ಪುಟ:ಬತ್ತೀಸಪುತ್ತಳಿ ಕಥೆ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


PA 6. -೨ ಬತ್ತೀಸಪುತ್ಥಳಿ ಕಥೆ. ಹ್ಮಣ ಸಮೂಹನ ನೋಡಬೇಕೆಂದು ಹೋಟುಹೋಗಿ ನೋಡುತ್ತಿರು ನಲ್ಲಿ, ಬಹುಸ್ಕೂಲಕಾಯರಾದ ಒಬ್ಬ ಬ್ರಾಹ್ಮಣ ಬರಲಾಗಿ; ಅವನ ಕಂಡು-ಎಲೈ ಬಾಹ್ಮಣೋತ್ತಮನೇ :* ನೀನು ಯಾವ ದೇಶದವ ? ಎಂದು ಕೇಳಲಾಗಿ; ಆ ಬ್ರಾಹ್ಮಣನು- ಎಲೈ ರಾಯನೇ ! ಕಾಶ್ಮೀರದೇಶದಲ್ಲಿ ದಮಾ ರಣ್ಯವೆಂಬ ಒಂದು ಅಗ್ರಹಾರವಿರುವುದು. ನಾನು ಆ ಅಗ್ರಹಾರದವನು. ನಾನು ಬಡತನದ ಬೇಗೆಯಿಂದ ಬೆಂದು, ನಿಮ್ಮ ದಿಗಂತಪ್ರಖ್ಯಾತವಾದ ಅನ್ನೋದಕದಾನ ಖ್ಯಾತಿಯ ಕೇಳಿ ಇಲ್ಲಿಗೆ ಬಂದೆನು ಎನ್ನಲಾಗಿ; ರಾ ಯನು ಅಲ್ಲಿ ಏನತಿಶಯವೆಂದು ಕೇಳಿದುದಕ್ಕೆ ಅವನು (ಆದೇಶದಲ್ಲಿ) 1 ಪಂಚಮದ ಗಿರಿಯ ಬಳಿಯಲ್ಲಿರುವ ದಧೀಚಿ ಮುನಿಯಾಶ್ರಮದಲ್ಲಿ ದಿನ ಚಂದ್ರನೆಂಬ ಮುನಿ ಬಹುಕಾಲ ಈತನ ಕುಹೂತು ತಪಸ್ಸು ಮಾಡಲಾಗಿ, ಈಶ ಪ್ರತ್ಯಕ್ಷವಾಗಿ-ನಿನಗೆ ಬೇಕಾದ ವರವ ಕೇಳು ಎನ್ನಲಾಗಿ; ಆ ಮುನಿ ತನ್ನ ಭಜಿಸಿದವರಿಗೆ ಕೇಳಿದುದ ಕೊಡುವಂಥ ವರವ ಪಾಲಿಸಬೇಕೆಂ ದು ಕೇಳಲಾಗಿ; ಅದೇಮೇರೆಗೆ ಈತ ವರವನ್ನಿತ್ತು ಆ ಮುನಿಯ 'ಪಾತಾ ಳಲೋಕದಲ್ಲಿರಿಸಿ,' ಅವನ ಸುತ್ತ ಏಳುಸುತ್ತಿನ ಕೋಟೆಯ - ನಿರ್ಮಿಸಿ, ಅದಕ್ಕೆ ಸೂಚೇದ್ವಾರದ ಬಾಗಿಲುಗಳು ಮಾಡಿ, ಒಂದನೆಯ ಸುತ್ತು ಬಾ ಗಿಲಲ್ಲಿ ವಜ್ರದುಂಬಿಯನಿರಿಸಿ, ಎರಡನೆಯ ಸುತ್ತು ಬಾಗಿಲಲ್ಲಿ ವಿಷವತಿ ನ್ನಿರಿಸಿ, ಮನೆಯ ಸುತ್ತು ಬಾಗಿಲಲ್ಲಿ ಕಾಲರಾಕ್ಷಸನನಿರಿಸಿ, ನಾಲ್ಕನೆ ಯ ಸುತ್ತಿನ ಬಾಗಿಲಲ್ಲಿ ಬಡಬಾಗ್ನಿಯನಿರಿಸಿ, ಐದನೆಯ ಸುತ್ತಿನ ಬಾಗಿ ಇಲ್ಲಿ ಪ್ರತಿ ನಿಂಹನನಿರಿಸಿ, ಆನೆಯ ಸುತ್ತಿನ ಬಾಗಿಲಲ್ಲಿ ಭೇತಾಳನನಿರಿಸಿ, ಏಳನೆಯ ಸುತ್ತಿನಲ್ಲಿ ಜಲಪ್ರಳಯವ ಪುಟ್ಟಸಿ, ಅಲ್ಲಿಗಾರ ಪೋಗದಂತೆ ಮಾಡಿ, ಈಶ ಸೇವನು, ಆ ಬಳಿಕ ಇಂಥ ದುಸ್ತರವಾದುದಲ್ಲಿ ಆದಿನ ಚಂದ್ರಮುನಿ ಇರುತ್ತಿದ್ದಾನೆಂದು ಪೇಳಿದುದ ರಾಯ ಕೇಳಿ, ಆಕ್ಷಣವೇ ಅದ ನೋಡಬೇಕೆಂದು, ಆ ವಿಪ್ರನ ಕರೆದುಕೊಂಡು ಖೇಚರಮಾರ್ಗದಲ್ಲಿ ಹೋಗಿ, ಭೇತಾಳನ ವರವುಂಟಾದುದ°ಂದ ಆ ಸೂಚೇದಾರದ ಬಾಗಿ ಲಲ್ಲಿ ಹೊಕ್ಕು, ಕೋಟೆ ಯೇಳುಸುತ್ತನ್ನೂ ದಾಂತಿ, ಆ ಮುನಿಯ ಬಳಿಗೆ 1. ಚ೦ಪಮಾ. 2. ಪಾತಾಳಲೋಕದಲ್ಲಿರು ಎಂದು ಹೇಳಿ ಸೂಚಿದ್ದಾರದಷ್ಟು ಬಿಲದ್ವಾರ ವಂ ಮಾಡಿ, ಮಾರ್ಗವಂ ಆದಕ್ಕೆ, 3, ವಿಷಗಾಳಿ, 4. ಒಲದಾಳಿಲು M m