ಪುಟ:ಪ್ರೇಮ ಮಂದಿರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ ಷಣ, we ರಾಜ್ಯವನ್ನು ಚಿರಕಾಲ ಉಪಭೋಗಿಸು. ನಿಮ್ಮಿಬ್ಬರಿಗೂ ಇನ್ನೆಂದೆಂದಿಗೂ ನಿಯೋಗ ವಾಗದಿರಲಿ! ೨೨ ಭೈರವಿಯ ಕಣ್ಣಳಗಿಂದ ಅಶ್ರುಗಳು ಸುರಿಯಹತ್ತಿದುವು. ಆಕೆಯು ಪುನಃ ಮಾತನಾಡಿದಳು. ಕರುಣಸಿಂಹರೇ, ಹೃದಯೇಶ್ವರರೇ ಇಷ್ಟು ದಿವಸಗಳ ವರೆಗೆ ನಾನು ಹೃದಯೇಶ್ವರರೆಂದು ಬಹಿರಂಗವಾಗಿ ಕರೆದಿದ್ದಿಲ್ಲ. ಆದರೆ ಇಂದು ಈ ನಿರ್ಜನ ಸ್ಮಶಾನದಲ್ಲಿ ಉಚ್ಚಸ್ವರದಿಂದ “ ಹೃದಯೇಶ್ವಠಾ !' ಎಂದು ನಿಮ್ಮನ್ನು ಕರೆಯುತ್ತಲಿ ದೇನೆ ಈ ಜನ್ಮದಲ್ಲಂತೂ ನೀವು ನನಗೆ ಲಭಿಸಲಿಲ್ಲ. ನಾನು ಸತ್ತೇ ಹೊರತು ನೀವು' ಸಿಕ್ಕಲಾರಿರೆಂಬುದನ್ನೂ ನಾನು ತಿಳಿದಿದ್ದೇನೆ. ಲಲಿತೆಯು ಸಾಯುವುದಕ್ಕೆ ಸಿದ್ಧಳಾದದ ರಿಂದಲೇ ನಿಮ್ಮ ಲಾಭವ' ಅದಳಗಾಯಿತು. ಆದುದರಿಂದ ನಾನಾದರೂ ಮರಣವ ೦ಗೀಕರಿಸಿ ಹೃದಯೇಶ್ವರನ ಲಾಭವನ್ನು ಮಾಡಿಕೊಳ್ಳುವೆನು ! " ಹೀಗೆಂದು ಭೈರವಿಯಾದ ಆ ಕೃಷ್ಣಾ ಕುಮಾರಿಯು ಆ ಪರ್ವತದ ಅತೈತ ವಾದ ಶಿಖರದ ಮೇಲೆ ಹೋಗಿ ನಿಂತುಕೊಂಡಳು. ಅಲ್ಲಿಂದ ಶಾಂತಳೂ ಶ್ಯಾಮಲೆಯೂ ಆದ ನಿಸಗಸುಂದರಿಯನ್ನು ನಿರೀಕ್ಷಿಸಿದಳು. ಚೆರಗಾದಳು ! ಎಲ್ಲೆಡೆಯಲ್ಲಿಯೂ ಅಂಧ: ಕಾರವೇ ಅವಳಿಗೆ ಗೋಚರವಾಯಿತು! ನರಕದೊಳಗಿನ ದಾರುಣದೃಶ್ಯವೇ ಈಗ ಅವಳ ಕಣ್ಣ ಮುಂದೆ ಕಟ್ಟಿದಂತಾಯಿತು. ಭಯಭೀತಳಾಗಿ ಪುನಃ ಮೇಲಕ್ಕೆ ನೋಡಿ ದಳು. ಲಲಿತಕರುಣಸಿಂಹರು ನಶ್ವರದೇಹಗಳನ್ನು ಪರಿತ್ಯಾಗಮಾಡಿ, ದಿವ್ಯದೇಹಗ ಇಂದ ಮಂಡಿತರಾಗಿ, ಒಬ್ಬರೊಬ್ಬರ ಕೈಯಲ್ಲಿ ಕೈಯನ್ನು ಹಾಕಿಕೊಂಡು, ಮೆಲ್ಲಮೆಲ್ಲನೆ ವಿನೋದದಿಂದ ವಿಹಾಶಮಾಡುತ್ತಲಿರುವುದು ಅವಳ ದೃಷ್ಟಿಗೆ ಬಿತ್ತು ಕೃಷ್ಣ ನೀಲ, ಶುದ್ರ, ರಕ್ತ ಮೊದಲಾದ : ವಿನಿಧವರ್ಣದ ಮೇಘಗಳು ಆ ಪ್ರೇಮಿಂಚುಗದ ಚರಣ ಗಳನ್ನು ನಮ್ರತೆಯಿಂದ ಚುಂಬಿಸುತ್ತಿರುವಂತೆಯೂ, ಉಜ್ವಲವಾದ ತಾರಕಗಳು ಅವರ ಸುತ್ತಲೂ ಕ್ರೀಡಿಸುತ್ತಿರುವಂತೆಯೂ ಕೃಷ್ಣಾ ಕುಮಾರಿಗೆ ಗೋಚರವಾಯಿತು. ಲಲಿತೆ ಯು ಮೇಘಮಂಡಲದೊಳಗಿಂದ ತನ್ನನ್ನು ಕುರಿತು ಈ ಪ್ರಕಾರ ಹೇಳುತ್ತಿರುವಂತೆ ಅವಳಿಗೆ ಕೇಳಿಸಿತು. “ ನೋಡು ಕೃ! ಕರುಣಸಿಂಹರು ನನ್ನವರು! ಜನ್ಯ ಜನ್ಮಾಂತರಗಳಲ್ಲಿಯೂ ಅಸಂತಕಾಲದವರೆಗೂ ಅವರು ನನ್ನ ವರಾಗಿಯೇ ಇರುವರು! ನೀನು ನಮ್ಮ ಸಂಗಡ ಬರಲಿಲ್ಲ. ಆದುದರಿಂದ ನೀನು ಅಲ್ಲಿಯೇ ಮರಣಪರ್ಯಂತವೂ ಶೋಕಾಗ್ನಿಯಿಂದ ಬೇಯುತ್ತ ಇರಬೇಕಾಗುವುದು! ಕೃಷ್ಣ! ನಮ್ಮವ್ವಾ, ಹೀಗೆಯೇ ಎಷ್ಟು ದಿವಸಗಳವರೆಗೆ ನೀನು ಬೆಂದು ಬೆಂಡಾಗುತ್ತಲಿರುವೆ? ” ಪರ್ವತಶಿಖರದ ಕೆಳಭಾಗದಲ್ಲಿ ತರಂಗಭಂಗಗಳಿಂದ ಪ್ರವಹಿಸುತ್ತಲಿರುವ ಸುನೀಲ ಮುಕ್ತಾವಲಿಯ ಮೃದುಮಂದವಾದ ಕರುಣಸಂಗೀತವು ಕುಮಾರಿಗೆ ಕೇಳಬರುತ್ತಿತ್ತು. ಆ ಅಂಧಕಾರದಲ್ಲಿಯೇ ಅವಳು ಕೆಳಗೆ ನೋಡಿದಳು,