ಪುಟ:ಬತ್ತೀಸಪುತ್ತಳಿ ಕಥೆ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


១០ ಕರ್ಣಾಟಕ ಕಾವ್ಯಕಲಾನಿಧಿ ಸುತ್ತ ಇದ್ದೆ. ನನ್ನ ಪುಣ್ಯದಿಂದ ನೀನೇ ಇಲ್ಲಿಗೆ ಬಂದುದು ಉತ್ತಮವಾ ಯಿತು. ಇನ್ನು ಕೈವಿಡಿದು ಪಾಲಿಸೆನ್ನಲಾಗಿ; ರಾಯನಿಂತೆಂದನು:-ನನಗೆ ಏಕಪವ್ರತ, ಅನ್ಯ ಯರು ಜನನಿಯ ಸಮಾನ. ಆದಾಗ್ಯೂ ನನಗೊಬ್ಬ ಸೋದರಳಿಯನಿದ್ದಾನೆ. ಅವನನ್ನು ಮದುವೆಯಾಗು ಎಂದು ಹೇಳಲಾಗಿ; ಆ ವೇದಾವತಿಯಿಂತೆಂದಳು:-ನಾರಿಯೆಂದರೆ ಹೆಂಗಸರಿಗೂ ಹೆಸರು ; ನಾರಿಯೆಂದರೆ ಬಿಲ್ಲಿನ ನಾರಿಗೂ ಹೆಸರು ; ಆದುದರಿಂದ ನಾರಿ ಯೆಂಬ ಹೆಸರಿಗೆ ಒಣಗಿದ ಮರವೂ ಬಿಲ್ಲಾಗಿ ಬಾಗುವುದು. ಪ್ರತ್ಯಕ್ಷ ವಾಗಿ ಕಚಕುಚದ ನಾರಿಯರ ಕೆಂಡು ಮೋಹಿಸದವರು ಯಾರು ? ನೀನು ಮಹಾದೃಢಪುರುಷನೆಂದು ಆ ಬಳಿಕ ರಾಯನಿಗೆ ಅಷ್ಟೆಪ್ಪರ್ ಕೊಡುವಂಥ ಎಂಟು ರತ್ನಗಳ ಕೊಟ್ಟು ಕಳುಹಿಸಲಾಗಿ; ರಾಯ ಅಲ್ಲಿಂದ ಬಿಲದ್ವಾರ ದಲ್ಲಿ ಮೇಲಕ್ಕೆ ಬಂದು ಖೇಚರಮಾರ್ಗದಿಂದಿಲ್ಲಿಗೆ ಬಂದು ಸೋಮದತ್ತ ನಿಗೆ ಆಯಂಟು ರತ್ನವ ಕೊಟ್ಟು ಬಲಸಮೇತನಾಗಿ, ದಂಡೆತ್ತಿ ಹೋಗಿ ಆ ಸೋಮದತ್ತನ ದಾಯಾದಿಗಳ ಜಯಿನಿ ಜಯಂತಿಯೆಂಬ ಪಟ್ಟವನ್ನು ಯಥಾಪ್ರಕಾರವಾಗಿ ಸೋಮದತ್ತನಿಗೆ ಪಟ್ಟಾಭಿಷೇಕವ ಮಾಡಿ ಇರಿಸಿ ಬಿಟ್ಟು, ಶರಣಾಗತರಕ್ಷಕನೆಂಬ ಬಿರುದ ಪಡೆದು ಅಲ್ಲಿಂದ ತಾನಿಲ್ಲಿಗೆ ಬಂದು ಸುಖವಾಗಿ ಇದ್ದನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಪದ್ಮನಯನೆಯೆಂಬ ಪುತ್ಕಳಿ ಪೇಳಿದ ಇಪ್ಪತ್ತೆರಡನೆಯ ಕಥೆ 15 ವ . ಇಪ್ಪತ್ತು ಮನೆಯ ಕಥೆ. ಇಪ್ಪತ್ತು ಮನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವ ತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಸರಾಭರಣಾಲಂಕೃ ತನಾಗಿ, ಭೂರಿ ದಾನಗಳ ಮಾಡಿ, ಚಿತ್ರಶರ್ಮನ ಕೈಲಾಗಿನಿಂದ ಆಸ್ತಾನ ಮಂಟಪದ ಸಿಂಹಾಸನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ