ಪುಟ:ಬತ್ತೀಸಪುತ್ತಳಿ ಕಥೆ.djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸವುಳಿ ಕಥೆ. ೧೦೭ ವಿದ್ವಾಂಸ ಕವಿಗಳ ಮುಖವ ನೋಡಿ ರಾಯನಿಂತೆಂದನು :-ಕೇಳಿರೈಯ ! ರಾತ್ರಿ ಮಲಗಿರುವಾಗ ಸ್ಮಪ್ಪವ ಕಂಡೆ. ಅದೇನೆಂದರೆ-ಎಣ್ಣೆಯೊತ್ತಿಸಿ ಕೊಂಡು ಕೋಣನ ಮೇಲೆ ಕುಳಿತು ಬರುತ್ತ ದಾರಿಯಲ್ಲಿ ಅನ್ನವುಣುತ್ತ, ತೆಂಕಣ ದಿಕ್ಕಿನಲ್ಲಿ ಓಲಗ ತೆಗೆದುಕೊಳ್ಳುವಂತೆ ಕಂಡೆ. ಇದು ಫಲವೇನು ? ಎಂದು ಕೇಳಲಾಗಿ ; ವಿದ್ವಾಂಸ ಕವಿಗಳಂತೆಂದರು :-ಕನಸಿನಲ್ಲಿ ಭಂಡಿ, ತೊಲೆ, ಅಂದಣ, ಕೋಣ, ಎಣ್ಣೆ, ಬೋಗಾರ, ಕೆಲಸ ಮುಂತಾಗಿ ಇದ್ದು ದಲಿ ಯಾವುದ ಕಂಡರೂ ಹಾನಿಯೆಂದ ಮಾತಿಗೆ ಅವರೊಳಗೊಬ್ಬ ವಿವೇ ಕತಿಲಕನೆಂಬವನು ಒಳ್ಳೆಯ ಕನಸ ಪ್ರಕಟವಾಡಬೇಕು; ದುಸ್ಸಪ್ಪನ ಕಂಡರೆ ಮಸಬೇಕು' ಎಂಬ ನೀತಿಯಿರುವುದಿಂದ ಈ ಮೇರೆಗೆ ವಿವರಿಸಿ ರಾಯರೊಡನೆ ಹೇಳಲಾಗದೆಂದು ಎಲ್ಲರನ್ನೂ ಶಂಕಿಸಿ ಕೇಳಿ, ಆ ಬಳಿಕ ಅವ ನು-ಕೇಳ್ಳ ಮಹಾರಾಯನೇ ಅಪಮೃತ್ಯು ಪರಿಹಾರಾರ್ಥವಾಗಿ ದಾನಂಗಳ ಮಾಡು ಎಂದು ಹೇಳಿದ ನೀತಿಚಾತುರಕ್ಕೆ ರಾಯ ಮೆಜ್ಜಿ , ಆಗ ಪಂಚಲೋ ಹಗಳು, ಕರಿತುರಗಗಳು, ಗೋ ಛ ಗೃಹಗಳು, ಪಂಚರತ್ನಗಳು, ಸುಗಂಧ ಪರಿಮಳ ಮುಂತಾದುವೆಲ್ಲ ದಾನವ ಕೊಟ್ಟು, ಸಭಾಸಾಮಾಜಿಕರಾದ ವಿದ್ವಾಂಸಕವಿಗಳಿಗೆಲ್ಲ ಲಕ್ಷ ಲಕ್ಷ ದ್ರವ್ಯವ ಕೊಟ್ಟು, ಆ ವಿವೇಕ ತಿಲಕ ನೆಂಬವಗೆ ಕೊಟಿವನ್ಸವ ಕೊಟ್ಟು ದುಸ್ಸಹ್ನ ಶಾಂತಿ ಮಾಡಿಕೊಂಡು, ಸುಖವಾಗಿ ಇದ್ದನು-ಎಂದು ಹಂಸಗನನೆ ನುಡಿಯಲು ; ಭೋಜರಾಯನು ಲಜ್ಜಿತನಾಗಿ ತನ್ನ ಅರಮನೆಗೆ ಹೋದನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಹಂಸಗಮನೆಯೆಂಬ ಪುತ್ತಳಿ ಪೇಳಿದ ಇಪ್ಪತ್ತು ನಾಲ್ಕನೆಯ ಕಥೆ. ವ ==... ೨೫ ನೆಯ ಕಥೆ. ಇಪ್ಪತ್ತೈದನೆಯ ದಿವಸದಲ್ಲಿ ಭೋಜರಾಯನು ಸಾನ ದೇವತಾ ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ನವರತ್ನಾಭರಣಾಲಂಕೃತ ನಾಗಿ ಎಂದಿನಂತೆ ತನ್ನ ಆಸ್ಥಾನಕ್ಕೆ ಬಂದು ನಿಂಹಾಸನಕ್ಕೆ ತನ್ನ ಬಲಗಾಲ O ಥ