ಪುಟ:ಪ್ರೇಮ ಮಂದಿರ.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ, JMvvvvvvv

  1. Y\\# # # 1 # # # # ೪ * *

\ \ + 1 1 1 1 1 1 # #\ \/\ Y /\/y Vys Y! # ನಿಂದ ಬಿದ್ದ ತಮ್ಮನಿಗಿಂತಲೂ ಹೆಚ್ಚು ಪ್ರೀತಿಯವನಾಗಿದ್ದನು. ಚಂದ್ರಚೂಡರೇ ? ಕರು ಣನ ಸುಕುಮಾರ ದೇಹಕ್ಕೆ ಕಿಂಚಿದಾಘಾತವಾದರೆ ಅದರಿಂದ ನನ್ನ ಹೃದಯಕ್ಕೆ ಅತ್ಯಂತ ವೇದನೆಯಾಗುತ್ತಿತ್ತು; ಹೀಗಿದ್ದು ಚಿತಾಗ್ನಿಯ ಜ್ವಾಲೆಯಿಂದ ಈ ದೇಹವು ಉರಿಯುತ್ತಿರುವಾಗ ಈ ಪಾಪಿಷ ವಾದ ಕಣ್ಣುಗಳಿಂದ ಅದನ್ನು ನಾನು ಹೇಗೆ ನೋಡಲಿ !!! ಅಲ್ಪಾವಕಾಶದಲ್ಲಿಯೇ ಪ್ರಮೋದಭವನದ ಎದುರಿನ ಪರ್ವತಪ್ರದೇಶವು ಘೋರ ಸ್ಮಶಾನದ ರೂಪವನ್ನು ಹೊಂದಿತು. ಲಲಿತಕರುಣಸಿಂಹರ ಚಿತಗಳು ಚಟಚಟ್ ? ಎಂದು ಧ್ವನಿಮಾಡುತ್ತ ಹೊತ್ತಲಾರಂಭಿಸಿದುವು. ಆ ಚಿತಗಳ ಆಕಾಶಭೇದಕವಾದ ಜ್ವಾಲೆಯಿಂದ ದಿಂಡಲವೆಲ್ಲ ಕೆಂಪಾಗಿ ಹೋಯಿತು. ಕಡಕಡಾಟವನ್ನು ಮಾಡುತ್ತ ಚಿತಾಗ್ನಿಯು ಆ ಪ್ರಣಯಿಯುಗಲದ ಪಾರ್ಥಿವದೇಹಗಳನ್ನು ಭಸ್ಮಗೊಳಿಸುತ್ತಿತ್ತು! ಇನ್ನೂ ಸ್ವಲ್ಪ ಹೊತ್ತು ಕಳೆದು ಹೋಯಿತು. ಚಿತಾಗ್ನಿಯು ಇನ್ನೂ ಹೊಂದಿ ಶಾಂತವಾಗಿದ್ದಿಲ್ಲ. ಅದರ ಉದ್ದಾಮತೆಯು ಬಹುಮಟ್ಟಿಗೆ ಕಡಿಮೆಯಾಗಿದ್ದರೂ, ಕೈಗೆ ಸಿಕ್ಕ ಪದಾರ್ಥಗಳನ್ನು ನುಂಗುವುದಕ್ಕಾಗಿ ಅದು ಇನ್ನೂ ತನ್ನ ಜ್ವಾಲಾರಸನೆಗಳನ್ನು ಚಾಚುತ್ತಲೇ ಇತ್ತು. ಅದರ ಹೊಗೆಯು ಇನ್ನೂ ಕುಂಡಲಾಕಾರವನ್ನು ಹೊಂದಿ ಆಕಾಶ ವೆಲ್ಲವನ್ನೂ ವ್ಯಾಪಿಸುತ್ತಿತ್ತು. - ಈ ಭಯಂಕರವಾದ ಸಮಯದಲ್ಲಿ ಕಾವಿಯ ಬಟ್ಟೆಯನ್ನುಟ್ಟುಕೊಂಡು ಸುವರ್ಣ ಕಲಶವನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬ ತರುಣ ಭೈರವಿಯು ಅಲ್ಲಿಗೆ ಬಂದಳು. ಅರ್ಧದಗ್ಗವಾದ ಚಿತೆಯನ್ನು ಅನಿಮಿಷನೇತ್ರಗಳಿಂದ ನೋಡುತ್ತ ನಿಂತುಕೊಂಡಳು. ಉನ್ಮಾದಗ್ರಸ್ತಳಾದ ಭ್ರಮಿಷ್ಠೆಯಂತೆ ಅವಳು ಓಡುತ್ತೊಡುತ್ತ ಚಿತೆಯ ಹುರಕ್ಕೆ ಬಂದು ಕೈಯೊಳಗಿನ ಕಲಶದಲ್ಲಿದ್ದ ಕ್ಷೀರವನ್ನು ಚಿತೆಯ ಮೇಲೆ ಸೇಚನಮಾಡಿ ಆ ಪವಿತ್ರಚಿತೆಯ ಅಂತಿಮಾಗ್ನಿ ಸ್ಟಲಿಂಗವನ್ನು ನಿಂದಿಸಿದಳು, ಆ ಭೈರವಿಯ ಮೂರ್ತಿಯು ಅತ್ಯಂತ ಶಾಂತವಾಗಿತ್ತು, ಚಂಚಲತೆಯ ಸ್ಪರ್ಶವೇ ಅವಳಿಗಾಗಿದ್ದಿಲ್ಲ. ಹೃದಯದಲ್ಲಿ ಭೀತಿಯು ಎಳ್ಳಷ್ಟಾದರೂ ಇದ್ದಿಲ್ಲ. ಆಕೆಯು ಚಿತೆಗೆ ತೀರ ಸಮೀಪದಲ್ಲಿ ನಿಂತುಕೊಂಡು ಅದಕ್ಕೆ ನಮಸ್ಕರಿಸಿ ಮಾತನಾಡಿದಳು, « ಸಾಧೀ ಲಲಿತೇ! ನೀನು ನಿನ್ನ ಕೃತಿಯಿಂದ ನಿಜವಾಗಿಯೂ ಸ್ತ್ರೀಜಾತಿಯನ್ನು ಧನ್ಯವಾಗಿ ಮಾಡಿದೆ. ಈಗ ನೀನು ಸ್ವರ್ಗದಲ್ಲಿ ಮಣಿಖಚಿತವಾದ ಸಿಂಹಾಸನದ ಮೇಲೆ ಹೃದಯ ವಲ್ಲಭನ ಅರ್ಧಾಂಗಿಯಾಗಿ ಕುಳಿತುಕೊಂಡಿರಬಹುದು. ಲಲಿತೇ! ಪತಿಯೊಡನೆ ಸಹ ಗಮನ ಮಾಡಿ ನೀನು ಚಿರಕಾಲಿಕವಾದ ಶಾಂತಿಯನ್ನು ಹೊಂದಿದೆ. ಅಭಾಗಿನಿಯಾದ ನಾನಾದರೋ ಜೀವದಿಂದಿದ್ದರೂ ನರಕವಾಸವನ್ನು ಅನುಭವಿಸುತ್ತಲಿದ್ದೇನೆ. ಸತೀ ಕುಲಶಿರೋಮಣಿಯಾದ ಲಲಿತೇ! ಅಮರಧಾಮದಲ್ಲಿ ಹೃದಯೇಶ್ವರನೊಡನೆ ಪ್ರೇಮ