ಪುಟ:ಬತ್ತೀಸಪುತ್ತಳಿ ಕಥೆ.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


m ಬಸವಳಿಕಥೆ. ೧೧೩ ಲಕ್ಷದ್ರವ್ಯವ ಕೊಟ್ಟು ಕಳುಹಿಸಿದನೆಂದ ಮಾತಿಗೆ ತ್ರೈಲೋಕ್ಯಮೋಹಿನಿ ಯೆಂಬ ಪುತ್ತ೪ ನಗುತ್ತ ಹಾಸ್ಯಗೈದು ಹೇಳಿದ ಉಪಕಥೆ :- ಕೇಳ್ಳೆಯ ಚಿತ್ರ ಶರ್ಮನೇ ' ನನ್ನ ವಿಕ್ರಮಾದಿತ್ಯರಾಯ ಈ ರಾ ಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ಬಳೆಗಾಲ ಬಂದು ರಾಯನ ಎದುರಾಗಿ ಬಂದು ನಿಂತುಕೊಳ್ಳಲಾಗಿ ; ರಾಯ-ನೀನು ಎಲ್ಲಿಂದ ಬಂದೆ ? ಎಂದು ಕೇಳಿದುದಕ್ಕೆ, ಅವನು-ಲೈ ಮಹಾರಾಯನೇ ? ದೇಶ ತಿರುಗುವನಿಗೆ ಒಂದು ಊರೆ, ಎನ್ನಲಾಗಿ ; ರಾಯನೀ ತಿರುಗಿದ ದೇಶದಲ್ಲಿ ಏನತಿಶಯ ವೆದು ಕೇಳಲಾಗಿ ; ರಾಯನ ಮಾತಿಗೆ ಬಳೆಗಾಜನಿಂತೆಂದನು :-ಕನಕಾ ವತಿಯೆಂಬ ಪಟ್ಟಣದ ಕಾಲಭೈರವನೆಂಬ ಅರಸಿಗೆ ಸೌದಾಮಿನಿಯೆಂಬ ಮ ಗಳು ಯೌವನಸ್ಥೆಯಾಗಿರುವಳು. ಅವಳು ಹಗಲಿನಲ್ಲಿ ಪಿಶಾಚರೂಪಳಾಗಿ ಇರುವಳು. ರಾತ್ರಿಕಾಲಕ್ಕೆ ಜಗಹನ ಸಿಯಾಗಿರುವಳು-ಎಂದ ಮಾತ ಕೇಳಿ, ರಾಯ ವಿಸ್ಮಿತನಾಗಿ, ಅದ ನೋಡಬೇಕೆಂದು ಆ ಬಳೆಗಾರನ ಪಟ್ಟಣದಲ್ಲಿರಿಸಿ, ಭಟ್ಟಿಯ ಕರೆದುಕೊಂಡು ತಾನು ಬೇಚರಮಾರ್ಗದಲ್ಲಿ ಕನಕಾವತಿಯೆಂಬ ಪಟ್ಟಣಕ್ಕೆ ಹೋಗಿ, ಆಸೌದಾಮಿನಿಯ ಕಂಡು ಅವಳ ವಶೀಕಾರ ಮಾಡು ಎಂದು ಭಟ್ಟಿಗೆ ಹೇಳಿ ಕಳುಹಲಾಗಿ ; ಭಟ್ಟಿ ಅವಳ ಬಳಿಗೆ ಹೋಗಿ, ನಾನಾಯುಕ್ತಿಯಿಂದ ಮಾತನಾಡಿಸಿ ಒಡಂಬಡಿಸಿ ಒಪ್ಪಿಸಿ, ಆವಾತ ರಾಯನ ಬಳಿಗೆ ಬಂದು ಹೇಳಲಾಗಿ ; ಆ ಬಳಿಕ ರಾಯ ಅಲ್ಲಿಗೆ ಹೋಗಿ, ಅವಳಲ್ಲಿ ಏಳೆಂಟುದಿನ ಕೂಡಿದ್ದು, ಆ ಮೇಲೆ ನೀನು ಹಗಲು ಏ ಶಾಚ ರೂಪವಾಗಿರುವ ಕಾರಣವೇನೆಂದು ಕೇಳಿದ ಮಾತಿಗೆ ಅವಳಂತೆಂದ ಳು :-ಕೇಳೋ ಮಹಾರಾಯ ? ಅಂಕಾಪುರಿಯಿಂದೊಬ್ಬ ಸಿದ್ಧ ಪುರುಷ ಇಲ್ಲಿಗೆ ಬಂದು ನನ್ನ ರೂಪು ರೇಣಿ ಲಾವಣ್ಯವ ಕಂಡು ಮೋಹದಿಂದ ಭ್ರಮಿಸಿ, ತನ್ನ ಸತಿಸುತರ ಬಿಟ್ಟು ನನ್ನಲ್ಲಿ ಕೂಡಿದ್ದು ಕೆಲವು ದಿನದ ಮೇಲೆ ನನ್ನನಗಲಿ ರಲಾಕದೆ ತನ್ನ ಲಂಕಾಪುರಿಗೆ ನನ್ನ ಬಾರೆಂದು ಕರೆಯಲಾಗಿ ನಾನು ಬರುವು ದಿಲ್ಲ ಎಂದುದಕ್ಕೆ ಕೋಪಿಸಿ-ನೀನು ಹಗಲೆಲ್ಲಾ ಪಿಶಾಚಿಯಾಗು, ರಾತ್ರಿಕಾ ಲಕ್ಕೆ ಸಿಯಾಗೆಂದು ಶಪಿಸಿದನು. ಆ ಬಳಿಕ ನಾನು ದೈನ್ಯದಿಂದ ವಿಮೋ ಚನೆಯೊಂದಿಗೆ ? ಎಂದು ಕೇಳಲಾಗಿ ; ಆತ-ನೀನು ಲಂಕಾಪುರಿಗೆ ಬಂದಾಗ ವಿಮೋಚನೆಯಾಗುವುದೆಂದು ಹೇಳಿ ಹೋದನು. ಆದುದರಿಂದ ಹಗಲು ನಿಶಾ 15