ಪುಟ:ಬತ್ತೀಸಪುತ್ತಳಿ ಕಥೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m. ೧೧೦ ಕರ್ಣಾಟಕ ಕಾವ್ಯಕಲಾನಿಧಿ, ರಾಯ ಉಗ್ರಾಣದ ಪಾರುಪತ್ಯ ಮಾಡುವವನ ಕರೆಸಿ ಕೇಳಲಾಗಿ; ಅವನು ಎಲೈ ಸ್ವಾಮಿ ? ಗಂಧಕಾಲಿಗದ್ದೆ ಉತ್ತು ಪೈರು ಮಾಡುವಾಗ ಸ್ಮಶಾನದ ಭೂಮಿ ಬೆರೆದಿದ್ದಿತು, ಅದರಿಂದ ರಾಜಾ ನಾಯ್ತೆನ್ನಲಾಗಿ ; ರಾಯನು ಸಂತೋಷಚಿತ್ತನಾಗಿ, ಸುಪರೀಕ್ಷಿತನ ಊಟದ ಸುಖಿಯಹುದೆಂದು, ಆಬಳಿಕ ಆ ರಾತ್ರೆಗೆ ತನ್ನ ಅರಮನೆಯ ಸಿಯರಲ್ಲಿ ನವಮೋಹನಾಂಗಿಯೆಂಬ ದಾನಿಯ ಕರೆಸಿ ಕಳುಹಿಸಿಕೊಡಲಾಗಿ ; ಅವಳಲ್ಲಿ ಪರಿರಂಭ ಚುಂಬನಾದಿ ಯಾದ ಕಲೆರತಿಗಳ ಮಾಡಿ, ಬಳಲಿ ಸುಖನಿದ್ರೆಗೈದು, ಬೆಳಗಾಗೆ ಎದ್ದು ರಾ ಯನ ಬಳಿಗೆ ಬರಲಾಗಿ; ರಾಯ-ರಾತ್ರೆ ಸಂಭೋಗವೆಂಥವೆಂದು ಕೇಳಲಾಗಿ; ಆತನು ಸಿ 1 ಕಾಮಕಲಾಕುಶಲವ ಬಲ್ಲ ಕಲಾಪ್ರವೀಣೆಯಾದರೂ ಹೋ ಲಸು ಹೊಡೆಯುತ್ತಿದ್ದಾಳೆ ಎಂದು ನುಡಿಯಲಾಗಿ; ರಾಯ ಅವಳ ಕರೆಸಿ ಪೂ ರವ ತಾಂತವ ಕೇಳಿದುದರಿಂದ ಅವಳಿಂತೆಂದಳು :-ನಾನು ಪಾಟಲಾಪುರದ ಪ್ರಧಾನಿ ಸುನೀತಿಯ ಮಗಳು. ನನ್ನ ಹೇಳುತ್ತಲೇ ನನ್ನ ತಾಯಿ ತೀರಿಹೋ ದುದಿಂದ, ದಶದಿನ ಈ ತಿರು ಮನೆಯಲ್ಲಿರಲಾಗದೆಂದು ಹಿರಿಯರಾದವರು ಹೇಳಿದ ಮಾತಿಗೆ, ಆಗ ನನ್ನ ತಂದೆ ಒಬ್ಬ ಮುದುಕಿಯ ಕರೆಯಿಸಿ, ಅವಳಿಗೆ ನನ್ನ ಸಾಕಿಕೊಡು ಎಂದು ಕೊಟ್ಟ ಕಾರಣ, ಆಮುದುಕಿ ನನಗೆ ಆಡಿನ ಮೊಲೆಯಡಿ, ಸಾಕಿ, ನಾನು ದೊಡ್ಡವಳಾದ ಬಳಿಕ, ಅರಮನೆಗೆ ನನ್ನ ಕರೆ ತಂದು ಒಪ್ಪಿಸಿದಳು ಎಂದ ಮಾತ ಕೇಳಿ, ರಾಯನು-ಕೂಟದ ಸುಖಿಯಹುದು ಎಂದು, ಆ ಸುಪರಿಕ್ಷಿತನಿಗೆ ಸವಾಲಕ್ಷದ ವ್ಯವ ಕೊಟ್ಟು ಕಳುಹಿಸಿದನುಎಂದ ಮಾತಿಗೆ ಇಂದ್ರಜಿತೆಯೆಂಬ ಪುತ್ತಳಿಯು ನಗುತ್ತ ಹಾಸ್ಯಗೆಯ್ಯು ಹೇಳಿದ ಉಪಕಥೆ :- ಕೇಳಯ್ಯಾ ಚಿತ್ರಶರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ಗೊರವ ಮೆಯ್ದೆ ಲಾ ಕುಂಕುಮವ ಲೇಪಿಸಿ, ರುದ್ರಾಕ್ಷಿ ಸ್ಪಟಿಕದ ಸರವ ಧರಿಸಿಕೊಂಡು, ತ್ರಿಶೂ ಲವ ಪಿಡಿದು, ಕೆಂಜೆಡೆಯ ಬಿಟ್ಟು, ರಾಯನೆದುರಾಗಿ ಬಂದು, ತನ್ನ ನಾನಾ ಪಾ-1, ಕಾಮಕಲಾಕುಶಲಂಗಳ ಬಲ್ಲವಳು, ಚೌಷಷ್ಟಿ ಕಲಾಪ್ರವೀಣೆಯಹುದು, ಆದರೂ ಜಿಡ್ಡು ನಾಲಿವಳು. ಬ 1 m