ಪುಟ:ಬತ್ತೀಸಪುತ್ತಳಿ ಕಥೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯ ಕಲಾನಿಧಿ. ರಾಜ್ಯವನಾಳೆಂದು ಪರಸಿ, ಮತ್ತು ತನ್ನ ಅಂಕಿತ ನೇಮಿಸಿ, ವಿಕ್ರಮಾದಿತ್ಯರಾ ಯನೆಂಬ ನಾಮಾಂಕಿತನಂ ಕೊಟ್ಟು, ಮಹಾಲಕ್ಷ್ಮಿಯು ಅವನಿಗೆ ಪ್ರಸನ್ನನಾ ಗುವಹಾಗೆ ವರವ ಕೊಟ್ಟು, ಕೌಪಸ್ಟಿ ವಿದ್ಯೆಗಳ ಉಪದೇಶವಿತ್ತು, ದಿವ್ಯಾ ಯುಧಾಭರಣಗಳ ಸಾಲಿನಿ, ಸುಖದಿಂದಿರು ಎಂದು ನಿರೂಪಿಸಿ, ಅನುಗ್ರಹ ಮಾಡಿ ಕಳುಹಲು; ಅಲ್ಲಿಬಳಿಕ ವಿಕ್ರಮಾದಿತ್ಯರಾಯನು ಸಂಭ್ರಮ ದಿಂದ ಅಷ್ಟದಿಕಾಲಕರ ಜಯಿಸಬೇಕೆಂದು ಇಂದ್ರಲೋಕಕ್ಕೆ ಹೋಗಿ, ದೇವೇಂದ್ರಂ ಕಂಡು ನಂದಿಸಲಾಗಿ, ಆ ಇಂದ್ರನು ವಿಕ್ರಮಾದಿತ್ಯರಾಯಸ ರೂಪು ರೇಟೆ ಲಾವಣ್ಯಸಾಕ್ ನು ವಿದ್ಯಾತಿಶಯಗಳ ಕಂಡು, ಮೊಟ್ಟೆ, ಆತನಿಗೆ ದೆವಸಿರ್ಮಿತವಾದ ಮುವತ್ತೆರಡು ಪುತ್ಥಳಿಯುಕ್ತವಾದ ನವರ ಖಚಿತವಾದ ನಿಂಹಾಸನವ ನಜಗುಧ ಸಸ ಕೊಟ್ಟು ಕಳುಹಿಸಲು; ಈ ಮೇರೆಗೆ ಅಪ್ಪದಿಕ್ಕಿಗೂ ಹೋಗಿ, ಅವರವರ ಕೈಯಲ್ಲಿ ದಿವ್ಯಾಯುಧ ದಿವಾನರನ ತೆಗೆದುಕೊಂಡು, ನಾಗದಲ್ಲಿ ಸತಿಲಮುನಿಯ ಮುಖ ದಿಂದ ಯಕ್ಷನಲ್ಲಿ ಅಷ್ಟಮಹಾನಿದ್ದಿ ನವನಿಧಿಗಳ೦ ಗ್ರಹಿಸಿ, ಬೇತಾಳನ ವಶವ ಮಾಡಿಕೊಂಡು, ಅಲ್ಲಿಂದ ಈರನ ರಜತಾದ್ರಿಗೆ ಹೋಗಿ, ಈ ರನಿಗೆ ನಮಸ್ಕರಿಸಿ ಸ್ತುತಿಸಲಾಗಿ; ಈಶ್ವರನು ಮೆಚ್ಚಿ - ಎಲೈ ರಾಯಾ ! ನಿನಗೆ ಬೇಕಾದ ನರವಂ ಕೇಳಕೊ-ಎಂದು ನಿರೂಪಿಸಲು , ಎಲೈ ಹರ ನೇ ? ನನಗೆ ದೀರ್ಘಾಯುಷ್ಯವ ಕೊಟ್ಟು ಸಲಹಬೇಕೆನ್ನಲಾಗಿ ; ಈಶ ರನು ರಾಯನಿಗೆ, ನಿಂಹಾಸನಾರೂಢನಾಗಿ ಸಾವಿರವನ- ಭಟ್ಟಿಯೊಡನೆ ರಾಜ್ಯವಾಳಿ ಕಲಿಪುರುಷನ ಜಯಿಸೆಂದನುಗ್ರಹಿಸಿ ಕಳುಹಿಸಲು ; ಬರುವ ಮಾರ್ಗದಲ್ಲಿ ಕಲಿಪುರುಷನ ಕಂಡು, ಮಹಾನಾರೂಢನಾಗಿ-ಎಲೆ ಕಲಿಸುರುಷನೆ : ನನ್ನ ದೊರೆತನವಿರುವತನಕ ನನ್ನ ರಾಜ್ಯದಲ್ಲಿ ನೀನು ಸಂಚರಿಗೆ ಕಾರಣವೇನೆಂದು ಕೆಪಿಸಿ, ವಜ್ರಾಯುಧದಿಂದ ಹೊಡೆಯುವು ದಕ್ಕೆ ಹೋಗಲಾಗಿ, ಅವನಾಗ ಭಯಪಟ್ಟು-ಎಲೈ ರಾಯನೆ : ನಾ : ನಿನ್ನ ಸಭೆಯಲ್ಲಿ ಬರುವುದಿಲ್ಲವೆಂದು ಉಂಗರವ ಕೊಟ್ಟು ಹೊರಟು ಹೊಗಲಾಗಿ, ಆ ಬಳಿಕ ರಾಯನು ತನ್ನ ಪಟ್ಟಣಕ್ಕೆ ಬಂದು ಭಟ್ಟಿ ಸಹಿತ ಧೈರ ಕೌ‌ದಾರ್ ಸಾಹಸ ಕೀರ್ತಿಯಿಂದ ರಾಜ್ಯವಾಳುತ್ತಿದ್ದನು. ಲು ಆ ದಿ