ಪುಟ:ಬತ್ತೀಸಪುತ್ತಳಿ ಕಥೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಕರ್ಣಾಟಕ ಕಾವ್ಯಕಲಾನಿಧಿ, ೨೯ ನೆಯ ಕಥೆ. M ಇಪ್ಪತ್ತೊಂಬತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವ ತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಎಂದಿನಂತೆ ನಿಂಹಾಸ ನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ -ಆ ಸೋಪಾನದ ಸಂಧ್ಯಾವತಿಯೆಂಬ ಪುತ್ತಳಿಯು-ಹೊಹೊ ? ಎಂದು ಧಿಕ್ಕರಿಸಲಾಗಿ ; ಭೋಜರಾಯನು ಖಿನ್ನನಾಗಿ, ಬೇಳೆ ನಿಂಹಾಸನದಲ್ಲಿ ಕುಳಿತು, ಚಿತ್ರಕ ರ್ಮನಿಂದ ಹೇಳಿಸಿದ ಕಥೆ - ಎಲೆ ಪುತ್ತಳಿಯೆ ! ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖ ರಾಜ್ಯ ಗೆಯ್ಯುವಲ್ಲಿ ನೆರೆಜಾಣರುಂಟೋ ಇಲ್ಲವೋ ತಿಳಿಯಬೇಕೆಂದು, ಸೀಮೆ ಗ್ರಾಮಾಂತರಗಳಿಗೆಲ್ಲಾ-ಸತ್ತವನ ಕೈರಸವ' ನೀನಿರಿನ ಬಾವಿಯ ಸಹ ಕಳುಹಿಸುವುದೆಂದು ನಿರೂಪಗಳಲ್ಲಿ ಬರೆಯಿಸಿ, ಊ೪ ಗದವರ ಕೈಯಲ್ಲಿ ಕೊಟ್ಟು ಕಳುಹಿಸಲಾಗಿ ; ಆ ಊಳಿಗದವರು ಗ್ರಾಮ ಗ್ರಾಮಕ್ಕೆ ಹೋಗಿ, ಆ ನಿರೂಪಗಳ ಕೊಟ್ಟುದ ನೋಡಿ, ಬರೆದಿರುವ ಬಕ್ಕೆ ಣೆಗೆ ಯಾರೂ ಉತ್ತರವ ಕೊಡದೆ ಇರುವ ಕಾರಣ, ಪ್ರವೀಣವೀರ ಪಟ್ಟಣದ ವಚನಸೂರ ಕಂಡು ರಾಯನ ನಿರೂಪವ ತೆಗೆದುಕೊಂಡು, ಒಕ್ಕ ಣೆಯ ಓದಿನೋಡಿ ' (ರಸ) ಎಂಬುದು ಲವಣ, ಸತ್ತವನೆಂದರೆ ದರಿದ್ರನು ಎಂದು ನಿಕ್ಷೆ ಸಿ, ಬಾವಿಗೆ ಉತ್ತರತೊಡದೆ ಆಗ ಒಬ್ಬ ದರಿದನ ಕರೆತಂದು ಅವನ ಕೈಯಲ್ಲಿ ಉಪ್ಪುಕೊಟ್ಟು, ಬದಲು ಬಿನ್ನವತ್ತಲೆಯಲ್ಲಿ ತಮ್ಮ ಅಪ್ಪಣೆ ಮೇರೆಗೆ ಸತ್ತವನ ಕೈರಸ ಕಳುಹಿಸಿದ್ದೇನೆ. ಬಾವಿಸಿ ಕಳುಹಿಸು ವೆನೆಂದರೆ ಬಾವಿ ಬಹು ಅಗಡಾಗಿ ಇದೆ. ತಮ್ಮ ಸನ್ನಿಧಿಯಲ್ಲಿ ಸಾದಾಗಿ ರುವ ಬಾವಿಯ ನನ್ನ ಮೇಲೆ ಕಟಾಕ್ಷವಿಟ್ಟು ಇಲ್ಲಿಯ ತನಕ ಕಳುಹಿಸಿಕೊ ಟ್ಟರೆ, ಆ ಎರಡೂ ತೆಕ್ಕೆಯಹಾಕಿ ಕಳುಹಿಸುತ್ತಿದ್ದೇನೆ ಎಂದು ಅದಲ್ಲಿ ಬರೆದುಕೊಟ್ಟು ಕಳುಹಿಸಲು ; ಹಾಗೆ ಬರೆದಿರುವ ಬಿನ್ನವತ್ತಲೆಯ ರಾಯ ಓದಿಸಿ, ಕೇಳಿ, ಸಂತೋಷಪಟ್ಟು-ಇಂಥ ಚತುರತೆಯುಳ್ಳವನು ನನ್ನ ಬಳಿ ಯಲ್ಲಿ ಇರಬೇಕೆಂದು, ಅವನ ಕರೆಸಿ, ಸಮ್ಮುಖದಲ್ಲಿ ಇರಿಸಿಕೊಂಡು ಪಾ-1, ಸತ್ತವನ ಕೈಯಲ್ಲಿ ಸಲ್ಫರಸವ. 2 ಸಲ್ವರಸ, ಸರ್ವಬಾವಿಯನ್ನೂ, ಟ