ಪುಟ:ಪ್ರೇಮ ಮಂದಿರ.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ. hr shr\ + 1 hit ht! #w ಆತನ ಪ್ರಫುಲ್ಲವಾದ ಮುಖಮಂಡಲವನ್ನು ನೋಡಿದರೆ, ಸದ್ಯಕ್ಕೆ ಆತನಿಗೆ ಯಾವದಾದ ರೊಂದು ಸುಖಸ್ವಪ್ನವು ಬಿದ್ದಿರಬಹುದೆಂದು ಯಾರಿಗಾದರೂ ತಿಳಿಯುವಂತಿತ್ತು. - ಇಷ್ಟರಲ್ಲಿ ಲಲಿತೆಯು ಮೆಲ್ಲನೆ ಅಲ್ಲಿಗೆ ಬಂದಳು. ಕರುಣಸಿಂಹನು ಇನ್ನೂ ಮಲ ಗಿದ್ದನು. ರಾಜಕನ್ಯಯು ಮೆಲ್ಲನೆ ಬಂದು ಕರುಣಸಿಂಹನ ಕಾಲೈಸೆಗೆ ಮಂಚದ ಮೇಲೆ ಕುಳಿತುಕೊಂಡಳು. ಆಕೆಯು ಬಹಳ ಹೊತ್ತಿನವರೆಗೆ ಕುಳಿತುಕೊಳ್ಳಬೇಕಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಕುಮಾರನಿಗೆ ಎಚ್ಚರವಾಯಿತು. ಆತನು ಕರೆದು ನೋಡುವ ಷ್ಟರಲ್ಲಿ ಸಮೀಪದಲ್ಲಿಯೇ ಲಲಿತೆಯನ್ನು ಕಂಡನು. ಕುಮಾರನು ಅತ್ಯಂತ ಪ್ರಸನ್ನ ಹೃದಯದಿಂದ ಲಲಿತೆಯನ್ನು ಕೇಳಿದನು, ಏ ಲಲಿತೇ, ಇದೇನು ? ಈ ಸಮಯದಲ್ಲಿ ಇತ್ತ ಕಡೆಗೆ ಬಂದು ಬಿಟ್ಟೆ ! ಭೀಮಸಿಂಹರ ವರು ನನಗೆ ಭೆಟ್ಟಿಯಾಗುವದಕ್ಕೋಸ್ಕರ ನಿನ್ನನ್ನು ಇತ್ತ ಕಡೆಗೆ ಕಳಿಸಿಕೊಟ್ಟರೇನು ? ” ಕುಮಾರನ ಊಹೆಯು ನಿಜವಾಗಿತ್ತು. ಈ ಕಾಲದಲ್ಲಿ ಭೀಮಸಿಂಹನೇ ಕರುಣ ಸಿಂಹನ ಆತಿಥ್ಯಕ್ಕೋಸ್ಕರವಾಗಿ ಲಲಿತೆಯನ್ನು ಕಳುಹಿಸಿದ್ದನು. ಕುಮಾರನ ಪ್ರಶ್ನೆಗೆ ಏನೂ ಉತ್ತರವನ್ನು ಕೊಡದೆ ಲಲಿತೆಯು ಮೊಗವನ್ನು ತಗಿ ಸಿಕೊಂಡು ನಿಂತುಕೊಂಡಳು. ಕುಮಾರನು ಪ್ರೇಮಭರದಿಂದ ಮತ್ತೆ ಲಲಿತೇ, ” ಎಂದು ಕರೆದನು. ಲಲಿತೆಯ ಸ್ವಭಾವವು ಇಂದು ಹಾಗೆ ಏಕೆ ಆಗಿತ್ತೋ ಏನೋ! ಯಾರಿಗೆ ಗೊತ್ತು! ಅವಳು ಹೆಚ್ಚಾಗಿ ಏನೂ ಮಾತಾಡಲಿಲ್ಲ. ಗದ್ಧದ ಸ್ವರದಿಂದ ( ಕುಮಾರ- ಎಂಬ ಶಬ್ದ ಮಾತ್ರವು ಅವಳ ಮುಖದಿಂದ ಹೊರಟಿತು, ಆಕೆಯ ಕಣ್ಣುಗಳೊಳಗಿಂದ ಅಶ್ರುಪ್ರವಾಹವು ಸುರಿಯಹತ್ತಿತು, ಕರುಣಸಿಂಹನಿಗೆ ಲಲಿತೆಯು ಹೀಗೇಕೆ ವರ್ತಿಸು ತಾಳೆಂಬುದು ತಿಳಿಯದಾಯಿತು. ಚಟಕ್ಕನೆ ಎದ್ದು ತನ್ನ ಉತ್ತರೀಯ ವಸ್ತ್ರದಿಂದ ಆಕೆ ಯ ಅಶ್ರುಗಳನ್ನು ಒರಸಿ ಪ್ರೇಮಸೂಚಕ ಸ್ವರದಿಂದ ಮಾತನಾಡಿದನು. ( ಛೇ! ಛೇ! ಲಲಿತೇ, ಇಂದು ನೀನು ಹೀಗೇಕೆ ಮಾಡುತ್ತಿರುವೆ? ಈ ಕಾಲದಲ್ಲಿ ನಿನ್ನ ಕಣ್ಣಳಗೆ ಅಮಂಗಲವಾದ ಅಶ್ರುಗಳೇಕೆ? ಈ ಹೊತ್ತಿನಂತಹ ಶುಭದಿವಸದಲ್ಲಿ ಹೀಗೆ ಕಣ್ಣೀರು ಗಳನ್ನು ಸುರಿಸುವುದು ನಿನ್ನಂತಹ ರಜಪೂತ ಕನೈಗೆ ಉಚಿತವಾದುದೇ ? ಕುಮಾರನ ಈ ಪ್ರೇಮಪೂರ್ಣ ಶಬ್ದಗಳಿಂದಲೂ ಲಲಿತೆಯ ಅಶ್ರುಪ್ರವಾಹವು ಕಟ್ಟಾಗಲಿಲ್ಲ. ಮುಖವನ್ನು ಕೆಳಗೆ ಬಗ್ಗಿಸಿ ಅವಳು ಒಂದೇಸಮನೆ ಕಣ್ಣೀರು ಸುರಿಸುತ್ತಿ ದ್ದುದನ್ನು ನೋಡಿ ಕರುಣಸಿಂಹನಿಗೆ ಕಸವಿಸಿಯಾಯಿತು. ಮತ್ತೊಮ್ಮೆ ಆಕೆಯ ಅಶ್ರು ಗಳನ್ನು ಒರಸಿ ಕುಮಾರನು ಪ್ರೇಮದಿಂದ ಮಾತನಾಡಿದನು. (( ಲಲಿತೇ, ಏನಿದು ? ಈ ಪ್ರಕಾರ ಅಮಂಗಲವಾದ ಕಣ್ಣೀರುಗಳನ್ನು ಇಂದು ಸುರಿಸುವುದಕ್ಕೆ ಕಾರಣವಾ ದರೂ ಏನು ? ಹೇಳು, ”