ಪುಟ:ಪ್ರೇಮ ಮಂದಿರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ, dev• • • • • • • • • • ••• <ry • •\r\n\nt ( ಈ ಪ್ರಶ್ನೆಗೆ ಉತ್ತರವನ್ನು ಕೊಟ್ಟರೆ ನಿನ್ನ ಗಂಟಾದರೂ ಏನುಹೋಗುತ್ತದೆ. ? ” ಲಲಿತೆಯು ಏನೂ ಮಾತಾಡಲಿಲ್ಲ. ತೀಕ್ಷದೃಷ್ಟಿಯಿಂದೊಮ್ಮೆ ಆ ಸ್ತ್ರೀಯನ್ನು ನೋಡಿ ದಳು. ಆ ದೃಷ್ಟಿಯಲ್ಲಿ ಕ್ರೋಧಕ್ಕಿಂತಲೂ ತುಚ್ಚತೆಯ ಛಾಯೆಯು ಹೆಚ್ಚಾಗಿತ್ತು, ಆ ಸ್ತ್ರೀಯು ತನ್ನ ಪ್ರಶ್ನದ ಉತ್ತರಕ್ಕೋಸ್ಕರ ಸ್ವಲ್ಪ ಹೊತ್ತು ಸುಮ್ಮನಿದ್ದಳು. ಲಲಿತೆಯು ಯಾವ ಉತ್ತರವನ್ನೂ ಕೊಡುವದಿಲ್ಲವೆಂದು ತಿಳಿದು ಅವಳು ತನ್ನಲ್ಲಿಯೇ ನಕ್ಕು ಇಂತು ನುಡಿದಳು. “ ರಾಜಕನೈಯೇ ! ನನ್ನ ಪ್ರಶ್ನೆಗೆ ನೀನು ಉತ್ತರವನ್ನು ಕೊಡಲಿಲ್ಲ. ಹೀಗೆ ಮರೆಮಾಜುವುದರಿಂದ ನಿನಗೆ ನಿಜವಾಗಿಯೂ ಲಾಭವಿಲ್ಲ; ಕಂಡೆಯಾ ? ” ಈಗ ಮಾತ್ರ ಲಲಿತೆಯು ಆ ಸ್ತ್ರೀಯಮೇಲೆ ಕೋಪಿಸಿಕೊಂಡಳು. ಆ ವಿಲಕ್ಷಣ ಸ್ತ್ರೀಯನ್ನು ಕೆಂಗಣ್ಣಿನಿಂದ ನೋಡುತ್ತ ಕರ್ಕಶಶ್ವರದಿಂದ ಒದರಿ ಮಾತನಾಡಿದಳು. * ನಿನ್ನಂತಹ ಉದ್ದತೆಯಾದ ಹೆಂಗಸಿನೊಡನೆ ಮಾತನಾಡತಕ್ಕುದೇನು ? ನಿನ್ನೊಡನೆ ಒಂದಕ್ಷರವನ್ನು ಕೂಡ ಮಾತನಾಡಲು ನನ್ನ ಮನಸ್ಸಿಲ್ಲ. ಇಕೋ ನೋಡು. ನಾನು ಹೊರಟೆನು, ” ಹೀಗೆಂದು ಲಲಿತೆಯು ನಿಜವಾಗಿಯೂ ಅಲ್ಲಿಂದ ಹೊರಟುಹೋಗಲು ಆರಂಭಿಸಿ ದಳು. ಆ ವಿಲಕ್ಷಣಸ್ತ್ರೀಯು ಲಲಿತೆಯೊಡನೆ ಮಾತಾಡಬೇಕೆಂದೂ ಅವಳಿಗೆ ಏನನ್ನೂ ಕೇಳಬೇಕೆಂದೂ ಅಲ್ಲಿಗೆ ಬಂದಿದ್ದಳು. ಆದುದರಿಂದ ಲಲಿತೆಯು ಹೊರಟುಹೋದರೆ ತನ್ನ ಹೇತುವು ಸಫಲವಾಗುವುದಿಲ್ಲವೆಂದೂ, ಹಗ್ಗವು ಹರಿಯುವವರೆಗೂ ಜಗ್ಗುವುದು ಒಳಿತಲ್ಲವೆಂದೂ ಭಾವಿಸಿ, ಲಲಿತೆಯು ದಾರಿಗೆ ಅಡ್ಡವಾಗಿ ಬಂದು ಮಾತನಾಡಿದಳು (( ಹಾ! ಹಾ! ರಾಜಕನ್ಯಯೇ ! ಹೋಗಬೇಡ! ಹೋಗಬೇಡ ! ನಾನು~ ನಾನು ” ಲಲಿತೆಯು ಅಚ್ಚರಿಗೊಂಡು ನಿಂತಲ್ಲಿಯೇ ನಿಂತಳು. ಆ ಉದ್ದ ತಕ್ಷೀಯ ಮಾತಿಗೆ ಅಸಹ್ಯಪಟ್ಟು, ಅಲ್ಲಿ ನಿಲ್ಲುವುದು ಉಚಿತವಲ್ಲವೆಂದು ಅವಳು ತಿಳಿದಿದ್ದಳು. ಆದರೆ ಈಗ ಅವಳಾಡಿದ ನುಡಿಯನ್ನು ಕೇಳಿ ಮುಂದಕ್ಕೆ ಹೋಗಲಾರದೆ ನಿಂತುಕೊಂಡಳು, ಏನೋ ತಿರಸ್ಕಾರವ್ಯಂಜಕಸ್ವರದಿಂದ ಮಾತನಾಡಿದಳು ' ನಮ್ಮವ್ವಾ ! ಇನ್ನು ಮುಂದೆ ಉಪಾಯವೇ ಇಲ್ಲ. ಮೊದಲಿನಿಂದಲೂ ಒಂದೇಸಮನೆ ನನ್ನನ್ನು ಈ ಪ್ರಕಾರ ಕಾಡುತ್ತ ಲಿರುವ ನೀನಾರು ? ಇಲ್ಲಿ ಬಂದಾಗಿನಿಂದಲೂ ಒಂದೇಸಮನೆ ಬಡಬಡಿಸುತ್ತಲಿರುವೆ. ಆದರೆ ನೀನು ಯಾರು ? ಎಲ್ಲಿಯವಳು ? ಎಂಬ ವಿಷಯವನ್ನೇ ಎತ್ತಲಿಲ್ಲ. ನಿಜವಾಗಿಯೂ ಹೇಳುತ್ತೇನೆ-ಬೇಕಾದರೆ ನಿನ್ನ ಕಾಲಿಗೆರಗು ತ್ತೇನೆ-ನಿನ್ನ ಅಪೇಕ್ಷೆಯೇನಿರುವುದೆಂಬು ದನ್ನು ನನಗೆ ತಿಳಿಸು. ಕನಿಷ್ಠ ಪಕ್ಷಕ್ಕೆ ನೀನು ಯಾರೆಂಬದನ್ನಾದರೂ ಹೇಳು !!” .