ಪುಟ:ಪ್ರೇಮ ಮಂದಿರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ವಾಗ್ಯೂಷಣ, - a : • • • • • • ಅವಳು ಕೆಳಗಿಳಿದು ಸ್ವಲ್ಪ ಹೊತ್ತಿನವರೆಗೆ ಇತ್ತಿಂದತ್ತ ಅತ್ತಿಂದಿತ್ತ ಅಡ್ಡಾಡುತ್ತಿದ್ದಳು. ಹೀಗೆ ತಿರುಗಾಡುತ್ತಿರುವಾಗ ಕಿಟಕಿಯ ಸಮೀಪಕ್ಕೆ ಹೋದಳೆಂದರೆ, ನೀಲವರ್ಣದ ಆಕಾಶವನ್ನೂ ತನ್ನ ದಾರುಣವಾದ ಮನಃಸ್ಥಿತಿಯನ್ನೂ ತಿಳಿದು ಹಾಸ್ಯ ಮಾಡುತ್ತಿದ್ದ ತಾರಕೆಗಳನ್ನು ನೋಡುತ್ತ ಎಷ್ಟೋ ಹೊತ್ತಿನವರೆಗೆ ನಿಂತುಕೊಳ್ಳುತ್ತಿದ್ದಳು. ಈ ಪ್ರಕಾ ರದ ಆಚರಣೆಗಳಿಂದ ಮಸ್ತಕದಲ್ಲಿ ನಡೆದಿರುವ ವಿಚಾರಗಳ ಕಲ್ಲೋಲವು ಹೇಗೆ ಶಾಂತ ವಾಗಬೇಕು ? ಆದುದರಿಂದ ಮತ್ತೆ ಕಿಟಕಿಯನ್ನಿಕ್ಕಿ ಮಂಚದ ಮೇಲೆ ಬಿದ್ದು ಕೊಳ್ಳುತ್ತಿ ದ್ದಳು. ಮತ್ತು ಸಂಕಟದೊಳಗಿಂದ ತನ್ನ ನ್ನು ಪಾರಗಾಣಿಸುವುದಕ್ಕಾಗಿ ಅತಿ ನವ್ರತೆ ಯಿಂದ ನಿದ್ರಾದೇವಿಯನ್ನು ಪ್ರಾರ್ಥಿಸುತ್ತಿದ್ದಳು. ಆದರೆ ಈ ಹತಭಾಗಿನಿಯ ವಿಷಯ ವಾಗಿ ಆ ಪಾಪಾಣಹೃದಯೆಗೆ ಕಿಂಚಿತ್ತಾದರೂ ದಯೆಯುಂಟಾಗಲಿಲ್ಲ ! ಲಲಿತೆಯ ಪ್ರಾರ್ಥನೆಯನ್ನು ಕೇಳಿ ಹತ್ತಿರ ಬರುವದಕ್ಕೆ ಬದಲಾಗಿ ಅವಳು ಇನ್ನೂ ದೂರದಲ್ಲಿ ಹೋಗಿ ನಿಂತಳು !!! ಎಷ್ಟೋ ಹೊತ್ತಿನವರೆಗೆ ಲಲಿತೆಯು ಇದೇ ಕ್ರಮವನ್ನೆ ನಡೆಯಿಸಿದ್ದಳು. ಇಷ್ಟರಲ್ಲಿ ರಾತ್ರಿಯ ಗಂಭೀರವಾದ ನಿಸ್ತಬ್ದತೆಯು ಭಂಗವಾಯಿತು; ದುರ್ಗದ ಸಿಂಹ ದ್ವಾರದಲ್ಲಿದ್ದ ವಾದ್ಯಗೃಹದಲ್ಲಿ ನೌಬತ್ತಿನ ಧ್ವನಿಯಾಗಹತ್ತಿತು; ಕ್ಷಣಾರ್ಧದಲ್ಲಿಯೇ ಆ ಧ್ವನಿಯು ನಾಲ್ಕೂ ಕಡೆಯಲ್ಲಿ ಪಸರಿಸಿತು. ಆ ಶಬ್ದವು ಕಿವಿಯಲ್ಲಿ ಬಿದ್ದೊಡನೆಯೇ ರಾತ್ರಿಯ ಮೂರನೆಯ ಪ್ರಹರವು ಕಳೆದು ಹೋಯಿತೆಂಬುದು ಲಕ್ಷದಲ್ಲಿ ಬಂದು ಲಲಿತೆಯು ಬೆದರಿದಳು. ನಕ್ಷತ್ರಮಣಿಖಚಿತವಾದ ನೀಲನಭೋವ.೦ಡಲವನ್ನು ಒಮ್ಮೆ ಅವಲೋಕಸಿ, ಕಿಟಕಿಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿ ಮಂಚದ ಮೇಲೆ ಬಿದ್ದು ಕೊಂಡಳು ಲಲಿತೆಯ ಮಸ್ತಕದಲ್ಲಿ ಅನೇಕ ವಿಧವಾದ ಚಿಂತನಲಹರಿಗಳು ಮತ್ತೆ ಕಲ್ಲೋಲಿತವಾಗಹತ್ತಿದುವು. ಆದರೆ ಈ ಸಾರೆ ಮಾತ್ರ ಅವಳು ಬಹಳ ಹೊತ್ತಿನವ ರೆಗೆ ಮೇಲೆ ಹೇಳಿದಂತಹ ಯಾತನೆಗಳನ್ನು ಸಹಿಸುತ್ತ ಬಿದ್ದು ಕೊಳ್ಳಬೇಕಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಅವಳ ಕಣ್ಣುಗಳು ಜಡವಾಗಿ ಬೆಳಗಿನ ಸಕ್ಕರೆನಿದ್ದೆಯು ಆವ ಳಿಗೆ ಹತ್ತಿತು. ಆದರೆ ಆಗಲಾದರೂ ಅವಳಿಗೆ ಗಡದ್ದು ನಿದ್ದೆ ಹತ್ತಲಿಲ್ಲ; ಅವಳ ಮಸ್ತ ಕವು ಶಾಂತವಾಗಿಯೂ ಸ್ಥಿರವಾಗಿಯೂ ಇದ್ದಿಲ್ಲ. ಸಾಯ೦ಕಾಲದಿಂದ ನಡೆದು ಹೋದ ಬೇರೆ ಬೇರೆ ಸಂಗತಿಗಳ ಸಂಬಂಧವುಳ್ಳ ಸ್ವಪ್ನಗಳನ್ನು ಅವಳು ಕಾಣುತ್ತಿದ್ದಳು! ಅರುಣೋದಯದ ಸುಮಾರಕ್ಕೆ ಒಂದು ಭಯಂಕರವಾದ ಸ್ವಪ್ನದ ಆಘಾತ ದಿಂದ ಅವಳು ಎಚ್ಚೆತ್ತಳು, ಕಿಟಕಿಯೊಳಗಿನ ತೆರೆಯಿಂದ ಪ್ರಭಾತಕಾಲದ ಸೌಮ್ಯ ವಾದ ಮಂದಪ್ರಕಾಶವು ಒಳಸೇರಿದುದನ್ನು ಕಂಡು ಅವಳು ಎದ್ದಳು. ಸರಿಜನರೊ ಡನೆ ಒಂದು ಶಬ್ದವನ್ನು ಕೂಡ ಮಾತನಾಡದೆ ಅವಳು ತನ್ನ ನಿತ್ಯವಿಧಿಯನ್ನು ತೀರಿಸಿ ದಳು; ಮತ್ತು ಬೇಗನೇ ಸ್ನಾನ ಮಾಡಿ ತನ್ನ ಮಂದಿರದೊಳಗಿಂದ ಹೊರಬಿದ್ದಳು. .