ಪುಟ:ಪ್ರೇಮ ಮಂದಿರ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿದುದಕ್ಕಾಗಿ ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಅದರಂತೆ ಪ್ರಸ್ತುತ ಪುಸ್ತಕವನ್ನು ವಾಗ್ಯೂಷಣದ್ವಾರದಿಂದ ಪ್ರಕಟಿಸಿದುದಕ್ಕಾಗಿ ಈ ಸಂಘ ದವರಿಗೆ ಆಭಾರಿ ಯಾಗಿರುವೆನಲ್ಲದೆ, ಬಹುಮಾನವನ್ನು ಕೊಟ್ಟು ಈ ಕೆಲಸದಲ್ಲಿ ನನಗೆ ಹೆಚ್ಚಾದ ಹುರು « ಹುಟ್ಟಿಸುವರೆಂದು ನಂಬಿದ್ದೇನೆ. ಇನ್ನು ಮುಂದೆ ಭಾಸ ಮಹಾಕವಿಯ ಸಂಸ್ಕೃತ ನಾಟಕದ ಭಾಷಾಂತರದ CC ಕರ್ಣಾಟಿಕಸ್ವಪ್ನ ವಾಸವದತ್ತಂ ” ಎಂಬ ನಾಟಕ ರಸವನ್ನು ವಾಗ್ಯೂಷಣದ ವಾಚಕರ ಹೃದಯಪಾತ್ರದಲ್ಲಿ ಬಡಿಸಲು ಬರುವೆನೆಂಬುದನ್ನು ತಿಳಿಸಲು ಸಂತೋಷಬಡುತ್ತೇನೆ. ಮತ್ತು ಈ ಸುಯೋಗವನ್ನು ಒದಗಿಸಿಕೊಡಲು ಒಪ್ಪಿರುವ ವಾಗ್ಯೂಷಣದ ವ್ಯವಸ್ಥಾಪಕರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. - ಮಹಾರಾಷ್ಟ್ರಭಾಷೆಯಿಂದ ನಾನು ಕನ್ನಡಕ್ಕೆ ಪರಿವರ್ತಿಸಿದ ಕಾದಂಬರಿಗಳಲ್ಲಿ ಇದು ಮೂರನೆಯದಾಗಿದೆ. ಈ ಪುಸ್ತಕದ ಗುಣದೋಷವಿಮರ್ಶೆಯನ್ನು ಮಾಡುವುದು, ನಿಷ್ಪಕ್ಷಪಾತಿಗಳೂ ವಿದ್ವಾಂಸರೂ ಆದ ವಾಚಕರ ಕೆಲಸವಾದುದರಿಂದ ಆ ವಿಷಯ ವಾಗಿ ನಾನೇನೂ ಬರೆಯುವ ಆವಶ್ಯಕತೆಯಿಲ್ಲವೆಂದು ತಿಳಿಯುತ್ತೇನೆ. ಇದರ ಮೂಲವ್ರ (- ಮಾಸಿಕಮನೋರಂಜನ ”ದಲ್ಲಿ ಪ್ರಸಿದ್ಧವಾಗಿತ್ತು. ಆ ಪತ್ರಿಕೆಯ ಸಂಪಾದಕರಾದ ಶ್ರೀ. ಕಾಶೀನಾಥ ರಘುನಾಥ ಮಿತ್ರರವರು ಕೀರ್ತಿಶೇಷರಾದ ವೃತ್ತಾಂತವನ್ನು ಈ ಉಪೋದ್ಘಾತದಲ್ಲಿ ಉಲ್ಲೇಖಿಸುವ ಪ್ರಸಂಗವು ಒದಗಿದುದಕ್ಕಾಗಿ ಅತ್ಯಂತವಾಗಿ ವಿಷಾ ದಿಸುತ್ತೇನೆ! ಇದು ವಂಗಭಾಷೆಯಿಂದ ಮಹಾರಾಷ್ಟ್ರಭಾಷೆಗೆ ಪರಿವರ್ತಿತವಾಗಿರ ಬೇಕೆಂದು ಹೇಳಬಹುದಾಗಿದೆ. ನಾನು ಮರಾಠಿಭಾಷೆಯ ಮೂಲವನ್ನೇ ಅನುಸರಿಸಿ ರುಪಿನಾದುದರಿಂದ ವಂಗಭಾಷಾವಿಶಾರದರಾದ ವಾಚಕರು, ಇದರಲ್ಲಿ ಏನಾದರೂ ನ್ಯೂನಾತಿರೇಕಗಳು ಕಂಡರೆ ಅವುಗಳಿಗೆ ನನ್ನನ್ನು ಹೊಣೆ ಮಾಡಲಿಕ್ಕಿಲ್ಲವೆಂದು ನಂಬಿದ್ದೇನೆ. ಕರ್ಣಾಟಕಭಕ್ತ ಭೀಮಾಜಿ ಜೀವಾಜಿ ಹುಲಿ ಕವಿ. ಪರಿಚ್ಛೇದ ಸೂಚಿ. ಮೊದಲನೆಯ ಪರಿಚ್ಛೇದ-ವಿಮೋಚನ ? •••••• ಎರಡನೆಯ ಪರಿಚೆ ದ-ಪ್ರೇಮಸಂಚಾರ ! ಮೂರನೆಯ ಪರಿಚ್ಛೇದ-ಚಿತ್ರದಮನ ! ನಾಲ್ಕನೆಯ ಪರಿಚ್ಛೇದ-ಗುಪ್ತ ಸಂದರ್ಶನ! ೧೯ ಐದನೆಯ ಪರಿಚ್ಛೇದ-ಭೈರವಿ. ಆರನೆಯ ಪರಿಚ್ಛೇದ-ಪರಿಚಯ. ನಿಳನೆಯ ಪರಿಚ್ಛೇದ-ವಿಲಕ್ಷಣ ಕುಲಾಚಾರ. ... ಎಂಟನೆಯ ಪರಿಚ್ಛೇದ-ಪ್ರೇಮಮಂದಿರ. C L ೩೦

: : : : : : :
: : : : :

೫೪