ಪುಟ:ಬತ್ತೀಸಪುತ್ತಳಿ ಕಥೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸಪುತ್ತಳಿಕಧೆ. M ಕೇಳ್ಳೆಯ ರಾಯನೇ ? ಬರುವ ಆನೆ ತನಗೆ ಎಡಗಡೆ ಇರುವ ಮರಗಳ ಮುರಿಯುವುದ ನೋಡಿ ಅದಕ್ಕೆ ಬಲಗಣ್ಣು ಕುರುಡು ಎಂದೆನು. ಆನೆ ಯಾವ ಕಡೆಗೆ ಹೋದರೂ ಸುಮ್ಮನೆ ಕುಳಿತಿರುವುದಕ್ಕೆ ಅವಳು ಹೆಂಗಸು ಎಂದೆನು | ಅವಳು ಆನೆಯ ಮೇಗಳಿಂದ ಕೆಳಗಿಳಿದು ಜಲಬಾಧೆ ಮಾಡಿ ಕೈಯಲ್ಲಿ ಎದ್ದುದಕ್ಕೆ ಅವಳು ಗರ್ಭಿಣಿಯೆಂದೆನು. ಈ ರಾಜಕುಮಾರ ಯಾರಿಗೂ ತಾಂಬೂಲ ಕೊಡದೆ ತಾನೇ ಸೇವಿಸುತ್ತ ಬರುವುದಕ್ಕೆ ಕೋಮಟಿಗನಿಗೆ ಉದಿಸಿದವನು, ಎಂದೆನು- ಎಂದ ಮಾತ ಕೇಳಿ, ರಾಯ ಮೆಚ್ಚಿ , ಇಲ್ಲಿಗೆ ಅವನ ಕರೆತಂದು ಒಂಬತ್ತು ಕೋಟಿ ದ್ರವ್ಯವ ಕೊಟ್ಟು, ತಾನು ಸುಖವಾಗಿ ದೇನು ಎಂದು ಹೇಳಲು -- ಭೋಜರಾಯ ಲಜ್ಜಿತನಾಗಿ ತನ್ನ ಅರಮನೆಯ ಹೊಕ್ಕನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಕನಕಾವತಿಯೆಂಬ ಪುತ್ತಳಿ ಹೇಳೆದ ಇಪ್ಪತ್ತೇಳನೆಯ ಕಥೆ. ಮ ೨೮ ನೆಯ ಕಥೆ. ಒ ಜ -೨ ಇಪ್ಪತ್ತೆಂಟನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ಎಂದಿನಂತೆ ನಿಂಹಾಸ ನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ಅನಂಗಸೇನೆಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜರಾಯನು ಬೇರೆ ನಿಂಹಾಸನದಲ್ಲಿ ಕುಳಿತು ಚಿತ್ರಶರ್ಮನಿಂದ ಹೇಳಿಸಿದ ಕಥೆ :- ಎಲೆ ಪುತ್ತಳಿಯೇ ' ಕೇಳು. ಧಾರಾಪುರದಲ್ಲಿ ನಮ್ಮ ರಾಯ ಸುಖ ರಾಜ್ಯಗೆಯ್ಯುವಲ್ಲಿ ಒಂದು ದಿನ ಅಗ್ರಹಾರದ ದೇವಶರ್ಮನೆಂಬ ಬ್ರಾಹ್ಮಣ ದರ್ಭೆಗಳ ನಿಮಿತ್ತವಾಗಿ ಅರಣ್ಯದಲ್ಲಿ ಚರಿಸುತ್ತಿರುವಲ್ಲಿ, ಒಂದು ಬ೪ ಯಲ್ಲಿ ಒಂಬತ್ತು ಕೋಟಿ ದನ್ಯವ ಕಂಡು, ಅದ ತೆಗೆದುಕೊಂಡು ಹೋಗಿ, ತನ್ನ ಶ್ರಮವ ತೀರಿಸಬೇಕೆಂದು ಯೋಚಿಸಿ, ಅಷ್ಟಲಲ್ಲೇ ತನ್ನ ಸತಿಯ ಬಾಯಿ ಒಳ್ಳೆಯದಲ್ಲ, ಯಾರ ಸಂಗಡಲಾದರೂ ಹೇಳಿದರೆ ರಾಜರುಗಳಿಂದ