ಪುಟ:ಪ್ರೇಮ ಮಂದಿರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ, ೩d , , , , , , • ••• ವಾಣಿಯಿಂದ ಅವಳು ನನ್ನನ್ನು ಬೆದರಿಸುವುದಕ್ಕೆ ಕಾರಣವೇನು ? ಇದರ ಅರ್ಥವಾ ದರೂ ಏನು ? ಇಷ್ಟೊಂದು ಇಕ್ಕಟ್ಟಿನೊಳಗಿಂದ ಪಾರಾಗಿ ನನ್ನ ಮಂದಿರದವರೆಗೆ ಅವಳು ಹೇಗೆ ಬಂದಳು ? ಮತ್ತು ಯಾರಿಗೂ ತಿಳಿಯದಂತೆ ಇಲ್ಲಿಂದ ಹೇಗೆ ಹೊರಟು ಹೋದಳು ? ಇವೇ ಮೊದಲಾದ ಅನೇಕ ಪ್ರಶ್ನೆಗಳು ಆಕೆಯ ಮನಸ್ಸಿನಲ್ಲಿ ಉದ್ಭವಿಸಿ ದವು. ಎಲ್ಲವೂ ಗೂಢ! ಎಲ್ಲವೂ ವಿಲಕ್ಷಣ ! ! ಎಲ್ಲವೂ ಅಜ್ಞಾತ ! !! ಲಲಿತೆಯ ಮಸ್ತ ಕವು ಈ ವಿಚಾರದಲ್ಲಿಯೇ ಭ್ರಮಣಮಾಡಹತ್ತಿತು, ಆದರೆ ಇದೊಂದೇ ಪ್ರಶ್ನೆಯನ್ನು ವಿಚಾರಿಸಲು ಲಲಿತೆಗೆ ಅವಕಾಶವಾದರೂ ಎಲ್ಲಿ ಇತ್ತು ? ಆಕೆಯ ಆಯುಷ್ಯದೊಳಗಿನ ಅತ್ಯಂತ ಮಹತ್ವದ ಪ್ರಶ್ನೆಯು ಇದೇ ಕಾಲದಲ್ಲಿಯೇ ಉಪಸ್ಥಿತವಾಗಿತ್ತು. ಆಕೆಯ ತಂದೆಯಾದ ಭೀಮಸಿಂಹನು ಆಕೆಯ ವಿವಾಹದ ಪ್ರಸ್ತಾಪವನ್ನು ಮಾಡುವುದಕ್ಕೋಸ್ಕರ ಸರತಾನಸಿಂಹನ ಕಡೆಗೆ ಹೋಗಿ ದ್ದನು. ಇನ್ನು ಒಂದೆರಡು ದಿವಸಗಳಲ್ಲಿಯೇ ಭೀಮಸಿಂಹನು ದುರ್ಜಯಸಿಂಹನನ್ನು ಕರೆದುಕೊಂಡು ಇಲ್ಲಿಗೆ ಬರತಕ್ಕವನಿದ್ದನು. ಅವನು ಒಮ್ಮೆ ಬಂದು ಬಿಟ್ಟನೆಂದರೆ ಲಲಿ ತೆಯ ಆಶೆಗಳೆಲ್ಲವೂ ಸುಟ್ಟು ಬೂದಿಯಾಗಿ ಹೋಗುತ್ತಿದ್ದುವು. ಈ ಒಂದೆರಡು ದಿವಸ ಗಳ ಅವಧಿಯಲ್ಲಿ ಕುಮಾರನ ದರ್ಶನವಾಗದಿದ್ದರೆ ಮುಂದೆ ಮಾಡತಕ್ಕುದೇನು ? ತಂದೆಯ ಅಪ್ಪಣೆಯಂತ ದುರ್ಜಯಸಿಂಹನೊಡನೆ ವಿವಾಹಮಾಡಿಕೊಳ್ಳುವ ಸಂದ ರ್ಭ ಪ್ರಾಪ್ತವಾಗುವದಲ್ಲವೇ ? ಹಾಗೆ ಒಂದು ವೇಳೆ ಆದರೆ ನನ್ನ ಪ್ರೇಮದ ವಿಡಂಬನೆ ಯಾಗದಂತೆ ಅವ ಉಪಾಯವನ್ನು ಮಾಡತಕ್ಕದ್ದು ? ವಜ್ರದ ಉಂಗರವನ್ನು ತೇದು ಕುಡಿಯುವುದೇ ಉಪಾಯ !! ಅದರ ಹೊರತು ಗತ್ಯಂತರವೇ ಇಲ್ಲ!!! ಈ ಪ್ರಕಾರದ ಅನೇಕ ವಿಚಾರಗಳು ಲಲಿತೆಯ ಮನಸ್ಸಿನಲ್ಲಿ ಬಂದವು. ಆಕೆಗೆ ಸೃತಿಯು ತಪ್ಪಿಹೋಯಿತು. ತನ್ನ ಮನಸ್ಸಿನ ಸ್ಥಿತಿಯು ಪರಿಜನರಿಗೆ ಗೊತ್ತಾಗಬಾರ ದೆಂದು ಅವಳು ಹೇಗೆ ಹೇಗೆ ಒಂದೆರಡು ತುತ್ತು ಬಾಯಲ್ಲಿ ಹಾಕಿಕೊಂಡು ಶಯನ ಮಂದಿರಕ್ಕೆ ಬಂದು ಮಂಚದ ಮೇಲೆ ಬಿದ್ದು ಕೊಂಡಳು. ಹೀಗೆ ಅವಳು ತನ್ನ ಪರಿಜನ ರನ್ನೇನೋ ಮೋಸಗೊಳಿಸಿದಳು. ಆದರೆ ಸರ್ವಾಂತರ್ವ್ಯಾಸಿಯಾದ ನಿದ್ರಾದೇವಿ ಯನ್ನು ಠಕ್ಕಿಸುವುದೆಂತು ? ಆ ಸ್ಥಿತಿಯಲ್ಲಿ ರಾಜಕನ್ಯಗೆ ನಿದ್ದೆ ಬರುವುದು ಅಸಂಭವನೀ ಯವೇ ಆಗಿತ್ತು, ಅವಳು ನಿದ್ರಾದೇವಿಯನ್ನು ಪ್ರಾರ್ಥನೆ ಮಾಡಿದ ಹಾಗೆಲ್ಲ ದೇವಿಯು ಹೆಚ್ಚು ಹೆಚ್ಚು ದೂರದಲ್ಲಿಯೇ ಉಳಿಯುತ್ತಿದ್ದಳು! ಲಲಿತೆಯು ಈ ಮಗ್ಗಲಿನಿಂದ ಆ ಮಗ್ಗಲಿಗೊ ಆ ಮಗ್ಗಲಿನಿಂದ ಈ ಮಗ್ಗಲಿಗೂ ಒಂದೇ ಸವನೆ ಹೊರಳಾಡುತ್ತಿದ್ದಳು. ವಿಚಾರಗಳ ಆವೇಗವು ಅಸಹ್ಯವಾಗಲು ಅವಳು ಎದ್ದು ಕೂಡುತ್ತಿದ್ದಳು, ಆ ಸ್ಥಿತಿಯಲ್ಲಿ ಕೆಲವು ಕಾಲವನ್ನು ಕಳೆದ ಬಳಿಕ,