ಪುಟ:ಬತ್ತೀಸಪುತ್ತಳಿ ಕಥೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

b. ಲm ೧ok ಕರ್ಣಾಟಕ ಕಾವ್ಯಕಲಾನಿಧಿ, ಯನು ಖಿನ್ನನಾಗಿ ಬೇತೆ ಸಿಂಹಾಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಹೇಳಿದ ಕಥೆ. ಎಲೆ ಪುತಳಿಯೇ ! ಕೇಳು ಧಾರಾಪುರದಲ್ಲಿ ನನ್ನ ರಾಯನು ಸುರರಾಜ್ಯಗೆಯ್ಯುವಲ್ಲಿ ಒಂದು ದಿನ ಆಸನದಲ್ಲಿ ಕವಿಗಳು ವಿದ್ವಾಂಸರು ಮಂತ್ರಿಗಳು ಮುಂತಾಗಿ ಸಕಲರೂ ಕುಳಿತಿರುವ ರಾಯನಿಂತೆಂದನು :- ಕೇಳಿರೈ, ಒಬ್ಬ ಸಿ ಇಂದೀವರಾಕ್ಷಿಯಿಂದ ಸವಳದ ಅಧರದಿಂದೊಪ್ಪು ವಳ ಮಾರ್ಗದಲ್ಲಿ ಬರುವುದ ಕಳ್ಳರು ಕಂಡು, ಅವಳ ಅಡ್ಡಗಟ್ಟಿ, ಸಕಲ ಒಡವೆಗಳ ತೆಗೆದುಕೊಂಡು, ಆಣಿಮುತ್ತಿನ ಮೂಗುತಿಯ ಮಾತ್ರ ಬಿಟ್ಟು ಹೋದ ಬಗೆಯನೆಂದು ರಾಯನು ಕೇಳಲಾಗಿ; ಆಮಾತಿಗೆ, ಎಲ್ಲರು ತಲೆವಾಗಿ ಆಲೋಚಿಸುತ್ತ ಸುಮ್ಮನಿರುವುದು ಸಮ್ಮುಖದ ಸೂಳೆ ಪ್ರಭಾ ವತಿಯು ಕಂಡು ಇಂತಂದಳು '-ಕೇಳ್ಳಿ ರಾಯನೇ ? ಮೇಲೆ ಅವಳ ನೇತ್ರ ಇಂದೀವರದಂತೆ ಕಪ್ಪಾಗಿ, ಕೆಳಗೆ ಅವಳ ತುಟ ಪವಳದಂತೆ ಕೆಂಪಾಗಿ ತೋ, ನೇತ್ರದ ಕೆಳಗಣ ತುಟಿಯ ಮೇಲಣ ಮೂಗುತಿಮುತ್ತು ಕಪ್ಪು ಕೆಂಪಾಗಿ ಕಂಡುದwಂದ, ಅದು ಗುಲಗುಂಜೆಯೆಂದು ಅನುಮಾನಪಟ್ಟು, ಆ ಕಳ್ಳರು ಬಿಟ್ಟುಹೋದರೆಂದು, ಆವೇತಿಯು ರಾಯನಿಗೆ ಉತ್ತರಕೊಡ ಲಾಗಿ ; ರಾಯನು ಮೆಚ್ಚಿ ಅವಳಿಗೆ ಸವಾಲಕ್ಷದವ್ಯವ ಕೊಟ್ಟು, ಕಳುಹಿ ನಿದನು-ಎಂದ ಮಾತಿಗೆ ಹಂಸಗಮನೆಯೆಂಬ ಪುತ್ತಳಿ ನಗುತ್ತ ಹಾಸ್ಯಗೆಯ್ದು ಪೇಳಿದ ಉಪಕಥೆ' ಕೇಳ್ಳೆಯ ಚಿತ್ರಶರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ರಾತ್ರಿಕಾಲ ಓಲಗವ ತೀರಿಸಿ ಕೊಂಡು ಅರಮನೆಗೆ ಹೋಗಿ ಭೋಜನವ ಮಾಡಿ ಅಂತಃಪುರದ 'ಶಯನ ದಾಲಯದೊಳಿರುವ ಚಪ್ಪರಗಾಲ ಶಕುನಿ ತೂಗುವ ಮಂಚದ ಹಾನಿನಲ್ಲಿ ತನ್ನ ಅರಸಿ ಸಮೇತವಾಗಿ ಮಲಗಿ ಇರುವಾಗ, ಒಂದು ಸ್ಪಷ್ಟವ ಕಂಡು, ಅದ ಮನದಲ್ಲಿ ಜ್ಞವಿ ಮಡಗಿದ್ದು, ಬೆಳಗಾದ ಬಳಿಕ ಎಚ್ಚತ್ತು ನಿತ್ಯಕ ರ್ಮವ ತೀರಿಸಿಕೊಂಡು ಬಂದು, ಓಲಗದಲ್ಲಿ ಕುಳಿತಿರುವ ವೇಳೆಯಲ್ಲಿ ಒ ಪಾ-1, ವರರುಚಿ, ಕಾಳಿದಾಸ, ಮಯೂರ ಮೊದಲಾದ ಕವಿಗಳು ಸುಮ್ಮನಿರಲು, 2, ಸಜೆ ವನೆ.