ಪುಟ:ಬತ್ತೀಸಪುತ್ತಳಿ ಕಥೆ.djvu/೧೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨೪ ಕರ್ಣಾಟಕ ಕಾವ್ಯಕಲಾನಿಧಿ. ಮೂವತ್ತನೆಯ ಕಥೆ. ಮೂವತ್ತನೆಯ ದಿವಸದಲ್ಲಿ ಭೋಜರಾಯನು ಸಾನ ದೇವತಾರ್ಚ ನೆ ಭೋಜನ ತಾಂಬೂಲವ ತಿರಿಸಿಕೊಂಡು ಎಂದಿನಂತೆ ಸಿಂಹಾಸನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ, ಆ ಸೋಪಾನದ ಕಾಮಕರ್ಣಿಕೆ ಯೆಂಬ ಪುತ್ತಳಿಯು--ಹೊಹೋ ನಿಲ್ಲು ನಿಲ್ಲು ' ಎಂದು ಧಿಕ್ಕರಿಸಲಾಗಿ ; ಭೋಜರಾಯನು ಲಜ್ಜಿತನಾಗಿ ಬೇಯತೆ ನಿಂಹಾಸನದಲ್ಲಿ ಕುಳಿತು, ಚಿತ್ರ ಶರ್ಮನಿಂದ ಸೇಳಿದ ಕಥೆ :- ಎಲೆ ಪುತ್ತಳಿಯೆ : ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖದಿಂದ ರಾಜ್ಯಗೆಯ್ಯುವಲ್ಲಿ ಒಂದು ದಿನ ಆ ಪುರದ ವಿಕ್ರಮನೆಂಬ ವೀರನು ಬಹುದರಿದ್ರನಾಗಿ ಸತಿಸುತರ ಸಾಕಲಾಕದೆ ಒಂದು ದಿನ ಊರಮುಂದಿರುವ ಭೈರವನ ಗುಡಿಗೆ ಹೋಗಿ, ಆ ದೇವರ ಪ್ರೌಡಶೋಪಚಾರದಿಂದ ಪೂಜಿಸಿ, ಕೊರಲಿಗೆ ಗಂಡುಗರಿಯ ಹಾಕಿಕೊಂಡು ತಿರವ ಕತ್ತರಿಸುವ ವೇಳೆಯಲ್ಲಿ ಆ ಭೈರವನು ಪ್ರಸನ್ನನಾಗಿ-ನಿನಗೆ ಬೇಕಾದ ವರವ ಕೇಳಿಕೊ ಎನ್ನ ಲಾಗಿ ; ಅವ ತನ್ನ ದವನ ಬಿಡಿಸಿ ಸಕಲೈಶ್ವರ ಪಾಲಿಸೆಂದು ಬೇಡಿದು ದಕ್ಕೆ-ಆ ದೇವ ತನ್ನ ಕೈಯಲಿದ್ದ ಡಮರುಗವ ಕೊಟ್ಟು -ಇದು ನೀನು ಕೇ ಆದುದ ಕೊಡುವುದು, ನಿನ್ನ ನೆರೆಮನೆಯವರಿಗೆ ನಿನಗಿಂತ ಭಾಗ್ಯ ಹೆಚ್ಚಾಗಿ ಬರುವುದು ; ಅದ ಕಂಡು ನೀನು ವ್ಯಸನಪಡಬೇಡ ಎಂದು ಹೇಳಿ ಕಳುಹಿ ಸಲಾಗಿ ; ಅವನು ಡಮರುಗವ ತೆಗೆದುಕೊಂಡು, ತನ್ನ ಮನೆಗೆ ಬಂದು ನೆರೆ ಮನೆಯವರಿಗೆ ನನಗಿಂತ ಮಿಗಿಲಾಗಿ ಭಾಗ್ಯ ಬಂದರೆ ನಾನು ಹೇಗೆ ಸೈರಿಸಲಿ ಎಂದು ತನಗೆ ಹತ್ತು ವರಹ ಬರಲೆಂದು ಆ ಡಮರುಗವ ಬಡಿದು ಭಜಿಸ ಲಾಗಿ ; ನೆರೆಯವಗಿಪ್ಪತ್ತು ತನಗೆ ಹತ್ತು ವರಹ ಬಂದುದ ತಿಳಿದು, ತನಗೆ ಇಪ್ಪತ್ತು ವರಹ ಬರಲಿ ಎಂದು ಮಿಡಿದುದಕ್ಕೆ ನೆರೆಯವರಿಗೆ ನಾಲತ್ತು ವರಹ ತನಗೆ ಇಪ್ಪತ್ತು ವರಹ ಬರಲಾಗಿ ; ಈ ಮೇರೆ ಆ ಡಮರುಗವ ಮಿಡಿಯುತ್ತ ನೂಕಾಲು ಕೋಟಿದ್ರವ್ಯವುಂಟಾಗಿ ನೆರೆಯವರಿಗೆ ಒಂದಕ್ಕೆ ಡಾಗಿರುವುದ ಕಂಡು, ಅವರ ಕೆಡಿಸುವ ಯೋಚನೆಯ ಪ್ರತಿನಿತ್ಯ ಮಾಡು ವುದ ಅವನ ಸತಿಸುತರು ತಿಳಿದು,ಅವರವರ ಪುಣ್ಯದಿಂದ ನೆರೆಹೊರೆಯು