ಪುಟ:ಬತ್ತೀಸಪುತ್ತಳಿ ಕಥೆ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


FY ಕರ್ಣಾಟಕ ಕಾವ್ಯಕಲಾನಿಧಿ. ಹೋಗಿ ವಂದಿಸಲಾಗಿ; ಆ ಮುನಿಯು ರಾಯನ ಕಂಡು ವಿಸ್ಮಿತನಾಗಿ ಇಂಥ ಅಸಂಧ್ಯಸ್ಥಳಕ್ಕೆ ಹೇಗೆ ಬಂದೆ ? ನಿನ್ನ ಹೆಸರೇನು ? ಎಂದು ಕೇಳ ಲಾಗಿ; ತಾನು "ವಿಕ್ರಮಾದಿತ್ಯರಾಯನೆಂದು ಹೇಳಲಾಗಿ; ಆ ಮುನಿಯು ಸಂತೋಷಪಟ್ಟು ಸಮೀಪದಲ್ಲಿ ಕುಳ್ಳಿರಿಸಿಕೊಂಡು ಇಂತೆಂದನು :--ಕೇಳೆ ರಾಯನೇ? ನನ್ನಲ್ಲಿ ಯಾರು ಬಂದು ಬೇಕಾದುದ ಕೇಳಿದರೆ ಕೊಡುವಂತೆ ಶಿವನ ವರವ ಪಡೆದಿರುವೆ. ಈವರೆಗಿಲ್ಲಿ ಗಾರೂ ಬರಲಿಲ್ಲ ಎಂದು ಚಿಂತಿಸು ತಿದ್ದೆನು, ನೀನು ಮಹಾಪುರುಷನಾದಕಾರಣ ಇಲ್ಲಿಗೆ ಬಂದೆ. ನಿನಗೆ ಬೇ ಕಾದರ್ಥವ ಬೇಡು ಎನ್ನಲಾಗಿ; ಸಾಮೂಾ, ನನಗೆ ನಿನ್ನ ಕಟಾಕ್ಷದಿಂದ ಸಕ ಲೈಕ್ಷರ ಭೋಗಭಾಗ್ಯ, ಮಂದಿ, ಮಾರ್ಬಲ ಯಾವತ್ತೂ ಸಂಪೂರ್ಣವಾಗಿ ಇರುವುದು. ನಾನು ಇನ್ನೇನ ಬೇಡುವೆನು ಎನ್ನಲು ; ಆ ಮಾತಿಗೆ ಆ ಮುನಿ ನೀನು ಬಹುಪ್ರಯಾಸಪಟ್ಟು ನಮ್ಮಲ್ಲಿ ಬಂದು ಸುಮ್ಮನೆ ಹೋಗ ಬಾರದೆಂದು ಚತುರಂಗಸೇನೆ ಕೊಡುವುದೊಂದು ರತ್ನ, ಬೇಕಾದಷ್ಟು ದ್ರವ್ಯ ಕೊಡುವುದೊಂದು ರತ್ನ ; ಮೃಷ್ಟಾನ್ನ ಕೊಡುವುದೊಂದು ರತ್ನ, ಈ ಮಲು ರತ್ನದ ಪರೀಕ್ಷೆ ಹೇಳಿ ಕೊಟ್ಟು ಕಳುಹಿಸಲಾಗಿ ; ರಾಯ ರತ್ನಂಗಳ ತೆಗೆದುಕೊಂಡು, ಅಲ್ಲಿಂದ ಆ ಸೂಚೇದಾರದ ಬಾಗಿಲಲ್ಲಿ ಹೊಕ್ಕು ಇಲ್ಲಿಗೆ ಹೊಅಟುಬರುವ ದಾರಿಯಲ್ಲಿ ಒಬ್ಬ ಅರಸು ದಾಯಾದಿ ಗಳಿಂದ ರಾಜ್ಯಭ್ರಷ್ಟನಾಗಿ ಗ್ರಾಸಕ್ಕಿಲ್ಲದೆ ಸತಿ ಸುತರು ಸಮೇತ ಅರಣ್ಯ ದಲ್ಲಿ ಅಗ್ನಿಪ್ರವೇಶಕ್ಕೆ ನಿಶ್ಚಯವಾಗಿ ಅಗ್ನಿಕುಂಡಕ್ಕೆ ಅಗ್ನಿಯ ಹಾಕಿ ಇರುವುದ ಕಂಡು, ಕನಿಕರಪಟ್ಟು ರಾಯ-ನೀವು ಅಗ್ನಿಪವೇಶನ ಮಾಡ ಕಾರಣವೇನೆಂದು ಕೇಳಲಾಗಿ; ಆ ಅರಸು ಇಂತೆಂದನು :-ನಾನು ಅಂಗದೇ ಶದ ಅರಸು ; ದಾಯಾದಿಗಳು ಹೆಜ್ಜೆ ರಾಜ್ಯ ಕೊಳ್ಳಲಾಗಿ, ನಿರ್ವಾಹವಿಲ್ಲದೆ ಅಲ್ಲಿಂದ ಈ ಅರಣ್ಯಕ್ಕೆ ಬಂದು ಅಗ್ನಿಪ್ರವೇಶಕ್ಕೆ ನಿಫ್ಟ್ನಿ ಇದ್ದೇನೆ. ಹೀಗಿರುವ ಬ್ರಹ್ಮಲಿಖಿತವ ಮೂಾಲಲಳವೇ ? ಎಂದು ವ್ಯಾಕುಲಪಡುತ್ತ ಹೇಳಿದ ಆ ಅರಸಿನ ಮಾತ ಕೇಳಿ, ರಾಯನು ಕರುಣಚಿತ್ತನಾಗಿ-ಅಂಜ ಬೇಡವೆಂದು ಅಭಯವಿತ್ತು, ದಿನಚಂದ್ರಮುನಿ ತನಗೆ ಕೊಟ್ಟ ಮಜು ರತ್ನವ ಕೊಟ್ಟು, ರತ್ನ ಪರೀಕ್ಷೆ ಪೇಳಿ, ಸಂತೈಸಿ ಕಳುಹಿಸಿ, ಇಲ್ಲಿಗೆ ಬಂದು, ಇದ ಹೇಳಿದ ಬ್ರಾಹ್ಮಣನಿಗೆ ಕೋಟಿ ದ್ರವ್ಯ ಕೊಟ್ಟು ಕಳುಹಿಸಿ, m M m