ಪುಟ:ಬತ್ತೀಸಪುತ್ತಳಿ ಕಥೆ.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨೩ ವ| ಬತ್ತೀಸ ಪುತ್ತಳಿಕಥೆ . ೪ದ ಮಾತ ಕೇಳಿ. ಆ ಹಿಟ್ಟಿನಲ್ಲಿ ಅವಳು ಬಿದ್ದು ಹೋದುದ ರಾಯ ಕಂ ಡು,-ಕಾಂತೆ ಹೋದಳೇ ! ಎಂದು ಅವಳ ಗುಣವ ಆಡುತ್ತ, ರಾಯನು ಎಲೆ ಕಾಂತೆಯೇ ! ನಿನ್ನ ನಿರ್ಧರದ ನಡತೆಗೆ ಮೆಚ್ಚೆದೆ, ನಿನಗೇನು ಬೇಕಾ ದರ ಕೊಡುವೆನು ಕೇಳಿಕೊ ಎನ್ನಲಾಗಿ ; ತನ್ನ ಜೀವನ ಪಡೆದುದ ಕಂಡು, ಅವಳು ಮುಗುಳುನಗೆಯಿಂದ ತೋರಣಗಂಭದಲ್ಲಿ ಒಬ್ಬ ಭೈರ ವ ಜೋಗಿ ಶೂಲದಲ್ಲಿ ರುವನು, ಅವನ ಪಾತಿ ತಂದುಕೊಡಬೇಕು ಎಂದು ದಕ್ಕೆ, ರಾಯ-ಅವನು ಯಾರು ? ಎನ್ನಲಾಗಿ ; ಆತ ನನ್ನ ಪತಿಯಾಗಬೇ ಕೆಂದ ಮಾತ ಕೇಳಿ, ಭಟ್ಟಿಯು ಹೇಳಿದ ಮಾತು ಸರಿ ಬಂದಿತು ಎಂದು ಯೋ ಚಿಸುವಲ್ಲಿ; ಅದ ಭಟ್ಟಿಯು ತಿಳಿದು-ರಾಯನೊಡನೆ ಇಂತೆಂದನು:-ಕೆ. ಳ್ಳೆಯ ರಾಯನೆ! ನಿನ್ನ ಸಾಹಸ ಪರಾಕ್ರಮ ಉದಾರಗಣ ಲೋಕವಿಖ್ಯಾತಿ ಯಾಗಿರುವುದ ಕೇಳಿ, ಇವಳು ತನ್ನ ಕಾವ್ಯಕ್ಕೊಸ್ಕರ ನಿನ್ನ ಕನಸಿನಲ್ಲಿ ಕಂಡೆನೆಂದು ಕಪಟದಿಂದ ತನ್ನ ದೂತಿಯ ಕಡೆ ಹೇಳಿ ಕಳುಹಿಸಿ, ನಿನ್ನ ಬರಮಾಡಿಕೊಂಡು, ಅಲ್ಲಿ ತಾನು ನಿನ್ನಲ್ಲಿ ವಶೀಕರವಾದಂತೆ ತೋwಿಸಿ, ವ್ಯಾ ಮೋಹ ಹುಟ್ಟಿಸಿ, ಪ್ರಾಣಶಕ್ಯಂತರ ಮೆಚ್ಚಿಸಿ, ತನ್ನ ಕಾರ್ ಸಾಧಿಸಿಕೊಂ ಡಳು-ಎಂದು ಹೇಳಿದ ವಾಕ್ಕಿಗೆ ರಾಯನೊಡಂಬಟ್ಟು, ಮಾತಿಗೆ ತಪ್ಪಬಾರ ದೆಂದು, ಇವಳ ಕಪಟದ ಮಾತ್ರ ಸಲ್ಲಿಸಿ ಕೊಡುವ ಬಾರೆಂದು ಭಟ್ಟಿಯು ಸಹಿತ ಅವಳ ಕರೆದುಕೊಂಡು, ಬೇಚರದಲ್ಲಿ ನೀಲಾವತಿಯೆಂಬ ಪಟ್ಟಣದ ಅಂಬಿಕಾದೇವಿಯ ಗುಡಿಯ ಮುಂದಣ ತೋರಣಗಂಭದ ಶಲದ ಬಳಿಗೆ ಹೋಗಿ, ಆ ಶಲದಲ್ಲಿದ್ದವನ ಸಂಜೀವನ ವಿದ್ಯದಿಂದ ಬದುಕಿಸಿ, ತನಗೊಲಿ ದವಳು ಅನ್ಯವಶವಾದಳೆಂಬ ವಿರೋಧವಿಲ್ಲದೆ ಅವನಿಗೆ ಕೋಟ ವ್ಯವ ಕೊಟ್ಟು ಸುಖವಾಗಿರಿ ಎಂದು ಹೇಳಿ, ಅಲ್ಲಿಂದ ಭಟ್ಟ ಸಹಿತ ಇಲ್ಲಿಗೆ ಬಂದು ತಾನು ಸುಖವಾಗಿ ಇದ್ದನು-ಎಂದು ಹೇಳಲು ; ಭೋಜರಾಯನು ತಿರವ ಬಾಗಿಸಿಕೊಂಡು ತನ್ನ ಅರಮನೆಗೆ ಹೊಕ್ಕನು. ಇ೦ತು ಕರ್ಣಾಟಕ ಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಸಂಧ್ಯಾವತಿಯೆಂಬ ಪುತ್ತಳಿ ವೇಳಿದ ಇಪ್ಪತ್ತೊಂಬತ್ತನೆಯ ಕಥೆ.