ಪುಟ:ಬತ್ತೀಸಪುತ್ತಳಿ ಕಥೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸಪುತ್ತಳಿಕಥೆ. ೧೫ ಸಮಯದಲ್ಲಿ, ಆ ದೇವಿಯು ಪ್ರಸನ್ನಳಾಗಿ-ಎಲೈ ರಾಯನೇ ! ನಿನ್ನ ಕರು ಣಾರಸಕ್ಕೆ ಮೆಚ್ಚೆದೆನು-ಎಂದು ಕೈವಿಡಿದು-ವರವ ಕೇಳು ಎನ್ನಲಾಗಿ ; ರಾಯ ತನ್ನ ಸೇವಕ ಅವನ ಪತ್ನಿಯು ಸಹ ಬದುಕಿಸಿ ಕೊಡಬೇಕು ಎಂದ ಕಾರಣ ಆಗ ಆಗೇವಿಯು ಅಮರ್ವರ ಬದುಕಿಸಿ ಏಳಿಸಲಾಗಿ; ಆಶೂರನು ರಾಯನ ಕಂಡು ವಂದಿಸಿ ಮುಂದೆ ನಿಂತಿರುವುದಕ್ಕೆ ದೇವಿ ಕಂಡಿಂತೆಂದಳು:- ಎಲೈ ರಾಯನೇ ! ಲೋಕಗಳಲ್ಲಿ ನಿನ್ನಂಥ ರಾಯನು ಈಶ್ವರನಂಥ ಭಟನು (ಇವಳಂಥ ಸತಿಯು) ಇಲ್ಲವೆಂದು ಮೂವರಿಗೂ ದೀರ್ಘಾಯು ವ್ಯವ ಕೊಟ್ಟು, ರಾಯನಿಗೆ ಅಕ್ಷಯ ಬಂಡಾರಗುಳಿಕೆಯಿತ್ತು ದೇವಿಯು ಮಾಯವಾದಳು. ಆಬಳಿಕ ಅಲ್ಲಿಂದ ರಾಯನು ಶೂರ ಸಹಿತ ಈ ಪಟ್ಟಣ ದೊಳಗೆ ಬಂದು, ಬೆಳಗಾಗಿ ಶೂರನ ಕರೆಸಿ, ತನ್ನ ರಾಜ್ಯದಲ್ಲಿ ಅರ್ಧರಾ ಜೈನ ಅವನಿಗೆ ಕೊಟ್ಟು ತನ್ನ ಸಮಾನವ ಮಾಡಿ ಸುಖವಾಗಿದ್ದನು-ಎಂದ ಮಾತಿಗೆ ಭೋಜರಾಯನು ಲಜ್ಜಿತನಾಗಿ ತನ್ನ ಅರಮನೆಗೆ ಹೋದನು. ಇಂತು ಕರ್ಣಾಟಕಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಕರ್ಣಾವತಿಯೆಂಬ ಪುತ್ತಳಿ ಪೇಳಿದ ಮೂವತ್ತೊಂದನೆಯ ಕಥೆ. ೩೨ ನೆಯ ಕಥೆ. ಮೂವತ್ತೆ ರಡನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ ರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಸಕಲ ಪರಿಮಳ ಸುಗಂಧವ ಲೇಪಿಸಿಕೊಂಡು, ಕುಸುಮಂಗಳ ಮುಡಿದು, ನವರತ್ಸಾಲಂಕೃತದಿಂದ ನವ ವಿಧ ದುಕೊಲವ ಧರಿಸಿ, ತನ್ನ ಮಂತ್ರಿಯಾದ ಚಿತ್ರಶರ್ಮನ ಕೈವಿಡಿದು ಕೊಂಡು, ನಿಂಹಾಸನದೆಡೆಗೆ ಬಂದು, ತನ್ನ ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ವಾವಲೋಚನೆಯೆಂಬ ಪುತ್ತಳಿಯು-ಹೋಹೋ ! ನಿಲ್ಲು ನಿಲ್ಲು ಭೋಜರಾಯನೇ ನನ್ನೊಡೆಯನಾದ ವಿಕ್ರಮಾದಿತ್ಯರಾಯ ನಂತೆ ವೀರವಿತರಣ ಸಾಹಸ ಪರಾಕ್ರಮದಾರ್ ಮುಂತಾದ ಗುಣವಂತನಾದ ರೆ ಈ ಸಿಂಹಾಸನವ ಏು, ಇಲ್ಲದೆ ಇದ್ದರೆ ಕೆಲಸಾರು, ಫಾ” ಕುಳಿ