ಪುಟ:ಬತ್ತೀಸಪುತ್ತಳಿ ಕಥೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಟ ಟ ಈ ಕರ್ಣಾಟಕ ಕಾವ್ಯ ಕಲಾನಿಧಿ. ಲಾಗಿ; ಅವಳಂತೆಂದಳು :--ಕೋಳ್ಳಿ ರಾಯನೇ ! ಮೊದಲು ಕಷ್ಟಪಟ್ಟು ದಕ್ಕೆ ದುಃಖಪಡಲಿಲ್ಲ ; ಈ ಹಾಲು ಮೊಸರು ಚೆಲ್ಲಿ ಹೋದರೆ ಇದಕ್ಕೆ ರೋ ದನ ಪಡುವೆನೇ ? ಎನ್ನಲಾಗಿ; ರಾಯ-ನೀಮುನ್ನ 1ಕಷ್ಟಪಟ್ಟುದೇನೆಂದು ಕೇಳಿದುದಕ್ಕೆ ಅವಳಿಂತೆಂದಳು :--ಕೇಳೋಯಾ ರಾಯನೇ ? ಹೇಮಾವತಿ ಯೆಂಬ ಪಟ್ಟಣದ ಅರಸು ನಿಂಹಸೇನನ ಬಳಿಯಲ್ಲಿ ವರ್ತಕನಾಗಿ ಇದ್ದ ರತ್ನದತ್ತನ ಹೆಂಡತಿಯಾಗಿ ಮೊದಲು ನಾನು ಇದ್ದೆ; ನನ್ನ ಹೆಸರು ಚಂದ್ರ ರೇಖೆ. ನನಗೆ ಮಕ್ಕಳಿರಲಿಲ್ಲವಾಗಿ ಆಸಟ್ಟಣದ ಕಾಳಿಕಾದೇವಿಗೆ ಹರಕೆಮಾ ಡಿಕೊಂಡಕಾರಣ ಬಳಿಕ ಪುತ್ರನ ಪಡೆದು ಬಂದುದಿನ ದೇವಿಯ ಹರಕೆಯ ನೊಪ್ಪಿಸಿ ರಾಜಬೀದಿಯಲ್ಲಿ ಬರುವಲ್ಲಿ, ಆಸಿಂಹರ್ಸನನೆಂಬ ಅರಸು ನನ್ನ ಕಂಡು ನನ್ನ ರೂಪಲಾವಣ್ಯಕ್ಕೆ ಮನಸೋತು, ತನ್ನ ದೂತಿಯರ ಕಳು ಹಿಸಿ, ನನ್ನ ಒಡಂಬಡಿಸಲು ಕರೆಯಬಿಡಲಾಗಿ-ನಾನು ಅಲ್ಲಿಗೆ ಹೋದರೆ ಜಾತಿವ್ರತ್ಯ ಭಂಗವಾದೀತೆಂದು ಹೋಗದಿರಲಾಗಿ ; ಆ ಅರಸು ಕಾಮೋ ದ್ರೇಕದಿಂದ ದುರಾಲೋಚನೆಯ ಮಾಡಿ, ನನ್ನ ಪತಿಯಾದ ರತ್ಸದನ ಕರೆಸಿಕೊಂಡು,.-ನೀನು ದೀಪಾಂತರಕ್ಕೆ ಹೋಗಿ ರತೃಗಳ ತೆಗೆದುಕೊಂ ಡು ಬಾಯೆಂದು, ಅನೇಕ ದ್ರವ್ಯವ ಕೊಟ್ಟು ಸಯವ ಮಾಡಿ ಕಳು ಹಿದ ಬಳಿಕ ; ಪುನಃ ತನ್ನ ದೂತಿಯರ ನನ್ನ ಹತ್ತಿರಕ್ಕೆ ಕಳುಹಿಸಿ-ಸು ಮೃನೆ ಬಂದರೆ ಸರಿ. ಇಲ್ಲದಿದ್ದರೆ ಬಲಾತ್ಕಾರದಿಂದ ಹಿಡಿದುಕೊಂಡು ಬರ ಹೇಳಲಾಗಿ; ಬಂದ ದೂತಿಯರು ಹೇಳಿದ ಮಾತ ಕೇಳಿ, ಹೋಗದಿದ್ದರೆ ಮಾನಕ್ಷತಿಯಾದೀತೆಂದು ತಿಳಿದು ಇಂತೆಂದೆನು-ಎಲೆ ದೂತಿಯರಾ ? ಆದಾ ಗ್ರ ಅರಸನ ಬಂಡಾರದ ಬೀಡಿಗೆ ಬಂದಿರ ಹೇಳಿ, ನಾನಾರೂ ಕಾಣದಂತೆ ಬರುವೆನೆಂದು ಹೇಳಿ, ಆ ದೂತಿಯರ ಕಳುಹಿಸಿ, ಆದಿನ ರಾತ್ರಿ ನನ್ನ ಮನೆ ಯಿಂದ ಹೋಟು ರಾಜಬೀದಿಯಲ್ಲಿ ಹೋಗುತ್ತಿರುವಲ್ಲಿ ಒಬ್ಬ ಪುರುಷನ M ಪಾ-1, ಪಟ್ಟಭಂಗವೇ. 2. ದೂತಿಯರು ಬಂದು ಈ ವೃತ್ತಾಂತವ ಪೇಳಲು ತಾನು ಒಪ್ಪದೆ ಇರಲು, ಮತ್ತು ಬಲಾತ್ಕಾರದಿಂದ ಹಿಡಿತನ್ನಿರಿ ಎಂದು ದೂತರ ಕಳುಹಲು, ಪತಿವ್ರತಾಭ೦ಗವಹುದೆಂದು ತಿಳಿದು, ಪತಿವ್ರತಾ ಭಂಗವಾದಮೇಲೆ ಸ್ಟೇಚ್ಛೆಯ ತರಬೇಕಲ್ಲದೆ ಈ ಪ್ರಾಪ್ತಿ ತಪ್ಪದು. ಕಳವೇತಕ್ಕೆಂದು ನನ್ನಲ್ಲಿ ನಾನೇ ಯೋಚಿಸಿಕೊಂಡು,