ಪುಟ:ಬತ್ತೀಸಪುತ್ತಳಿ ಕಥೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ My ಕರ್ಣಾಟಕ ಕಾವ್ಯಕಲಾನಿಧಿ, ಉಪಾಧಿ ತಟ್ಟಿತೆಂದು ತನ್ನ ಸತಿಯ ಚಿತ್ತವ ಪರಿಶೋಧಿಸಿ ಬಂದು, ತೆಗೆದು ಕೊಂಡು ಹೋಗುವ-ಎಂದು ಊರಿಗೆ ಬಂದು, ತನ್ನ ಮನೆಯಲ್ಲಿ ಸ್ನಾನದೇ ವತಾರ್ಚನೆ ಭೋಜನವ ಮಾಡಿ, ಏಕಾಂತದಲ್ಲಿ ತನ್ನ ಸತಿಯ ಸಂಗಡ ಭಿನ್ನ ತಂತ್ರವಾಗಿ ಇಂತೆಂದನು :-ಎಲೌ ಸತಿಯೇ : ನಾನು ಅರಣ್ಯದಲ್ಲಿ ಬಹಿ ರ್ಭಮಿಗೆ ಹೋದಲ್ಲಿ ಆಸನದಲ್ಲಿ ಒಂದು ಬಿಳಿಯಕಾಗೆ ಬಿದ್ದಿತು, ಈವಾತ ಯಾರಿಗೂ ಹೇಳಬೇಡವೆನ್ನಲಾಗಿ ; ಅವಳು ಒಬ್ಬರಿಗೂ ಹೇಳುವುದಿಲ್ಲ ಎಂದು ಪತಿಯಕೊಡೆ ಹೇಳಿ, ಆಕ್ಷಣವೇ ನೆರೆಯವರ ಕೊಡೆ ತನ್ನ ಗಂಡನ ಕುಂಡೆಯಲ್ಲಿ ಮೂಲು ಬಿಳಿಯ ಕಾಗೆ ಹುಟ್ಟಿತೆಂದು ಊರಿಗೆಲ್ಲಾ ಹೇಳಿ, ಅದ ಕೇಳಿದವರು ದೇವಶರ್ಮನ ಹೊಟ್ಟೆಯಲ್ಲಿ ನೂಕು ಬಿಳಿಯ ಕಾಗೆ ಹುಟ್ಟಿತೆಂದು ಊರಿಗೆಲ್ಲಾ ಹೇಳಿದ ವರ್ತಮಾನವ ರಾಯ ಕೇಳಿ, ಆತನ ಕರೆತರಿಸಿ-ಎಲೈ ನಿನ್ನ ಗುದದಿಂದ ನೂಲು ಬಿಳಿಯಕಾಗೆ ಹುಟ್ಟಿತೆಂದು ಹೇಳುತ್ತಾರೆ. ಇದು ನಿಜವೇ ? ಎನ್ನಲಾಗಿ , ಅವನು-ಕೇಳ್ಳೆಯ ರಾಯ ನೇ ! ಅರಸುಗಳಲ್ಲಿ ಮಿತ್ರರಲ್ಲಿ ಹಿರಿಯರಲ್ಲಿ ಗುರುವಿನಲ್ಲಿ ತಾಯಿತಂದೆ ಗಳಲ್ಲಿ ಸುಳ್ಳು ಆಡಬಾರದು ಎಂಬ ನೀತಿಯಿರುವುದಿ೦ದ, ನಿನ್ನ ಕೂಡ ಅಬದ್ದವ ನುಡಿಯಲಾಗದೆಂದು ಇಂತೆಂದನು:-ನನ್ನ ಸತಿಯ ಸಂಗಡ ಒಂದು ಬಿಳಿಯ ಕಾಗೆ ಆಸನದಲ್ಲಿ ಬಿದ್ದಿತೆಂದು ಹೇಳಿದುದುಂಟು. ಅದೇತಕೆಂದರೆ- ಅರ ಇಲ್ಯದಲ್ಲಿ ಒಂಬತ್ತು ಕೋಟಿ ನಿಕ್ಷೇಪದ್ರವ್ಯವ ಕಂಡು ಮಸಿ ಈಮೇರೆ ಹೇಳಿದೆನೆಂದು ಹೇಳಲಾಗಿ ; ರಾಯ ಈತನಲ್ಲಿ ಕಪಟವಿಲ್ಲದುದkಿಂದ ತಾನು ಕಂಡ ಸ್ಥಿತಿ ಹೇಳಿದ, ಯಥಾರ್ಥವಾದಿ ಎಂದು, ಅವನ ಮಾತ ಕೇಳಿ ಪರಿತೋ ಪವ ಮಾಡಿಕೊಂಡು, ಅರಣ್ಯದಲ್ಲಿ ಆತ ಕಂಡಿದ್ದ ದ್ರವ್ಯವ ತೆಗೆಸಿ, ಆತನಿಗೆ ಕೊಟ್ಟು ತಾನೂ ಸವಾಲಕ್ಷ ಹೊನ್ನ ಕೊಟ್ಟು ಕಳುಹಿಸಿದನು-ಎಂದ ಮಾ ತಿಗೆ ಅನಂಗಸೇನೆಯೆಂಬ ಪುತ್ತಳಿ ನಗುತ್ತ ಹಾಸ್ಯಗೆಯು ಹೇಳಿದ ಉಪಕಥೆ :- ಕೇಳ್ಳೆಯ ಚಿತ್ರಶರ್ಮನೇ ? ನಮ್ಮ ಮಹಾರಾಯ ಈರಾಜ್ಯ ಮಾಲಿ ಸುವ ವೇಳೆಯಲ್ಲಿ ಒಂದು ದಿನ ಒಬ್ಬ ಯತಿ ಬಂದು ರಾಯನಿಗೆ ಆಶೀರ್ವಾ ದನ ಮಾಡಲಾಗಿ ; ರಾಯ ನಮಿಸಿ ಕುಳ್ಳಿರಿಸಿಕೊಂಡು ಎಲ್ಲಿಂದ ಒಂದಿರಿ ? ಎನ್ನಲಾಗಿ ; ಆಯತಿ-ಎಲೈ ಮಹಾರಾಯನೆ, ಹಿಮವತ್ಪರ್ವತದಿಂದ m