ಪುಟ:ಬತ್ತೀಸಪುತ್ತಳಿ ಕಥೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಿ ಕರ್ಣಾಟಕ ಕಾವ್ಯಕಲಾನಿಧಿ. ರಾಯ ಕೇಳಿ ಇಂತೆಂದನು:-ಕೇಳ್ಳೆಯ, 'ಪುಣ್ಯ ಕಾಲಕ್ಕೆ ಅರಣ್ಯದಲ್ಲಿದ್ದರೂ ಸುಖವುಂಟು ; ಪುಣ್ಯ ತಪ್ಪಿದರೆ ಬೆಣ್ಣೆ ಮೆದ್ದರೂ ಹಲ್ಲು ಮುರಿಯುವುದು? ಎಂದು ಹೇಳಿ, ನಿನ್ನ ಯೋಗ ಚೆನ್ನಾಗಿರುವಾಗ ಬಂದ ವಿಪತ್ತುಗಳೆಲ್ಲಾ ಬಯಲಾಯಿತೆಂದು, ನಮ್ಮ ರಾಯನು ಜಯಪಾಲನ ಸಂತವಿಟ್ಟು, ಆ ಬಳಿಕ ತಾನು ಖೇಚರದಲ್ಲಿ ಆ ಸುವರ್ಣದ್ವೀಪಕ್ಕೆ ಹೋಗಿ, ಆ ಮಣ್ಣ ತೆಗೆಸಿ ಕೊಂಡು ಬಂದು, ಈ ಪಟ್ಟಣವನೆಲ್ಲಾ ಸುವರ್ಣಮಯವ ಮಾಡಿ, ಸಕಲ ರಿಗೂ ಸಂಪತ್ತುಂಟುಮಾಡಿ ಜಯಪಾಲನಿಗೆ ಹತ್ತು ಕೋಟಿ ದ್ರವ್ಯವ ಕೊ ಟ್ಟು, ತಾನು ಸುಖವಾಗಿದ್ದನು-ಎಂದು ಹೇಳಲು; ಭೋಜರಾಯನು ಲಜ್ಜಿತ ನಾಗಿ ತನ್ನ ಅರಮನೆಯ ಸೇರಿದನು. ಟ' ಇ೦ತು ಕರ್ಣಾಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಕಾಮಕರ್ಣಿಕೆಯೆಂಬ ಪುತ್ತಳಿ ಪೇಳಿದ ಮೂವತ್ತನೆಯ ಕಥೆ. y, ೩೧ ನೆಯು ಕಧೆ. ಮೂವತ್ತೊಂದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ಎಂದಿನಂತೆ ನಿಂಹಾಸನದ ಬಳಿಗೆ ಬಂದು ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ಕರ್ಣಾ ವತಿಯೆಂಬ ಪುತಳಿಯು-ಹೋ ಹೋ! ನಿಲ್ಲು ನಿಲ್ಲು!ಎಂದು ಧಿಕ್ಕರಿಸಲಾಗಿ; ಭೋಜರಾಯನು ಖಿನ್ನನಾಗಿ ಬೇಯತೆ ಸಿಂಹಾಸನದಲ್ಲಿ ಕುಳಿತು, ಚಿತ್ತ ರ್ಮನಿಂದ ಹೇಳಿಸಿದ ಕಥೆ :- ಎಲೆ ಪುತ್ತಳಿಯೇ ? ಕೇಳು. ಧಾರಾಪುರದಲ್ಲಿ ನಮ್ಮ ರಾಯನು ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ಒಬ್ಬ ನೆರೆಜಾಣನ ಕರೆತರಿಸಿ ಈ ಪಟ್ಟಣದಲ್ಲಿ ಶೂರನ ವೀರನ ಧೀರನ ಮೂಲಮಂದಿಯ ಕರತರ ಹೇಳಿ ಕಟ್ಟು ಮಾಡಿ ಕಳುಹಿಸಲಾಗಿ ; ಅವನು ಕೋಟೆ ಪೇಟೆ ಬೀದಿಗಳಲ್ಲಿ ಹು ಡುಕುತ್ತ ಎಲ್ಲಿಯೂ ಕಾಣದೆ ಸೂಳೆಗೇರಿಯಲ್ಲಿ ಬರಲಾಗಿ ; ಪದ್ಮಾವತಿ