ಪುಟ:ಬತ್ತೀಸಪುತ್ತಳಿ ಕಥೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸಪುತ್ತಳಿಕಥೆ ೧೧೫ ಹರಕೆಯೊಪ್ಪಿಸುವ ಸಮಯದಲ್ಲಿ ನನ್ನ ಪೂರ್ವದ ಪುರುಷನ ಕಂಡೆನು, ನೀನು ಹೋಗು ಎಂದ ಮಾತಿಗೆ ರಾಯ ಲಜ್ಜಿತನಾಗಿ, ಭಟ್ಟಿಯ ಬಳಿಗೆ ಬಂದು-ನಿನ್ನ ಮಾತ ಕೇಳದೆ ಕಾರ್ ಕೆಟ್ಟತನ್ನಲಾಗಿ ; ಭಟ್ಟಿಯಿಂತೆಂ ದನು :-ಎಲೈ ರಾಯ ! 1ಹಿಂದೆ ಯರ ಮಾತಿಗೊಳಗಾಗಿ ಬಹುಜನ ಕೆಟ್ಟರು. ಅವಳ ಮಾತು ಬದ್ದವೆಂದು ನೀನು! ಅವಳಿಗೆ ಕುದುರೆಯಾದೆ, ನಾನು ಬೋಳನಾದೆನು-ಎಂದು ರಾಯನಿಗೆ ತಿಳಿಯ ಹೇಳಿ, ಅಲ್ಲಿಂದೀರ್ವರೂ ಇಲ್ಲಿಗೆ ಬಂದು, ರಾಯ ಆ ಬಳೆಗಾಜನಿಗೆ ಹದಿನೆಂಟು ಕೋಟಿ ದ್ರವ್ಯವ ಕೊಟ್ಟು ಕಳುಹಿಸಿ, ತಾನು ಸುಖವಾಗಿದ್ದನು-ಎಂದು ಪುತ್ರ ೪ ನುಡಿಯಲು ; ಭೋಜರಾಯನು ಅಜ್ಜಿತನಾಗಿ, ತನ್ನ ಅರಮನೆಯ ಪೊಕ್ಕನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ತ್ರೈಲೋಕ್ಯ ಮೋಹಿನಿಯೆಂಬ ಪುಳಿ ಪೇಳಿದ ಇಪ್ಪತ್ತಾರನೆಯ ಕಥೆ.

  • ೨೭ ನೆಯ ಕಧೆ.

ಇಪ್ಪತ್ತೇಳನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ ರ್ಚನೆ ಭೋಜನ ತಾಂಬೂಲವ ತಿರಿಸಿಕೊಂಡು ಎಂದಿನಂತೆ ಸಿಂಹಾಸನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ಕನಕಾ ವತಿಯೆಂಬ ಪುತ್ತಳಿಯು-ಹೋ ಹೋ ! ನಿಲ್ಲು ನಿಲ್ಲು ' ಎಂದು ಧಿಕ್ಕರಿಸ ಲಾಗಿ ; ಭೋಜರಾಯನು ಖಿನ್ನನಾಗಿ ಬೇರೆ ಸಿಂಹಾಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಹೇಳಿಸಿದ ಕಥೆ :- ಎಲೆ ಪುತಳಿಯೇ : ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖರಾಜ್ಯಗೆಯುವಲ್ಲಿ ಒಂದು ದಿನ ತನ್ನ ಚತುರಂಗಬಲ ಸಮೇತವಾಗಿ ಸಾರಿ ಬರುವಾಗ, ಒಬ್ಬ ನಿಧನಿಕನು ಕಟ್ಟಿಗೆಯ ಹೊರೆಯ ಪಾ-1, ಹಿಂದಣ ಗತಿಗಳೆಲ್ಲಾ ಹೀಗೆ, ಹೆಂಗಸರ ಮಾತ ಕೇಳಿದವರು ಮಹಾ ಮಹಾ ಜನಂಗಳು ಮಣ್ಣಿಗೆ ಮಣ್ಣು ಕೂಡಿ ಹೋದರು. ಈ ಕಥೆ ಯು ಆಶ್ಚರೈವೆಂದು ನೀನು. M ಬ......