ಪುಟ:ಪ್ರೇಮ ಮಂದಿರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. ಸ್ವಲ್ಪ ಹೊತ್ತಿನ ಮೇಲೆ ಕರುಣಸಿಂಹನು ಆತನ ಎದುರಿಗೆ ಬಂದು ನಿಂತನು. ಆದರೆ ಭೀಮಸಿಂಹನಿಗೆ ಆತನು ಪ್ರಣಾಮ ಮಾಡಲಿಲ್ಲ. ಭೀಮಸಿಂಹನು ಪ್ರಯತ್ನ ಪೂರ್ವಕ ವಾಗಿ ಮುಖದಲ್ಲಿ ಹಾಸ್ಯವನ್ನು ತಂದುಕೊಂಡು ಮಾತನಾಡನು. (( ಕುಮಾರ ! ನಿನ್ನೆ ರಾತ್ರಿ ನಿಮಗೆ ಯಾವತರದ ಕೊರತೆಯೂ ಉಂಟಾಗಲಿಲ್ಲವಷ್ಟೆ? ವ್ಯವಸ್ಥೆಯೆಲ್ಲವೂ ಸರಿಯಾಗಿ ಇತ್ತೇ ? ೨೨ ಕುಮಾರನು ಗಂಭೀರತೆಯಿಂದ ಉತ್ತರವಿತ್ತನು. “ ಹೌದು ಎಲ್ಲ ವ್ಯವಸ್ಥೆಯೂ ಸರಿಯಾಗಿತ್ತು. ತಮ್ಮ ಆತಿಥ್ಯದಿಂದ ನಾನು ಸಂತುಷ್ಟನಾದೆನು. ” - ಕುಮಾರನು ಅಲ್ಲಿ ಬಂದಾಗಿನಿಂದಲೂ ಎದ್ದು ನಿಂತುಕೊಂಡಿದ್ದನು. ಭೀಮ ಸಿಂಹನು ಆತನಿಗೆ ಅಭ್ಯುತ್ಥಾನವನ್ನು ಕೊಡಲಿಲ್ಲ; ಇಷ್ಟೇ ಅಲ್ಲ; ಆಸನವನ್ನು ಕೂಡ ಕೊಡಲಿಲ್ಲ. ಭೀಮಸಿಂಹನ ಬಲಬದಿಯಲ್ಲಿ ಸರತಾನಸಿಂಹನೂ ಎಡಬದಿಯಲ್ಲಿ ದುರ್ಜ ಯಸಿಂಹನೂ ಕುಳಿತುಕೊಂಡಿದ್ದರು. ಆದರೂ ಅಲ್ಲಿ ಇನ್ನೊಂದು ಆಸನವು ತೆರನಾ ಗಿಯೇ ಇತ್ತು. ಹೀಗಿದ್ದರೂ ತಾನು ಅಲ್ಲಿ ಕುಳಿತುಕೊಳ್ಳುವಂತೆ ಭೀಮಸಿಂಹನು ವಿನಂತಿ ಮಾಡಿಕೊಳ್ಳಲಿಲ್ಲವೆಂಬುದು ಕರುಣಸಿಂಹನಿಗೆ ಹೇಗೆ ಹೇಗೋ ಎನಿಸಹತ್ತಿತ್ತು, ಮಾನ ದಲ್ಲಿಯಾಗಲಿ, ವಂಶಮರ್ಯಾದೆಯಲ್ಲಾಗಲಿ ಭೀಮಸಿಂಹನಿಗಿಂತ ತಾನು ಲವಮಾತ್ರ ವಾದರೂ ಕಡಿಮೆಯವನಾಗಿರದಿದ್ದರೂ, ಆತನು ತನ್ನೊಡನೆ ಹೀಗೆ ಉದ್ದಾಮತನದಿಂದ ವರ್ತಿಸಿದುದು ತನ್ನನ್ನು ಅಪಮಾನಗೊಳಿಸುವುದಕ್ಕಾಗಿಯೇ ಎಂದು ಆತನು ತಿಳಿದು ಕೊಂಡನು! ಕರುಣಸಿಂಹನ ಹೃದಯವು ಈ ಅಪಮಾನವಷ್ಟಿಯಿಂದ ಸುಡಹತ್ತಿತು. ಕರುಣಸಿಂಹನನ್ನು ತೀವ್ರದೃಷ್ಟಿಯಿಂದ ನೋಡಿ ಭೀಮಸಿಂಹನು ಗಂಭೀರಸ್ವರ ದಿಂದ ಮಾತನಾಡಿದನು. ( ಕುಮಾರ ! ನೀವು ಉಚ್ಛ ಕುಲದಲ್ಲಿ ಜನ್ಮತಾಳಿದ ರಜ ಪೂತ ವೀರರು; ದಿಲೀಪತಿಯ ವಿಶ್ವಾಸಕೃಪೆಗಳಿಗೆ ಪಾತ್ರರಾದ ಪ್ರಮುಖ ಸೇನಾಪತಿ ಗಳು ! ಹೀಗಿದ್ದು ಹೇಡಿಯಂತೆಯೂ ಕಳ್ಳನಂತೆಯೂ ನೀವು ನನ್ನ ದುರ್ಗವನ್ನು ಏಕೆ ಪ್ರವೇಶಿಸಿದಿರಿ ? ಕರುಣಸಿಂಹ, ದಿಲೀಪತಿಯು ಇಂತಹ ಅಪಮಾನಾಸ್ಪದವಾದ ಚೋರ ತನದ ಕೆಲಸಗಳಿಗಾಗಿ ತನ್ನ ನವೀನ ಸೇನಾಪತಿಗೆ ಶಾಬಾಸಕಿಯನ್ನೇ ಕೊಡುತ್ತಾ ನೆಂದು ನೀವು ತಿಳಿದಿರುವಿರೋ ? ” ಅಪಮಾನದ ಮೇಲೆ ಅಪಮಾನ! ಕುಮಾರನ ಸಂತಾಪವು ಈಗ ಹೃದಯದಲ್ಲಿ ಹಿಡಿಸದಾಯಿತು ! ಆದರೂ ಒಳ್ಳೇ ಕಷ್ಟದಿಂದ ಅದನ್ನು ನುಂಗಿಕೊಂಡು ಕರುಣ ಸಿಂಹನು ಮಾತನಾಡಿದನು. “ ನನ್ನ ಸಮಾನನಂತೆ ಮನಕೊಟ್ಟು ನಿಮ್ಮ ಪ್ರಶ್ನೆಗಳಿಗೆ ಉತ್ತರವೀಯಲು ನನ್ನ ಇಚ್ಛೆಯಿಲ್ಲ; ಮತ್ತು ಇದಕ್ಕೆ ಇನ್ನೂ ಅನೇಕ ಕಾರಣಗಳಿವೆ. ಆದರೆ ಒಂದು ಮಾತನ್ನು ಮಾತ್ರ ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ನಾನು ನಿಮ್ಮ ಹೌದು ಸದ್ಯಕ್ಕೆ ನಿಮ್ಮ ದೇ-ದುರ್ಗದಲ್ಲಿ ತುಡುಗನಂತೆ ಬಂದು ಸೇರಿಕೊಳ್ಳಲಿಲ್ಲ.