ಪುಟ:ಬತ್ತೀಸಪುತ್ತಳಿ ಕಥೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M m' ಬ f೧೩೦ ಕರ್ಣಾಟಕ ಕಾವೈ ಕಳಾನಿಧಿ. ಕರ್ಣಾಟಕ ಇರುವೆನು ಎಂದುದಕ್ಕೆ, ರಾಯ ಅದೇ ಪ್ರಕಾರ ಸಂಬಳವನ್ನು ನೇಮಕ ಮಾಡಿ ತನ್ನ ಬಳಿಯಲ್ಲೇ ಇಟ್ಟುಕೊಂಡಿರಲಾಗಿ; ಅವನು ಹಗಲಿರುಳಾಗಿ ಅರ ಮನೆಯ ಬಾಗಿಲಲ್ಲಿ ಕಾದಿರುವಲ್ಲಿ ಬಂದುದಿನ ಸಮರಾತ್ರಿಯಲ್ಲಿ ಊರ ಹೊ ಆಗಿರುವ ಮುಹಂಕಾಳಿಯ ಗುಡಿಯ ಬಳಿಯಲ್ಲಿ ಭಯಂಕರವಾದ ಒಂದು ಕೂ ಗರಾಯ ಕೇಳಿ ಆ ಶೂರನ ಕರೆದು-ಈ ಕೂಗೇನು ? ತಿಳದು ಬಾರೆದು ಹೇಳಲಾಗಿ ; ಆಕ್ಷಣವೆ ಕತ್ತಿಯು ಬಿಚ್ಚಿಕೊಂಡು ಹೆಂಡತಿಯು ಸಹವಾಗಿ ಅಲ್ಲಿಗೆ ಹೋಗುವಲ್ಲಿ, ರಾಯ ಅವನ ಶೂರತ್ವವ ಮೋಸವ ಮಾಡಬೇ ಕೆಂದು ಅವನು ಕಾಣದಂತೆ ತಾನೂ ಅವನ ಹಿಂದೆ ಹೋಗಿ ನೋಡುತ್ತಿರುವಲ್ಲಿ , ಆಗಲಾಶರನು ಭೀತಿಯ ಪಡದೆ ಆ ದೇವಿಯ ಗುಡಿಯ ಹೊಕ್ಕು ಆ ದಿಕ್ಕಿನಲ್ಲಿ ನೋಡುವಲ್ಲಿ ಅಲ್ಲಿಯೊಬ್ಬ ರಾಕ್ಷಸಿ ಅಟ್ಟಹಾಸದಿಂದಳು, ಆರ್ಭಟಿಸುತ್ತ ಆತನ ಮೇಲೆ ಬಂದು ಬೀಳಲಾಗಿ; ಅವನು ಅಂಜದೆ ಧೈಯ್ಯ ದಿಂದ ನಿಂತು ಆ ರಾಕ್ಷಸಿಯ ಸಂಗಡ ಬುದ್ದನ ಮಾಡಿ, ಅವಳ ಹತನ ಮಾಡಲಾಗಿ; ಆ ದೇವಿಯು ಪ್ರಸನ್ನಳಾಗಿ-ಎಲೋ ಶೂರ! ನಿನ್ನ ಧೈಯ್ಯಕೆ ಮಚ್ಚಿ ದೆನು ಎನ್ನಲಾಗಿ; ಅವನು-ಎ೮ ತಾಯೇ! ಈ ಮಧ್ಯರಾತ್ರಿಯಲ್ಲಿ ಮಹಾಕೂಗಾದ ಕಾರಣವೇನೆಂದು ಕೇಳಲಾಗಿ ; ಆ ದೇವಿಯು-ನಿನ್ನ ರಾಯ ನಿಗೆ ನಾಳದಿನ ಅಪಮೃತ್ಯು ತಗಲುವುದು, ಎಂದ ಮಾತ ಕೇಳಿ, ಅದಕ್ಕೇನು ಪರಿಹಾರವೆಂದು ಕೇಳಲಾಗಿ; ಆದೇವಿಯು ಇಂತೆಂದಳು:-ಅಪಮೃತ್ಯುವಿಗೆ ಏಕನಾದವನು ಶಿರವ ಕೊಟ್ಟರೆ ನಿಮ್ಮ ರಾಯನಿಗೆ ತಟ್ಟುವ ಅಪಮೃತ್ಯು ತಪ್ಪುವುದೆಂದು ದೇವಿಯು ಹೇಳಿದ ಮಾತ ಕೇಳಿ, ತಿಂಗಳಿಗೆ ಸಾವಿರ ವರಹನ ಕೊಟ್ಟು ತನ್ನ ಕಾಪಾಡುವಂಥ ರಾಯನಿಗೆ ಬರುವ ಅಸಮ್ಮತು ತಪ್ಪಲೆಂದು ಆದೇವಿಗೆ ಎದುರಾಗಿ ತನ್ನ ಶಿರಸ್ಸ ಒಪ್ಪಿಸಲಾಗಿ ; ಆಗಳ ವನ ಹೆಂಡತಿ ತನ್ನ ಗಂಡನ ಸಂಗಡ ತನಗೆ ಸಹಗಮನ ವಿಹಿತವೆಂದು ಕಟ್ಟಾರಿಯ ತೆಗೆದು, ನನ್ನೊಡೆಯನಾದ ರಾಯನಿಗೆ ದೀರ್ಘಾಯುಷ್ಯವಾಗಲೆಂದು ತನ್ನ ತಲೆಯ ಒಪ್ಪಿಸಿದಳು. ಅವರಿರ್ವರ ನಿರ್ವಂಚನೆಯ ರಾಯ ಕಂಡು ಎನಗಾಗಿ ಈಸತಿ ಪತಿಗಳು ತಮ್ಮ ತಲೆಯು ಕೊಟ್ಟರೆಂದು, ಅವರ ಗುಣವ ಆಡುತ್ತ, ಇಂಥ ಇಷ್ಟರು ಹೋದ ಬಳಿಕ ತನ್ನ ದೇಹ ಏತಕ್ಕೆ? ಎಂದು, ಆ ದೇವಿಯ ಮುಂದೆ ತನ್ನ ಕೊರಳಿಗೆ ಗಂಡಗಾರಿಯು ಸೇರಿಸಿ ರಾಯ ತಿರವ ತೆಗೆದೊಪ್ಪಿಸುವ

  • *

M