ಪುಟ:ಪ್ರೇಮ ಮಂದಿರ.djvu/೪೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ, GL

  1. 44 + + Y•

(( ಹೌದು. ಇನ್ನೂ ಒಂದು ಸಂಗತಿಯು ತಿಳಿದಿದೆ. ಮತ್ತು ಅದು ನಿನಗೆ ಆನಂದ ಕಾರಕವಾಗಿಯೇ ಇದೆ. " «« ಅದಾವುದು? ” ಲಲಿತೆಯು ಉತ್ಕಂಠಯಿಂದ ಕೇಳಿದಳು «« ಕರುಣಸಿಂಹನಿಗೂ ನಿನಗೂ ಮೀಲನವುಂಟಾಯಿತೆಂದರೆ, ನಿಮ್ಮಬ್ಬರಿಗೂ ವಿಯೋಗವಾಗುವುದೇ ಇಲ್ಲ. ವೈಧವ್ಯಯೋಗವು ನಿನ್ನ ಹಣೆಯಲ್ಲಿಲ್ಲ ! ” ಭೈರವಿಯ ಈ ಆಶ್ವಾಸನದಿಂದ ಲಲಿತೆಯು ಆ ಎರಡನೆಯ ಭವಿಷ್ಯವನ್ನು ಮರೆತೇ ಬಿಟ್ಟಳು. ಆಕೆಯ ಆನಂದವು ಆಕಾಶದಲ್ಲಿ ಹಿಡಿಸದಾಯಿತು ! ಭೈರವಿಯ ಚರಣಗಳಿಗೆ ವಂದನೆಮಾಡಿ ಲಲಿತೆಯು ತನ್ನ ಮಂದಿರದ ಕಡೆಗೆ ತೆರಳಿದಳು. ಆಕೆಯ ಹೃದಯದಲ್ಲಿ ಭಿನ್ನ ಭಿನ್ನ ವೃತ್ತಿಗಳು ಕಲ್ಲೋಲವನ್ನುಂಟುಮಾಡಹತ್ತಿದ್ದುವು. ಚಂದ್ರಚೂಡನು ಹೇಳಿದ ಭವಿಷ್ಯವೂ ಭೈರವಿಯ ಭವಿಷ್ಯವೂ ಪರಸ್ಪರ ವಿಸದೃಶವಾಗಿರುವುದನ್ನು ತಿಳಿದು ಜ್ಯೋತಿಷ್ಯದ ಮೇಲಿದ್ದ ಅವಳ ವಿಶ್ವಾಸವೇ ಹಾರಿಹೋಯಿತು. ಅದರ ಕಡೆಗೆ ಲಕ್ಷವನ್ನೇ ಕೊಡದೆ ತನಗೆ ಯೋಗ್ಯವೆನಿಸಿದ ಮಾರ್ಗದಿಂದ ನಡೆಯುವುದೇ ಜಾಣತನ ವೆಂದು ಆಕೆಯು ಮನವರಿಕೆ ಮಾಡಿಕೊಂಡಳು. ಆರನೆಯ ಪರಿಚ್ಛೇದ

  1. 4 ,

ಪರಿಚಯ! ರಾತ್ರಿಯ ಎರಡನೆಯ ಪ್ರಹರವು ಮೀರಿಹೋಗಿತ್ತು. ಕೃಷ್ಣ ಪಕ್ಷದ ರಾತ್ರಿಯಾದುದ ರಿಂದ ನಾಲ್ಕೂ ಕಡೆಯಲ್ಲಿಯೂ ಸೂಚಿಭೇದ್ಯವಾದ ಅಂಧಕಾರವು ಪಸರಿಸಿತ್ತು. ನಿಬಿಡ ವಾದ ವನಪ್ರದೇಶದೊಳಗಿನ ಕಾಲ್ದಾರಿಯಲ್ಲಂತೂ ಒಂದೆರಡು ಮೊಳ ದೂರದಲ್ಲಿರುವ ಪದಾರ್ಥವು ಕೂಡ ಕಾಣಿಸುತ್ತಿಲ್ಲ! ಗಿಡಗಳ ತುದಿಯಲ್ಲಿರುವ ದಟ್ಟತ್ತಾದ ಚಿಗುರೆಲೆ ಗಳ ಮೇಲಿನ ಕತ್ತಲೆಗಿಂತಲೂ ಅವುಗಳ ಕೆಳಗಿನ ಕೊಂಬೆಗಳ ಮೇಲಿನ ಕತ್ತಲೆಯು ಹೆಚ್ಚಾಗಿಯೂ, ಆ ಕೊಂಬೆಗಳಿಗಿಂತ ಇನ್ನೂ ಕೆಳಗಿರುವ ಶಾಖೆಗಳ ಮೇಲೆ ಅದಕ್ಕೂ ಹೆಚ್ಚಾಗಿಯೂ ಇತ್ತು. ಹೀಗೆ ಅಂಧಕಾರವು ಭೂತಲದ ಮೇಲೆ ಅತ್ಯಂತ ಸಾಂದ್ರವಾಗಿ ಪಸರಿಸಿತ್ತು. ಗಿಡಗಳ ಬುಡದಲ್ಲಿದ್ದ ದೂರ್ವಾಂಕುರ ಮತ್ತು ಒಣಗಿದ ತರಗಲೆಗಳ ನಿಜಸ್ವರೂಪವು ಕತ್ತಲೆಯ ಪ್ರಭಾವದಿಂದ ಲುಪ್ತವಾಗಿ ಸರ್ವವೂ ಅಂಧಕಾರಮಯ ವಾಗಿತ್ತು ! ಸಮಗ್ರವಾದ ವನಭೂಮಿಯು ಶಾಂತವಾಗಿತ್ತು. ಎಲ್ಲೆಡೆಯಲ್ಲಿಯೂ ನಿಸ್ತಬ್ದ ತೆಯು ತುಂಬಿತ್ತು. ವನಪ್ರದೇಶದಲ್ಲಿ ಭುಜಕ್ಕೆ ಭುಜವನ್ನು ಅನಿಸಿ ಮಿತ್ರರಂತೆ ಅನ್ನೋನ್ಯ