ಪುಟ:ಬತ್ತೀಸಪುತ್ತಳಿ ಕಥೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ . ಚರೂಪಿನಲ್ಲಿರುವೆನೆಂದು ಹೇಳಿದ ಮಾತ ರಾಯ ಕೇಳ-ನಮ್ಮ ಪಟ್ಟಣಕ್ಕೆ ಹೋಗುವ ಬಾರೆಂದು ರಾಯ ಕರೆಯಲಾಗಿ, ಆಮಾತಿಗವಳು ಸಮ್ಮತಿಸ ಟ್ಟು ದಿ೦ದ ರಾಯ ಭಟ್ಟಿಯ ಬಳಿಗೆ ಬಂದು-ಅವಳೊಪ್ಪಿ ಸಂಗಡ ಬರುತ್ತ ಲಿದ್ದಾಳೆ ಎಂಬ ವಿಚಾರವ ಭಟ್ಟಿಯ ಸಂಗಡ ಹೇಳಲಾಗಿ ; ಆ ಭಟ್ಟಿಎಲೈ ರಾಯನೇ ! ಯರ ನಂಬಕೂಡದು. ನಿನ್ನ ಕಾರವಾದ ಬಳಿ ಕ ನಮ್ಮ ಸ್ಥಳಕ್ಕೆ ನಾವು ಹೋಗುವುದು ಮೇಲು-ಎಂದ ಮಾತ್ರ ಅವಳು ಹಿಂದೆ ಬಂದಿದ್ದು ಕೇಳಿಕೊಂಡು ಹೋಗಿ, ರಾಯ ಅಲ್ಲಿಗೆ ಬಂದ ಬಳಿಕ ಇಂತೆಂದಳು :-ಎಲೈ ಪತಿಯಾದ ಮಹಾರಾಯನೇ ! ನಾನು ನಿನ್ನ ಪಟ್ಟಣಕ್ಕೆ ಬಂದು ಅಲ್ಲಿಯ ಪಿಶಾಚಿಯಾಗಿರಬಾರದೆಂದು ಹೇಳಿದುದಕ್ಕೆ, ರಾಯ-ಅದ ಕೇನ ಮಾಡಬೇಕೆಂದು ಕೇಳಲಾಗಿ ; ಆಗ ಅವಳು ಇಂತೆಂದಳು :-ನನ್ನ ಮುಡಿಯ ತೆಗೆದು ಲಂಕಾಪುರಿಯ ಕುಂಭಿನೀದೇವತೆಗೊಪ್ಪಿಸಿದರೆ ಈ ಪಿಶಾಚ ಬಿಡುವುದೆನ್ನಲಾಗಿ ; ರಾಯ-ಹಾಗಾದರೆ ನಡೆ ಹೋಗುವ ಎಂದ ಮಾತಿಗೆ, ಅವಳು ನನ್ನ ಮುಡಿಯ ತೆಗೆದರೆ ಲೋಕದ ಜನಕ್ಕೆ ಹಾಸ್ಯವಾಗಿ ತೋರುವುದು. ನೀನು ರಾಯ, ನಿನ್ನ ಮುಡಿಯ ಕೊಡಲಾಗದು ; ನಿನ್ನ ಭಟ್ಟಿಯ ಮುಡಿಯ ತಂದರೆ ಶೀಘ್ರದಲ್ಲಿ ಹೋಗಿ ಹರಕೆಯ ಒಪ್ಪಿಸಿ ಬರ ಬಹುದು -ಎಂದ ಮಾತ ಕೇಳಿ, ರಾಯ ಆ ವಾತ ಭಟ್ಟಿಗೆ ಬಂದು ಹೇಳಲಾ ಗಿ; ಭಟ್ಟ-ಇವಳ ಮಾತೆಲ್ಲ ಸುಳ್ಳು ಎಂದು ಹೇಳಿದರೂ ಕೇಳದೆ, ರಾಯ ಅವಳ ಮಾತೇ ನಿಜವೆಂದು ಭಟ್ಟಿಯ ತಲೆಯ ಬೋಳಿಸಿ, ಆಮುಡಿಯ ಅವಳಿಗೆ ತಂದು ಕೊಡಲಾಗಿ ; ಅದ ತೆಗೆದುಕೊಂಡು, ಆ ಬಳಿಕ ಅವಳು ರಾಯನಕೂಡ ಲಂಕಾಪ್ರರಿಗೆ ಹೋಗುವಲ್ಲಿ ಭಟ್ಟಿ ಹಿಂದೆ ಹೋಗುತಿದ್ದನು. ಅವಳು ರಾತ್ರೆಯ ಕಾಲವಾದ ಬಳಿಕ ನಡೆಯಲಾಯಿತೆ, ನನ್ನ ಎತ್ತಿಕೊಎನ್ನಲಾಗಿ ; ರಾಯ ಅವಳ ಕಪಟವಿಯದೆ ಸಹಜವೆಂದು ತನ್ನ ಹೆಗಲಲ್ಲಿ ಕುಳ್ಳಿರಿಸಿಕೊಂಡು ಲಂಕಾಪುರಿಗೆ ಹೋಗಲಾಗಿ ; ಅವಳ ಮೊದಲ ದಿವ್ಯಪುರುಷನು ಕಂಡು, ಈರ್ವರ ತನ್ನ ಮನೆಗೆ ಕರಕೊಂಡು ಹೋಗಿ, ರಾಯನ-ಶಹಭಾಸು ! ನನ್ನ ಸತಿಯು ಕರೆದು ತಂದವನೆಂದು ಬಹು ಉಪಚರಿಸಿ, ರಾಯನಿಗೆ ಹದಿನೆಂಟು ಕೋಟಿ ದ್ರವ್ಯವ ಕೊಟ್ಟು ಕಳು ಹಿಸುವಲ್ಲಿ, ಅವಳಿಂತೆಂದಳು :-ಎಲೈ ರಾಯ ! ನಾವಿಬ್ಬರೂ ಒಂದು '