ಪುಟ:ಪ್ರೇಮ ಮಂದಿರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ, ೨ V-44 /vvvvvvvvvvvv

  • * * * *••••••••••••••••• •r Prow

ಹೋಗಿ ಅವಳ ಹೆಗಲ ಮೇಲೆ ಕೈಯಿಟ್ಟು ಸ್ನೇಹದಿಂದ ಮಾತನಾಡಿದಳು. “ ನಿನಗೆ ಏನು ಬೇಕಮ್ಮಾ ? ಹೇಳು. ನನಗೆ ಹೇಳು, ” ರಾಜಕನ್ಯಯೋ, ನನಗೆ ಏನು ಬೇಕೆಂಬುದನ್ನು ಹೇಳಿ ಬಿಡಲಾ? ಯಾವುದು ನನಗೆ ಎಂದೂ ದೊರೆಯುವಂತಿಲ್ಲವೋ, ಯಾವುದನ್ನು ದೊರಕಿಸುವ ಆಶೆಯನ್ನು ನಾನು ಪೂರ್ಣವಾಗಿ ಬಿಟ್ಟು ಬಿಡಬೇಕಾಗಿದೆಯೋ, ಯಾವುದು ನನ್ನ ಕೈಯಲ್ಲಿ ಸಿಕ್ಕಿದ್ದರೂ ಕ್ಷಣಾರ್ಧದಲ್ಲಿ ದೂರ ಹೊರಟು ಹೋಯಿತೋ, ಮತ್ತು ಯಾವುದು ನನಗೆ ಎಂದೂ ಸಿಕ್ಕಲಾರದೋ ಅದು ನನಗೆ ಬೇಕಾಗಿದೆ. ರಾಜಕನ್ಯಯೇ ಅದು ನನಗೆ ಬೇಕಾಗಿದೆ. ಅದನ್ನು ನನಗೆ ಕೊಡುವೆಯಾ ? ” ಮಾತಾಡುತ್ತಾಡುತ್ತ ಅವಳ ಸ್ವರವು ಕ್ರುದ್ಧವಾಯಿತು; ಬಾಯಿಂದ ಶಬ್ದಗಳು ಹೊರಡದಾದವು! ಆಕೆಯು ತನ ಸೆರಗಿನಿಂದ ಕಣ್ಣುಗಳನ್ನೊ ರಸಿಕೊಂಡುದೂ ಲಲಿತೆಗೆ ಗೋಚರವಾಯಿತು? ಕೋಮಲಹೃದಯದ ಆ ಲಲಿತೆಯಲ್ಲಿ ಸಹಾನುಭೂತಿಯು ಉತ್ಪನ್ನವಾಯಿತು, ಸ್ನೇಹಾದ್ರ್ರಸ್ಕರದಿಂದ ಅವಳು ಮಾತಾಡಿದಳು. < ಈಗ ನೀನು ಹೇಳಿದುದನ್ನು ನನಗೆ ಸ್ವಲ್ಪ ಚೆನ್ನಾಗಿ ತಿಳಿಯುವಂತೆ ಹೇಳಮ್ಮಾ! ನಿಜವಾಗಿಯೂ ನನಗೆ ನೀನು ಹೇಳಿದು ದರ ಅರ್ಥವೇ ತಿಳಿಯಲಿಲ್ಲ. ” ಆ ಸ್ತ್ರೀಯು ಈಗ ಸ್ವಲ್ಪ 'ಶಾಂತಳಾಗಿದ್ದಳು. ಆದರೂ ಖಿನ್ನ ಸ್ವರದಿಂದಲೇ ನುಡಿ ದಳು. * ಲಲಿತೇ, ನಾನು ನಿನಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಅದಕ್ಕೆ ನೀನು ಕೋಪಿಸಿಕೊಳ್ಳುವುದಿಲ್ಲವೆಂದು ನನಗೆ ವಚನಕೊಡು. ” ಒಂದು ಕ್ಷಣಹೊತ್ತು ವಿಚಾರಮಾಡಿ ಲಲಿತೆಯು ಹೇಳಿದಳು. “ ಒಳ್ಳೇದು. ನಾನು ನಿನ್ನ ಮೇಲೆ ಸಿಟ್ಟಾಗುವುದಿಲ್ಲ. ಆಯಿತೋ ಇಲ್ಲವೋ ? ” ಆ ಸ್ತ್ರೀಯು ಒಂದು ದೀರ್ಘನಿಶ್ವಾಸವನ್ನು ಬಿಟ್ಟು ಕೇಳಿದಳು. ( ಲಲಿತೇ, ನಿಜವಾಗಿ ಹೇಳು, ಚವ್ಹಾಣರಾಜಕುಮಾರನಾದ ಕರುಣಸಿಂಹನ ಮೇಲೆ ನಿನ್ನ ಪ್ರೇಮ ವೇಕೆ ಕೂತಿದೆ? ೨ - ಆಕೆಯ ಈ ಅನಪೇಕ್ಷಿತವಾದ ಪ್ರಶ್ನೆಯನ್ನು ಕೇಳಿ ಲಲಿತೆಯು ಆಶ್ಚರ್ಯದಿಂದ ಚಕಿತಳಾದಳು. ಕುಮಾರ ಕರುಣಸಿಂಹನಿಗೂ ತನಗೂ ಪರಸ್ಪರವಾಗಿದ್ದ ಪ್ರೇಮಭಾ ವವು ಬೇರೆಯವರಾರಿಗಾದರೂ ಗೊತ್ತಿರಬಹುದೆಂದು ಲಲಿತೆಯು ಇನ್ನೂವರೆಗೆ ತಿಲ ಮಾತ್ರವೂ ತಿಳಿದಿದ್ದಿಲ್ಲ. ವಿಸ್ಮಯದ ಸ್ವರದಿಂದ ಅವಳು ಆ ಸ್ತ್ರೀಯನ್ನು ಕುರಿತು ಮಾತ ನಾಡಿದಳು. “ ನಿನ್ನ ಈ ಚಮತ್ಕಾರಿಕ ಪ್ರಶ್ನೆಯನ್ನು ಕೇಳಿ ನಾನು ಆಶ್ಚರ್ಯದಿಂದ ಹತಬುದ್ದಿಯಾಗಿದ್ದೇನೆ! ಏನಮ್ಮಾ ! ಅವರ ಮೇಲೆ ನನ್ನ ಪ್ರೇಮವಿದೆಯೆಂದು ನಿನಗೆ ಹೇಳಿದವರಾದರೂ ಯಾರು ???