ಪುಟ:ಪ್ರೇಮ ಮಂದಿರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. ೪೫ ನಿಗೆ ಗೊತ್ತಾಗಲಿಲ್ಲ! ಅವನು ನಿಂತ ಸ್ಥಳದಿಂದ ಟಣ್ಣನೆ ಹಾರಿ ಆ ಸ್ತ್ರೀಯ ಮುಂದೆ ನಿಂತುಕೊಂಡು ಕಂಪಿತಸ್ವರದಿಂದ ಮಾತನಾಡಿದನು. ( ಪಾಪಿಣೀ, ನಿನಗೆ ಜೀವದ ಆಶೆಯಿಲ್ಲವೇನು ? ಪ್ರಸಂಗಬಂದರೆ ಈ ನಿರ್ಜನವನಪ್ರದೇಶದಲ್ಲಿ ಅಬಲೆಯ ರಕ್ತದಿಂದ ತನ್ನ ಕತ್ತಿಯನ್ನು ಕಲಂಕಿತ ಮಾಡಲು ಈ ಭೀಮಸಿಂಹನು ಹಿಂದೆಮುಂದೆ ನೋಡ ನೆಂಬುದನ್ನು ಚನ್ನಾಗಿ ನೆನಪಿನಲ್ಲಿಟ್ಟುಕೋ ! ” ತಿರಸ್ಕಾರದಿಂದ ನಕ್ಕು ಆ ಸ್ತ್ರೀಯು ಮಾತನಾಡಿದಳು. “ ನಿಜವೇ, ತಾವು ಅನ್ನುವುದು ತೀರ ಅಸಂಭವನೀಯವೇನೂ ಅಲ್ಲ! ಯಾವ ದುಷ್ಕರ್ಮವನ್ನು ಮಾಡುವು ದಕ್ಕೂ ಭೀಮಸಿಂಹನು ಹಿಂದೆಗೆಯುವುದಿಲ್ಲವೆಂಬದನ್ನು ಈ ಹತಭಾಗಿನಿಯು ಚನ್ನಾಗಿ ಬಲ್ಲಳು. ಆದರೆ ಈಗ ನನ್ನನ್ನು ಕೊಂದುಹಾಕುವುದಕ್ಕಿಂತ ಒಂದೆರಡು ಗಂಟೆಗಳ ವರೆಗೆ ಜೀವದಿಂದ ಇರಗೊಟ್ಟರೆ ಅದರಿಂದ ನಿಮಗೇ ಮಹದುಪಕಾರವುಂಟಾ ಗುವುದು. ” ಭೀಮಸಿಂಹನು ನಿಂತಲ್ಲಿಯೇ ನಿಂತನು. ಸ್ವಲ್ಪ ಶಾಂತನಾಗಿ ಅವನು ತನ್ನಲ್ಲಿಯೇ ಮಾತಾಡಿಕೊಂಡನು. * ನಿಜವಾಗಿಯೂ ನಾನು ಈ ಸಮಯದಲ್ಲಿ ಅವಿಚಾರದ ಕೆಲಸ ವನ್ನೇ ಮಾಡುತ್ತಿದ್ದೆನು. ” ಆಮೇಲೆ ಮಧುರಸ್ವರದಿಂದ ಆ ಸ್ತ್ರೀಯನ್ನು ಕುರಿತು ಪ್ರಕಾ ಶವಾಗಿ ಮಾತನಾಡಿದನು. ( ನೀನು ನನ್ನ ವಿಷಯವಾಗಿ ವಿಕಲ್ಪವನ್ನು ತಿಳಿದುಕೊಳ ಬೇಡ. ರಾಜಧರ್ಮವನ್ನು ಪಾಲಿಸುವುದಕ್ಕೋಸ್ಕರ ನಾನು ಯಾವಾಗಲೂ ಜಾಗರೂಕ ನಾಗಿರಬೇಕಾದುದರಿಂದ ನಿನ್ನೊಡನೆ ಇಂತಹ ಕಠೋರ ರೀತಿಯಿಂದ ವರ್ತಿಸಿದೆನು. ಇರಲಿ, ಕರುಣಸಿಂಹನು ಇಂತಹ ಸಮಯದಲ್ಲಿ ನನ್ನ ದುರ್ಗದಲ್ಲಿ ಏಕೆ ಪ್ರವೇಶಿಸಿ ದ್ದಾನೆಂಬುದನ್ನು ಮೊದಲು ಹೇಳು, ಆತನು ಒಬ್ಬನೇ ಹೋಗಿದ್ದಾನೆಯೋ? ಅಥವಾ ಅವನ ಸಂಗಡ ಅವನ ಜನರು ಇರುತ್ತಾರೆಯೋ ? ” << ಅವರು ಒಬ್ಬರೇ ಹೋಗಿದ್ದಾರೆ. ಕರುಣಸಿಂಹರು ಸಿಂಹನ ಮಕ್ಕಳಾದುದರಿಂದ ಅವರಿಗೆ ಯಾರ ಭಯವೂ ಇಲ್ಲ ! ” ಭೀಮಸಿಂಹನು ಹಲ್ಲುಗಳಿಂದ ಅಧರೋಷವನ್ನು ಕಟ್ಟಿದನು. ಆದರೂ ಶಾಂತ ಸ್ವರದಿಂದಲೇ ಪುನಃ ಮಾತನಾಡಿದನು. ( ಹೀಗೋ, ಹಾಗಾದರೆ ಆತನು ದುರ್ಗದಲ್ಲಿ ಪ್ರವೇಶಮಾಡಲು ಕಾರಣವೇನು ? ” ಒಂದು ದೀರ್ಘ ವಿಶ್ವಾಸವನ್ನು ಬಿಟ್ಟು ಅವಳು ಮಾತನಾಡಿದಳು. “ ಮಹಾರಾಜ ರೇ, ಅದನ್ನು ತಮಗೆ ತಿಳಿಸುವುದಕ್ಕೋಸ್ಕರವೇ ನಾನಿಲ್ಲಿ ಬಂದಿದ್ದೇನೆ. ಆದರೆ ನಾನು ಮುಂದೆ ಹೇಳತಕ್ಕುದನ್ನು ಕೇಳುವ ಮೊದಲು ನೀವು ಒಂದು ಪ್ರತಿಜ್ಞೆಯನ್ನು ಮಾಡ ತಕ್ಕದ್ದು. ದೇವದೇವತೆಗಳ ವಿಷಯವಾಗಿ ತಮ್ಮಲ್ಲಿ ಪೂಜ್ಯ ಬುದ್ದಿಯು ಇರುವದೋ