ಪುಟ:ಪ್ರೇಮ ಮಂದಿರ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ.

  • * * * * * * * *

ಸನ್ನಿಧಿಗೆ ಹೋಗಿ ನಮಸ್ಕಾರ ಮಾಡಿದಳು. ಭೈರವಿಯ ಗಂಭೀರವಾದ ಮುಖವು ಈಗ ಇನ್ನೂ ಗಂಭೀರವಾಗಿ ತೋರಹತ್ತಿತು. ಭೈರವಿಯು ಸುಮ್ಮನೆ ಇದ್ದಳು. ಸ್ವಲ್ಪಹೊತ್ತಿನ ಮೇಲೆ ಲಲಿತೆಯು ಉತ್ಸುಕತೆ ಯಿಂದ ಪ್ರಶ್ನೆ ಮಾಡಿದಳು. “ ತಾಯಿ, ನನ್ನ ಕೆಲಸವಾಯಿತೇ ? ?” ಭೈರವಿಯು ಇನ್ನೂ ವರೆಗೆ ಸುಮ್ಮನೇ ಇದ್ದಳು. ಈ ಕಾಲದಲ್ಲಿ ಅವಳ ಮನಸ್ಸಿ ನಲ್ಲಿ ಆವ ವಿಚಾರಗಳು ನಡೆದಿದ್ದು ಎಂಬುದನ್ನು ಹೇಳುವುದು ಕಷ್ಟವಾಗಿದೆ. ಆದರೆ ರಾಜಕನೆಯ ಪ್ರಶ್ನೆಯನ್ನು ಕೇಳಿದ ಬಳಿಕ ಭೈರವಿಯ ಲಲಾಟಪ್ರದೇಶದಲ್ಲಿ ಚಿಂತೆಯ ರೇಖೆಗಳು ಕಾಣಹತ್ತಿದುದು ಮಾತ್ರ ನಿಜ ! ಲಲಿತೆಗೆ ಈ ಸಂಗತಿಯು ಗೊತ್ತಾಗದೆ ಹೋಗಲಿಲ್ಲ! ತನ್ನ ಪ್ರಶ್ನೆಗೆ ಉತ್ತರವು ದೊರೆಯಲಿಲ್ಲವೆಂಬುದನ್ನು ತಿಳಿದು ಲಲಿತೆಯು ಪುನಃ ಸಂಬೋಧಿಸಿದಳು. ( ತಾಯಿ ! » ಭೈರವಿಯು ಒಮ್ಮೆಲೆ ಎಚ್ಚತ್ತವಳಾಗಿ ಮಾತನಾಡಿದಳು, " ಮಗಳೇ, ಏನು ? " “ ನಾನು ವಿನಂತಿಯನ್ನು ಮಾಡಿಕೊಂಡ ಮೇರೆಗೆ ತಾವು ನನ್ನ ಕೆಲಸವನ್ನು ಮಾಡಿದಿರಾ ? ” (( ಹೌದು. ಮಾಡಿದ್ದೇನೆ. ? (( ಅದರ ಫಲಿತಾರ್ಥವೇನು ? ೨೨ ಭೈರವಿಯು ಸ್ವಲ್ಪ ಹೊತ್ತಿನವರೆಗೆ ವಿಚಾರಮಾಡುತ್ತ ಸುಮ್ಮನಿದ್ದಳು. ಆಮೇಲೆ ಅವಳು ರಾಜಕಸ್ಯೆಯನ್ನು ವಿಚಾರಿಸಿದಳು. << ಮಗಳೇ, ನೀನು ಈ ಸಂಕಷ್ಟದಲ್ಲಿ ಏಕೆ ಬೀಳುತ್ತೀ ? ಭವಿಷ್ಯವನ್ನು ತಿಳಿದುಕೊಂಡು ನೀನು ಏನು ಮಾಡುವೆ? ಲಲಿತೇ, ನಾನು ಹೇಳುವುದನ್ನು ಕೇಳು.-ಅದರ ಗೊಡವೆಗೆ ಹೋಗಬೇಡ-ಸುಮ್ಮನೆ ಸುಖದ ಜೀವ ವನ್ನು ದುಃಖದಲ್ಲಿ ಕೆಡಹುವುದರಿಂದ ಪ್ರಯೋಜನವೇನು ಮಗಳೇ ? ) ಭೈರವಿಯ ಈ ಸಲಹೆಯು ಲಲಿತೆಯ ಮನಸ್ಸಿಗೆ ಬರಲಿಲ್ಲವೆಂಬಂತೆ ತೋರಿತು. ತನ್ನ ಹಣೆಯಲ್ಲಿ ಏನು ಬರೆದಿದೆಯೆಂಬುದನ್ನು ತಿಳಿದುಕೊಳ್ಳುವ ಉತ್ಕಂಠಯು ಅವಳಲ್ಲಿ ಅತಿಶಯವಾಗಿತ್ತು. ಈಗ ವಿವೇಕದಿಂದ ತನ್ನ ಮನಸ್ಸನ್ನು ದಮನಮಾಡಲು ಆಕೆಯು ಅಸಮರ್ಥಳಾಗಿದ್ದಳು. ಲಲಿತೆಯು ದೀನಸ್ವರದಿಂದ ಭೈರವಿಯನ್ನು ಕುರಿತು ಮತ್ತೆ ಮಾತಾಡಿದಳು. “ ನಾನು ಮೊದಲು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಂಡಾಗಲೇ ನಾನು ಎಲ್ಲ ಸಂಗತಿಗಳ ವಿಚಾರವನ್ನು ಮಾಡಿರುತ್ತೇನೆ. ತಾಯಿ, ತಮ್ಮ ಲೆಕ್ಕದಿಂದ ಏನು ತಿಳಿದು ಬಂತೋ ಅದನ್ನು ಸ್ಪಷ್ಟವಾಗಿ ಹೇಳುವುದಾಗಬೇಕು. ಸ್ವಲ್ಪಾದರೂ ಸಂಕೋಚವನ್ನು ಮನಸ್ಸಿನಲ್ಲಿ ತರಬೇಡಿರಿ. ತಾಯಿ, ಈ ಸಂಶಯಿಸ್ಥಿತಿಯ ಯಾತ ನೆಯೇ ನನ್ನನ್ನು ಬಲವಾಗಿ ಬಾಧಿಸುತ್ತದೆ? ”