ಪುಟ:ಬತ್ತೀಸಪುತ್ತಳಿ ಕಥೆ.djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


-೨ mm M m ಟ ಬತ್ತೀಸಪುತ್ರ ಕಥೆ. ೧of ಎಲೈ ರಾಯನೆ ! 'ವಿದ್ಯೆ ಕಲಿಯಬಹುದು, ನುಡಿಗಳ ಕಲಿವುದು ಉನ್ನತ ; ದ್ರವ್ಯಸಂಪಾದಿಸಬಹುದು, ದಾನ ಕೊಡುವುದುನ್ನತ ; ಕವಿಯಾಗಬಹುದು, ಭಾವ ತಿಳಿವುದನ್ನತ ; ಮಂತ್ರಿಯಾಗಬಹುದು, ಲೋಕಹಿತನಾಗುವುದು ಉನ್ನತ ; ದೊರೆಯಾಗಬಹುದು, ವೀರವಿತರಣ ಗುಣವಿರುವುದು ಉನ್ನತ ಅದುಕಾರಣ ಸಕಲಸಂಪನ್ನನೆನಿಸಿಕೊಂಬುದು ಸಾಮಾನ್ಯವಲ್ಲ 1 ಎಂದು ಸುಪ ರೀಕ್ಷಿತ ನುಡಿದುದಕ್ಕೆ ರಾಯನಿಂತೆಂದನು .-ಜಗತ್ತಿನಲ್ಲಿ ಎಲ್ಲವ ಬಲ್ಲವ ರಿಲ್ಲ ; 'ಬದ - ಅwಯವವರಿಲ್ಲ ; ತಮ್ಮ ತಮ್ಮ ಮಟ್ಟಿಗೆ ತಕ್ಕಷ್ಟು ಬಲ್ಲರಲ್ಲದೆ 'ನೆರೆ ಸಿಪುಣರೆಸಿಕೊಳ್ಳವರಾರು , ಎಂದು ರಾಯನಾಡಿದ ಮಾತಿಗೆ ಸುಸ೦ಕ್ಷಿತನಿಂತೆಂದನು.-ಕಳ್ಳರು ರಾಯನೆ : ನಾನೂ ಎರಡು ಪರಿಕ್ಷೆ ಬಲ್ಲೆನು. ಅದೇನೆಂದರೆ- + ಊಟ, ಕೂಟ, ಈ ಯೆರಡುಪರೀಕ್ಷೆ ಬಲ್ಲೆನೆನಲಾಗಿ: ರಾಯ ಇವನ ಜಾಣ್ಯ ನೋಡುವೆನೆಂದು ಸೂಪ ಶಾಸ್ತ್ರ ಜ್ಞನ ಕರೆಸಿ 'ನಳ ಪಾಕ ಭೀಮಪಾಕ, ಮುಂತಾದುವಲ್ಲಿ ಅನೇಕ ತರದ ಭಕ್ಷನ ಅಗ್ನಿ ಮತದಿಂದ ಪರಿಸನ ಮಾಡಿಸಿ, ' ಆ ಬಳಿಕ ಭೋಜನಶಾ ಲೆಯಲ್ಲಿ ಈರ್ವರೂ ಏಕಸಜಿಯಲ್ಲಿ ಕುಳಿತುಕೊಂಡು ಸಕಲವಾದ ಶಾಕ ಪಕಗಳ ಬಡಿಸಿ ಮೃಷ್ಟಾನ್ನಗಳ ಭೋಜನವ ಮಾಡಿಕೊಂಡು, ಚಂದ ಶಾಲೆಗೆ ಬಂದು ಕುಳಿತುಕೊಂಡು, ಗಂಧ ಕಸೂರಿ ಪರಿಮಳ ಕುಸುಮ ತಾಂ ಬೂಲವ ಕೊಟ್ಟು ತೀರಿಸಿಕೊಂಡು, ರಾಯು ಸುಪರಿಕ್ಷಿತನೊಳು-ಭೋ ಜನವು ಎಂಥದೋ ಎಂದು ಕೇಳಲಾಗಿ , ಆತನು-ಸಕಲ ಪದಾರ್ಥವೂ ರುಚಿಕರವಾಗಿದ್ದಿತು ; “ರಾಜಾನ್ನ ಸ್ವಲ್ಪ ನಾಚುತ್ತಿದ್ದಿತು ಎನ್ನಲಾಗಿ ; 1. ವಿದ್ಯೆಗಳ ಕಲಿಯಬಹುದು, ನುಡಿಗಳ ಕಲಿಯಲಾಗದು ; ಧನವ ಗಳಿಸಬಹುದು ದಾನಿಯಾಗಲರಿಯದು, ಕವಿಯಾಗಬಹುದು, ರಸಜ್ಞನಾಗಲರಿಯದು ; ಭೋ ಜನವ ಮಾಡಬಹುದು, ಸ್ವಾರಸ್ಯಗಳ ತಿಳಿಯಲಾಗದು ; ಪ್ರಧಾನವಾಗ ಒಹುದು, ಲೋಕಹಿತನಾಗಲರಿಯದು; ಅರಸಾಗಬಹುದು, ವೀರವಿತರಣವೂ ಆವನಾಗಲರಿಯದು, ಅದು ಕಾರಣ ಸಕಲ ಗುಣಗಳ ತಿಳಿದು ಸಾಮಾ ನ್ಯವಲ್ಲ. 2. ಏನೂ. 3. ಸಕಲ ಕಲಾ ಪ್ರವೀಣನಾಗಿ ಸರಜ್ಞ ಚಿತ್ರನೆನಿಸಿ ಕೊಂಬುವನಲ್ಲವೆಂದು, 4 ಭೋಜನದ ಪರೀಕ್ಷೆ, ಸ್ತ್ರೀಯರ ಕೂಟದ ಪರೀಕ್ಷ. 5. ಅನೇಕವಿಧ ಭಕ್ಷ ಕಜ್ಜಾಯಗಳ, ಪಾರ್ವತೀಮತ ನಳಮತ ಭೀಮಮತ ಅಗ್ನಿ ಮತ ಇಂತೆಂಬ ಸಕಲ ಮತಗಳಿಂದ ಸಕಲ ಪರೀಕ್ಷೆಗಳ ಮಾರಿಸಿ, 6. ರಾತಾನ್ನ ದಕ್ಕಿ ಅನ್ನವ ಕವರು ನಾಯಿತೆಂದು. _ಟ 4 F -