ಪುಟ:ಪ್ರೇಮ ಮಂದಿರ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ. M ಇಷ್ಟರಲ್ಲಿ ಯಾರೋ ಒಬ್ಬರು “ ಭೀಮಸಿಂಹಾ! ” ಎಂದು ದೊಡ್ಡ ದನಿಯಿಂದ ಒದರಿದರು ? ಆದರೆ ದುರ್ಗಪತಿಗೆ ಆ ಕೂಗು ಕೇಳಿಸಲಿಲ್ಲ. ಆದುದರಿಂದ ಪರ್ವತ ಪ್ರದೇಶ ವೆಲ್ಲ ಪ್ರತಿಧ್ವನಿತವಾಗುವಂತಹ ಕಠೋರಸ್ವರದಿಂದ ಅದೇ ಶಬ್ದವು ಮತ್ತೆ ಕೇಳಿಸಿತು. ( ಭೀಮಸಿಂಹಾ ! ” ಹತಭಾಗಿಯಾದ ಭೀಮಸಂಹನು ಆತ್ಮವಿಚಾರದೊಳಗಿಂದ ಒಮ್ಮೆಲೆ ಎಚ್ಚತ್ರನು ಕಣ್ಣೆರೆದು ನೋಡಿದನು. ಪುಷ್ಯ ದೇಹಿಯಾದ ಒಬ್ಬ ಸನ್ಯಾಸಿಯ ಸೌಮ್ಯಮೂತಿ ಯಾದ ಒಬ್ಬ ತರುಣನೀರನೂ ಆತನ ಎದುರಿನಲ್ಲಿ ನಿಂತುಕೊಂಡಿದ್ದರು. ಕೋಪದೃಷ್ಟಿ ಯಿಂದ ಭೀಮಸಿಂಹನನ್ನು ನೋಡುತ್ತ ಆ ವೀರಪುರುಷನು ಕ್ರುದ್ದ ಸ್ವರದಿಂದ ಮಾತನಾ ಡಿದನು. (( ಅಧಮಾ! ಚಾಂಡಾಲಾ !! ನನ್ನ ಕರುಣಸಿಂಹನು ಎಲ್ಲಿ ? ” ದುರ್ಗಾಧಿಪತಿಯು ಸಬ್ದನಾದನು; ನಿಶ್ಚಲನಾದನು; ಅವನ ಬಾಯಿಂದ ಶಬ್ದ ಗಳು ಹೊರಡಲಿಲ್ಲ. ಅವನ ಶಕ್ತಿಯೆಲ್ಲವೂ ಲೋಪವನ್ನು ಹೊಂದಿತು; ಸರ್ವಶರೀರವು ನಡುಗಹತ್ತಿತು; ಹೃದಯವು ಶೂನ್ಯವಾಯಿತು; ಆತನ ದೃಷ್ಟಿಯೊಳಗಿನ, ಚೈತನ್ಯವು ನಷ್ಟವಾಯಿತು; ಆತನ ಕಣ್ಣಳಗಿನ ಬಾಷ್ಪಸಂಗ್ರಹವು ಕೂಡ ಬರಿದಾಯಿತು? ಆ ವೀರಪುರುಷನು ಯಾರೆಂಬದು ಭೀಮಸಿಂಹನಿಗೆ ಆಗಲೇ ಗೊತ್ತಾಯಿತು. ಕೂಡಲೇ ಆತನು ಆ ವೀರನ ಪಾದಗಳಿಗೆ ಸಾಷ್ಟಾಂಗವಾಗಿ ಎರಗಿದನು. « ಭೀಮಸಿಂಹ, ನನ್ನ ಕರುಣನು ಎಲ್ಲಿ? ” (1 ಜಹಾಪನಾಹ ಈ ದಾಸನನನ್ನು ಕ್ಷಮಿಸಿರಿ, ಇದೋ ನೋಡಿರಿ. ನಿಮ್ಮ ಪ್ರಿಯ ಸೇನಾಪತಿಯಾದ ಕರುಣಸಿಂಹನು ! ಮತ್ತು ಇವಳೇ ನ-ನನ್ನ ಲಲಿತಯ ! ಹಾಯ ! ಹಾಯ ! ತಾವು ಒಂದು ಗಳಿಗೆಗೆ ಮುಂಚೆಯೇ ಬಂದಿದ್ದರೆ...! " ಸೌಮ್ಯಮೂರ್ತಿಯಾದ ತರುಣವೀರನು ಬೇರೆ ಯಾವನೂ ಆಗಿರದೆ ದಿಲೀಪ ಯಾದ ಅಕಬರಬಾದಶಹನೇ ಆಗಿದ್ದನು. ಕರುಣಸಿಂಹನು ಸಂಕಟದಲ್ಲಿ ಸಿಕ್ಕಿರುವ ಸುದ್ದಿಯನ್ನು ಕೃಷ್ಣಾ ಕುಮಾರಿಯು ಚಂದ್ರಚೂಡನಿಗೆ ತಿಳಿಸಿದಳು. ಕರುಣಸಿಂಹನು ಬಿಡುಗಡೆ ಹೊಂದಬೇಕಾದರೆ ಅಕಬರಬಾದಶನ ಹೊರತು ಗತ್ಯಂತರವಿಲ್ಲವೆಂದು ಭಾವಿಸಿ ಚಂದ್ರಚೂಡನು ಸಮೀಪದಲ್ಲಿಯೇ ಬೀಡಾರವನ್ನು ಹೊಡೆದಿದ್ದ ಅಕಬರನಿಗೆ ಈ ವೃತ್ತಾಂತವನ್ನು ತಿಳಿಸಿದನು. ಆ ಮೇಲೆ ಇಬ್ಬರೂ ಕೂಡಿ ಕರುಣಸಿಂಹನನ್ನು ಬಿಡಿ ಸುವುದಕ್ಕಾಗಿ ದುರ್ಗಕ್ಕೆ ಬಂದರು. ಆದರೆ ಹಾಯ! ಹಾಯ ! ಅವರು ಬರುವುದರೊಳ ಗಾಗಿಯೇ ಕಥೆಯಲ್ಲ ಮುಗಿದು ಹೋಗಿತ್ತು !!!