ಪುಟ:ಬತ್ತೀಸಪುತ್ತಳಿ ಕಥೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#y ಕರ್ಣಾಟಕ ಕಾವ್ಯಕಲಾನಿಧಿ, ತಿಳಿದು, ಅವ ಕೊಟ್ಟ ಹಣವ ಹಿಂದಕ್ಕೆ ಕೊಟ್ಟು ಕಳುಹಿಸಿ ಬಿಟ್ಟು, ಆ ಬೆಳ ಗಾಗಿ ಹಿರಿಯರಾದ ಭೂಸುರೋತ್ತಮರ ಬಳಿಗೆ ಹೋಗಿ, ಕೇಳಲಾಗಿಈ ಪಾಪಕ್ಕೆ ಮರಣ ಪ್ರಾಯಶ್ಚಿತ್ತವೆಂದು ಅವರು ಹೇಳಿದುದ ಕೇಳಿ, ಬಂದು, ನನ್ನಲ್ಲಿದ್ದ ಸರ್ವಸ್ವವನ್ನೂ ಬ್ರಾಹ್ಮಣರಿಗೆ ದಾನವ ಕೊಟ್ಟು, ಆ ಬಳಿಕ ಅರಣ್ಯದಲ್ಲಿ ಒಂದು ಹುಣಿಸೆಯ ಮರದ ಪೋಟೆಗೆ ಕಾಡ ಬೆರಣಿ ತುಂಬಿಸಿ, ಅದು ಮಧ್ಯದಲ್ಲಿ ಕುಳಿತುಕೊಂಡು, ಬೆಂಕಿಯ ಹಾಕಿಸಲಾಗಿ ; ಮೆಯ್ಯು ಬೆಯುತ್ತ ಬರುವಲ್ಲಿ ; ದೊಡ್ಡ ಮಳೆಯು ಬಂದು, ಬೆಂಕಿಯಾ 'ಹೋಗಿ ದೇಹದ ಕೆಲಭಾಗವು ಬೆಂದು ಕೆಲವು ಬೇಯದೆ ಆ ನೋವಿನಲ್ಲಿ ಇರುವಲ್ಲಿ; ಒಬ್ಬ ಗೊಲ್ಲ ನಾಯಕ ಅಲ್ಲಿಗೆ ಬಂದು, ಕಂಡು, ನನ್ನ ಕರೆದು ಕೊಂಡು ಹೋಗಿ, ಆರೈಕೆ ಮಾಡಿದ ಕಾರಣ, ಅವನ ಸತಿಯಾದೆ. ಕೇಳೆ ರಾಯನೆ! ಪಾತಿವ್ರತ್ಯ ಭಂಗವಾದುದಕ್ಕೆ ಅಳಲೊ ? ಹಾದಿ ಪುರುಷನ ಗುಡಿಯಲ್ಲಿ ಹಾವು ಕಚ್ಚಿ ದುದಕ್ಕಳಲೆ ? ಅರಸನ ಕೊಂದುದಕ್ಕಳಿ? ವುಗನ ಕಡೆ ವಿಟಗಾಕ್ಕೆ ಮಾಡಿ ಒಡವೆ ವಸ್ತು ವೆಚ್ಚವಾವುದಕ್ಕಳಲೆ? ಹುಣಿಸೆಯ ಮರದ ಪೊಟೆಯಲ್ಲಿ ದೇಹ ಬೆಂದು ಬೇಯದುದಕ್ಕಳ ಲೋ ? ಗೊಲ್ಲನ ಪತ್ನಿಯಾದುದಕ್ಕೆಳಲೋ ? ಇಷ್ಟಲ್ಲಿ ಒಂದಕ್ಕೂ ಅಳಲಿಲ್ಲ. ಈ ಹಾಲುಮೊಸಕು ಚೆಲ್ಲಿ ಹೋದರೆ ಇದಕ್ಕೆ ಅಳುವೆನೆ ? ಎಂದು ನಕ್ಕೆನು-ಎಂದ ಮಾತ ಕೇಳಿ, ರಾಯನು ಮೆಚ್ಚಿ, ಅವಳಿಗೆ ಸವಾ ಲಕ್ಷ ದ್ರವ್ಯವ ಕೊಟ್ಟು, ಕಡಮೆ ಸ್ತ್ರೀಯರಿಗೆಲ್ಲ ಹಾಲು ಮೊಸರು ಕ್ರಯವ ಕೊಡಿಸಿ, ಕಳುಹಿಸಿದನೆಂದುದಕ್ಕೆ ಪದ್ಮನಯನೆ ಯೆಂಬ ಪುತಳಿ ನಗುತ್ತ ಹಾಸ್ಯಗೆಯ್ದು ಹೇಳಿದ ಉಪಕಥೆ:- ಕೇಳ್ಳಯಾ ಚಿತ್ರಶರ್ಮನೇ ನಮ್ಮ ವಿಕ್ರಮಾದಿತ್ಯರಾಯನು ಈ ಉಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಹಿಮವತ್ಪರ್ವತದ ಬಳಿಯಲ್ಲಿ ರುವ ಜಯವತಿಯೆಂಬ ಪಟ್ಟಣದ ಅರಸ ದ ಸೋಮವತನ ದಾಯಾದಿ ಗಳ ಆರಾಚ್ಯವಾಕ್ರಮಿಸಿಕೊಂಡ ಕಾರಣ ಆ ಸೋಮದತ್ತನು ರಾಯನ ಬಳಿಗೆ ಬರಲಾಗಿ, ಆತನಿಗೆ ಅರ್ಧ ಸಿಂಹಾಸನವನ್ನಿತ್ತು ಕುಳ್ಳಿರಿಸಿಕೊಂಡು, ಬಂದ ಕಾರವೇನೆಂದು ಕೇಳಲಾಗಿ, ಅರಸು ತನ್ನ ದಾಯಾದಿಗಳಿಂದ ಆದೆ ವರ್ತಮಾನನ ಸೇಳಲಾಗಿ; ಆಗ ಆತನಿಗೆ ಬಿಡದಿಯ ಬಿಡಿಸಿಕೊಟ್ಟು ಇರಿ m m