ಪುಟ:ಪ್ರೇಮ ಮಂದಿರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ವಾಗ್ಯೂಷಣ. hr in his p ೧೧ , - - - -

  • * * * * * * * * * * *

ಒಳ್ಳೆ ಜಾಗರೂಕರಾಗಿ ಈ ಪ್ರಸಂಗದಲ್ಲಿ ನಡೆದುಕೊಳ್ಳಬೇಕೆಂದು ತಮಗೆ ನಾನೇನು ಹೇಳಬೇಕೆಂಬಂತಿಲ್ಲ ! 22 ಕರುಣಸಿಂಹನು ಒಂದು ಕ್ಷಣಕಾಲ ವಿಚಾರಮಾಡುತ್ತ ಅಲ್ಲಿಯೇ ನಿಂತುಕೊಂಡನು. ಆ ಮೇಲೆ ಸಮರಸಿಂಹನ ಕಿವಿಯಲ್ಲಿ ಆತನು ಹೀಗೆ ಹೇಳಿದನು. “ ಸಮರಾ, ನೀನಿನ್ನು ಹೊರಡು. ಹೋಗುವಾಗ ಅಜಯನನ್ನು ಶಿಬಿರಕ್ಕೆ ಹಿಡಿದುಕೊಂಡು ಹೋಗು. ಹೋದ ಕೂಡಲೆ ನೂರು ದಂಡಾಳುಗಳನ್ನು ನನ್ನ ಕಡೆಗೆ ಕಳಿಸಿಕೊಡಬೇಕೆಂದು ದಳಪತಿಗೆ ತಿಳಿಸು. ನೀವು ಬೆಳಗಾಗುವುದರೊಳಗಾಗಿಯೇ ಇಲ್ಲಿಗೆ ಬಂದು ಮುಟ್ಟುವ ಹಾಗೆ ಮಾಡಿರಿ. ಸಮೀಪದ ವನಪ್ರದೇಶದಲ್ಲಿ ಸವಾರರು ಅಡಗಿಕೊಂಡು ನಿಲ್ಲುವಂತೆ ವ್ಯವಸ್ಥೆ ಮಾಡೆಂದು ಸೇನಾಪತಿಗೆ ನನ್ನ ನಿರೋಪವನ್ನು ಹೇಳು. ನೀನಿನ್ನು ಹೊರಡು. ನನ್ನ ವಿಷಯಕ್ಕೆ ಯಾವತರದ ಚಿಂತೆಯನ್ನೂ ಮಾಡಬೇಡ. ” ಸಮರಸಿಂಹನು ಕುಮಾರನಿಗೆ ಪ್ರಣಾಮ ಮಾಡಿ ಮಾತನಾಡಿದನು. * ತಮ್ಮ ಅಪ್ಪಣೆಯಂತೆ ಎಲ್ಲವನ್ನೂ ಮಾಡುತ್ತೇನೆ. ತಾವು ಮಾತ್ರ ಇನ್ನು ವಿಲಂಬ ಮಾಡಬೇಡರಿ.” ಸ್ನೇಹಭರದಿಂದ ಒಮ್ಮೆ ಸಮರನನ್ನು ನೋಡಿ ಕುಮಾರನು ದುರ್ಗವನ್ನು ಪ್ರವೇಶಿ ಸಿದನು. ತತ್‌ಕ್ಷಣದಲ್ಲಿಯೇ ಈಷತ್ತಾದರೂ ಸದ್ದಾಗದಂತೆ ಆ ಗುಪ್ತದ್ವಾರವು ಮುಚ್ಚ ಲ್ಪಟ್ಟಿತು. ಕರ್ಮಧರ್ಮಸಂಯೋಗವು ಎಷ್ಟೊಂದು ವಿಲಕ್ಷಣವಾಗಿರುತ್ತದೆ ನೋಡಿರಿ ! ಯಾವ ರಾತ್ರಿಯಲ್ಲಿ ಕುಮಾರ ಕರುಣಸಿಂಹನು ಗುಪ್ತವಾಗಿ ಶತ್ರುಗಳ ದುರ್ಗವನ್ನು ಪ್ರವೇಶಿಸಿದನೋ, ಅದೇ ರಾತ್ರಿಯಲ್ಲಿ ದುರ್ಗಾಧಿಪತಿಯಾದ ಭೀಮಸಿಂಹನು ಸರತಾನ ಸಿಂಹನನ್ನೂ, ದುರ್ಜಯಸಿಂಹನನ್ನೂ ಸಂಗಡ ಕರೆದುಕೊಂಡು ದುರ್ಗದ ಕಡೆಗೆ ನಡೆ ದಿದ್ದನು. ದುರ್ಜಯಸಿಂಹನೊಡನೆ ಲಲಿತೆಯ ವಿವಾಹ ಮಾಡುವದು ನಿಶ್ಚಿತವಾಗಿ ಆ ಸಂಬಂಧದ ನಿಬಂಧನೆಗಳೆಲ್ಲವೂ ಗೊತ್ತು ಮಾಡಲ್ಪಟ್ಟಿದ್ದವು. ಭೀಮಸಿಂಹನು ಭಾವಿ ಚಾಮಾತೃವನ್ನೂ ಬೀಗನನ್ನೂ ಆಗ್ರಹದಿಂದ ತನ್ನ ಸಂಗಡಲೇ ಕರೆದುಕೊಂಡು ಬಂದಿದ್ದನು. ದುರ್ಗದ ಸಮೀಪದ ವನಪ್ರದೇಶದಲ್ಲಿ ಬಂದೊಡನೆಯೇ ಅಜಯನ ಹೇತವು ಅವರ ಕಿವಿಗೆ ಬಿತ್ತು. ಕೂಡಲೆ ಆ ಮೂವರ ಲಕ್ಷವು ಅತ್ತ ಕಡೆಗೇ ಹೋಯಿತು ದುರ್ಗದ ಸಮೀಪದಲ್ಲಿ ಇಂತಹ ರಾತ್ರಿಯಲ್ಲಿ ಸುಂದರವಾದ ಉತ್ತಮಾಶ್ವವು ಕಟ್ಟಲ್ಪಟ ರುವುದನ್ನು ನೋಡಿ ಭೀಮಸಿಂಹನ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಚಾರಗಳು ಹುಟ್ಟಿದುವು. ಇಂತಹ ವೇಳೆಯಲ್ಲಿ ಈ ಕುದುರೆಯನ್ನು ಇಲ್ಲಿ ಕಟ್ಟಲು ಕಾರಣವೇನು ? ಯಾರು ಕಟ್ಟಿರಬಹುದು ? ಎಂಬುದಾಗಿ ಎಷ್ಟು ಯೋಚಿಸಿದರೂ ದುರ್ಗಪತಿಗೆ ಯಾವುದೂ ಗೊತ್ತಾಗಲಿಲ್ಲ. ಭೀಮಸಿಂಹನಿಗೆ ಅನೇಕ ಶತ್ರುಗಳಿದ್ದು ಅವರು ಭೀಮಸಿಂಹನಿಗೆ ಅಹಿತ