಾರಿ ಅವ ಳನ್ನು ಕಂಡು ಹೋಗಿದ್ದನು. ಇರಲಿ, ಪ್ರಿಯಕರನ ಚಿಂತನದಿಂದಾದರೂ ಲಲಿತೆಯ ಮನಸ್ಸು ಶಾಂತವಾಯಿತೆಂದು ಹೇಳೋಣವೇ ? ಅದೂ ಇಲ್ಲ! ಮುಕ್ತಾವಲೀ ನದಿಯ ಮೇಲೆ ಬೀಸುತ್ತಿರುವ ಮೃದು ಶೀತಲವಾಯುವು ಇಷ್ಟೊಂದು ಎತ್ತರವಾದ ಸ್ಥಳದಲ್ಲಿ ಕುಳಿತುಕೊಂಡಿದ್ದ ಲಲಿತೆಯ ತಪ್ಪಹೃದಯಕ್ಕೆ ಶಾಂತಿದೇವಿಯನ್ನು ಕಳಿಸಲು ಸಮರ್ಥವಾಗಲಿಲ್ಲವೊ ಏನೊ !! ಲಲಿತೆಯು, ಆ ಸ್ಥಳದಿಂದ ಇಳಿದು ಸ್ವಲ್ಪ ಕೆಳಗೆ ಬಂದಳು. ವಿಕಸಿತ ಸರಸಿಜದಂತಿ ರುವ ಅವಳ ವದನದಲ್ಲಿ ಇಷ್ಟು ಅಲ್ಪಶ್ರಮದಿಂದಲೇ ಉಂಟಾದ ಘರ್ಮಬಿಂದುಗಳು ಶಿಶಿರ ಶೀಕರದಂತೆ ಶೋಭಿಸಹತ್ತಿದುವು. ಸೀರೆಯ ಸೆರಗನ್ನು ಮೊಗದಮೇಲೆ ಆಡಿಸಿಕೊಂಡು ಆಕಾಶದ ಕಡೆಗೆ ನೋಡುತ್ತ ಖಿನ್ನಳಾಗಿ ಲಲಿತೆಯು ತನ್ನಲ್ಲಿಯೇ ಮಾತಾಡಿದಳು. ಹೌದು. ಇದೇ ಸ್ಥಳದಲ್ಲಿಯೇ ಇದೇ ಕಾಲದಲ್ಲಿಯೇ ಅವರ ದರ್ಶನವು ನನಗಾಗಿತ್ತು. ದುರ್ಗದ ಈ ಶಿಲಾತಟಕ್ಕೆ ರಜ್ಜುವಿನ ಏಣಿಯನ್ನು ಮಾಡಿಕೊಂಡು ಬಂದು ತಮ್ಮ ಸುಖಕರ ಸಹವಾಸದ ಲಾಭವನ್ನು ಅವರು ನನಗೆ ಕೊಟ್ಟಿದ್ದರು. ಅಹಹಾ! ಆ ಸುಖವು ಎಷ್ಟು ಅಲ್ಪಾವಧಿಯಲ್ಲಿಯೇ ನಾಶವಾಗಿ ಹೋಯಿತಲ್ಲ! ಚಂದ್ರಾವತ ಕುಲಕ್ಕೂ ಚವ್ಹಾ ಣವಂಶಕ್ಕೂ ಮೊದಲಿನಿಂದಲೂ ಹಗೆತನವಿದೆ. ಪ್ರಾಣ ಹೋದರೂ ನಮ್ಮಪ್ಪನು ಶತ್ರು ವಂಶದೊಳಗಿನ ಆ ನೀರನೊಡನೆ ನನ್ನ ಮದುವೆಯನ್ನು ಮಾಡಲು ಒಡಂಬಡುವುದಿಲ್ಲ. ಅಂದಮೇಲೆ ಇನ್ನು ಮುಂದೆ ನಾನು ಜೀವಿಸಿಯಾದರೂ ಪ್ರಯೋಜನವೇನು? ಮುಕ್ತಾ ವಲಿಯ ಭಯಂಕರವಾದ ಈ ಕರ್ಮಡುವಿನಲ್ಲಿ ಹಾಕಿಕೊಂಡು ಸತ್ತು ಹೋಗುವುದೇ ಶ್ರೇಯಸ್ಕರವಲ್ಲವೇ? ಆದರೆ ಅದಕ್ಕಿಂತಲೂ ಪೂರ್ವದಲ್ಲಿ ಆ ಸುಂದರಮುಖ ಚಂದ್ರನ ದರ್ಶನವು ಈ ಹತಭಾಗಿನಿಗೆ ಆಗಬಹುದೇ? ದೇವಾ, ಒಮ್ಮೆ ಅವರ ದರ್ಶನವು ನನಗಾದರೆ ಇಷ್ಟರಲ್ಲಿ ತಟದ ಕೆಳಬದಿಯಿಂದ ಲಲಿತೆ ಎಂದು ಯಾರೋ ಪ್ರೇಮಾದ್ರ್ರ ಸ್ವರದಿಂದ ಕರೆಯುತ್ತಿರುವುದು ಕೇಳಬಂತು. ಅದನ್ನು ಕೇಳಿ ಲಲಿತೆಯು ಬೆರಗಾದಳು.