ಪುಟ:ಬತ್ತೀಸಪುತ್ತಳಿ ಕಥೆ.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


F ಬತ್ತೀಸಪುತ್ತಳಿಕಥೆ. ಬಂದೆನು ? ಎನ್ನಲಾಗಿ ;-ಅನತಿಶಯವೆಂದು ಕೇಳಿದುದಕ್ಕೆ, ಅಲ್ಲಿರುವ ಹಿಮವತಾರೇಶ್ವರನ ಗೋಪುರದ ಬಳಿಯಲ್ಲೊಂದು ಕೊಳವಿದೆ. ಅದ ಇಲ್ಲಿ ಸ್ನಾನ ಮಾಡಿದವರ ಆನೆ ನುಂಗುವುದು. ಅದಕ್ಕೆ ತಪ್ಪಿಸಿಕೊಂಡು ಸ್ನಾನಮಾಡಿದರೆ ಹದಿನಾಲ್ಕು ಲೋಕದಲ್ಲಿ ನಡೆವ ವರ್ತಮಾನವೆಲ್ಲಾ ತಿಳಿ ಯುವುದು ಎಂದು ಹೇಳಿದ ಮಾತ ಕೇಳಿ, ರಾಯ ಅದ ನೋಡಲೇಬೇಕೆಂದು. ಆಕ್ಷಣವೇ ಆಕಾಶಮಾರ್ಗದಲ್ಲಿ ಅಲ್ಲಿಗೆ ಹೋಗಿ, ಆ ಕೇತಾರೇಶ್ವರನ ಪೂಜಿಸಿ, ಆ ಕೊಳದಲ್ಲಿ ಸ್ನಾನ ಮಾಡುವ ಸಮಯದಲ್ಲಿ ಆನೆ ನುಂಗುವು ದಕ್ಕೆ ಬರಲಾಗಿ; ಶೀತಾಳ ಪತ್ರದಿಂದ ಆನೆಯ ಸಿ-೪, ಆ ಕೊಳದಲ್ಲಿ ಸ್ನಾನವ ಮಾಡಿ, ಸಕಲಲೋಕದ ವಿದ್ಯೆಯ ತಿಳಿದು, ಅಲ್ಲಿಂದ ಮೇಲಕ್ಕೆ ಬಂದು ನಿಂದಿ ರಲಾಗಿ ; ಆ ಕೇತಾರೇಶ್ವರನು ಪ್ರಸನ್ನನಾಗಿ-ಎಲೈ ರಾಯ ! ನಿನ್ನ ಧೈಯ್ಯ ಸಾಹಸಕ್ಕೆ ಮೆಚ್ಚಿದೆನು. ನಿನಗೆ ಬೇಕಾದ ವರವ ಬೇಡು-ಎನ್ನಲಾಗಿ ; ರಾಯನು-ಎಲೈ ದೇವನೆ : ಈ ಯತಿಗಿಷ್ಟಾರ್ಥವಿತ್ತರೆ ನನಗೆ ಕೊಟ್ಟಂತೆ, ಎನ್ನಲಾಗಿ; ರಾಯನ ಮಾತಿಗಾಗಿ ಆ ಯತಿಗೆ ಇಷ್ಟಾರ್ಥವ ಪಾಲಿಸಿ, ರಾಯನ ನೀನು ಪರೋಪಕಾರಿಯಹುದೆಂದು ಹೇಳಿ, ದೇವನು ಸಕಲ ಕಾಮ್ಯಾ ರ್ಥವೀವುದೊಂದು ರತ್ನವ ಕೊಟ್ಟು, ಅದೃಶ್ಯವಾದನು. ರಾಯ ಆ ರತ್ನವ ತೆಗೆದುಕೊಂಡು,--ಯತಿಯ ಸುಖವಾಗಿರುತ್ತೀರಿ ಎಂದು ಹೇಳಿ, ಅಲ್ಲಿಂದ ಬರುವ ದಾರಿಯಲ್ಲಿ ಒಬ್ಬ ಅರಸು ರಾಜ್ಯಭ್ರಷ್ಟನಾಗಿ ಬರುವುದ ಕಂಡುನೀನು ಯಾವ ದೇಶ ? ಎಲ್ಲಿಗೆ ಹೋಗುವೆ ? ಎಂದು ಕೇಳಲಾಗಿ ; ರಾಯನಿಗೆ ತಾನು ಶರಣಾಗತನಾಗಿ-ನಾನು ಕುಂತಲದೇಶದರಸು, ಎಂದು ತನ್ನ ವೃತಾ೦ ತವ ವಿವರಿಸಲಾಗಿ ; ರಾಯ ಮುಗಿ ದೇವ ತನಗೆ ಕೊಟ್ಟಿದ್ದ ಸಕಲ ಕಾಮ್ಯಾರ್ಥವೀವ ರತ್ನವ ಆ ಅರಸಿಗೆ ಕೊಟ್ಟು,-ಈ ರತ್ನ ಏನು ಬಯಸಿ ದಾಗ್ಯೂ ಕೊಡುವುದೆಂದು ಹೇಳಿ, ಆತನ ಸಂತೈಸಿ ಕಳುಹಿಸಿ, ತಾನು ಇಲ್ಲಿಗೆ ಬಂದು ಸುಖವಾಗಿದ್ದನು-ಎಂದು ಹೇಳಲು, ಭೋಜರಾಯನು ಅಪ್ರಯೋ ಜಕನಾದೆನೆಂದು ಖಿನ್ನನಾಗಿ ತನ್ನ ಅರಮನೆಯ ಸೇರಿಕೊಂಡನು. ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಅನಂಗಸೇನೆಯೆಂಬ ಪುತ್ತಳಿ ಪೇಳಿದ ಇಪ್ಪತ್ತೆಂಟನೆಯ ಕಥೆ. v ೩ ೮ ೨