ಪುಟ:ಬತ್ತೀಸಪುತ್ತಳಿ ಕಥೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕರ್ಣಾಟಕ ಕಾವ್ಯಕಲಾನಿಧಿ, ತರೆ ನಿನ್ನ ತಲೆ ಸಹಸ್ರ ಹೋಳಾಗಿ ಬಿರಿಯುವುದು ಎನ್ನಲಾಗಿ ; ಭೋಜರಾ ಯನು ಬೇರೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್ಮನಿಂದ ಹೇಳಿಸಿದ ಕಥೆ: ಎಲೆ ಪುತ್ತಳಿಯ ! ಕೇಳು. ಧಾರಾಪುರದಲ್ಲಿ ನಮ್ಮ ಭೋಜರ: ಯನು ಸುಭರಾಜ್ಯಗೆಯ್ಯುವಲ್ಲಿ ಒಂದು ದಿನ ರಾಯ ಓಲಗದಲ್ಲಿ ಕುಳಿತಿರು ವಾಗ ವರರುಚಿ ಯಿಂತೆಂದನು: ಧೈರ್ಯಸ್ಥನಿಗೆ ಸಕಲವೂ 'ಕೈಗೂಡುವು ದು, ಅದು ಹೇಗೆ ? ಎಂದರೆ-ದುಂದುಭಿ ಎಂಬ ಪಟ್ಟಣದಲ್ಲಿ ಶಶಿಮುಖನೆಂಬ ಬಿಲ್ಯನು 1 ನಿತ್ಯ ಸಾವಿರ ಕಸವರಿಗೆಯ ಮಾಡುವನು. ಈಮೇರೆಗೆ ಮಾಡಿದ ಕಸವರಿಗೆಯಲ್ಲಿ ಕಾಯವ ಮಾಡಬೇಕೆಂದು ಆ ಪಟ್ಟಣದ ಬೀದಿಗಳಲ್ಲಿ ಹೊತ್ತು ತಿರುಗಿದರೂ ಒಬ್ಬರೂ ಕೇಳುವರಿಲ್ಲದೆ ಮಲಾಮೆಯಾಗಿ ಮಾ ಆದೆ ತನ್ನ ಮನೆಗೆ ಹೊತ್ತುಕೊಂಡು ಬಂದು ಇರಿಸಿ, ರಾತ್ರಿ ತನ್ನ ಹೆಂಡ ತಿಯ ಕಡೆ-ನಾನು 'ಕಸವರಿಗೆ ಮಾಡಿದುದು ಮಾಡಲಿಲ್ಲ. ಮುಂದೆ ನಾ ವು ಜೀವನವ ಹೇಗೆ ಮಾಡುವ? ಎಂದು ಆಲೋಚಿಸುತ್ತಿರುವಲ್ಲಿ -ಆ ಪಟ್ಟಿ ಣದ ಅರಸು ನಗರ ಶೋಧನೆಗಾಗಿ ಹೋಗಿ ಅವನ ಆಮಾತ ಕೇಳಿ ಬಂದು ಬೆಳಗಾಗಿ ಓಲಗದಲ್ಲಿ ಕುಳಿತಿರುವಾಗ, ಆ ಬಿಲ್ಲನ ಕರೆಸಿ-ನೀನು ಮಾಡಿರುವ ಕಸವರಿಗೆ ಯಾವತ್ತು ತಂದು ನನ್ನ ಅರಮನೆಯ ಕಣಜಕ್ಕೆ ತುಂಬಿ ಅಲ್ಲಿ ರು ವ ದವಸ ಕೊಂಡುಹೋಗಿ ನಿನ್ನ ಗಾಸೋಪಾಯವ ಮಾಡಿಕೊ ಎನ್ನಲಾಗಿ; ಅದೇರೀತಿಯಲ್ಲಿ ಅವನು ತನ್ನ ಮನೆಯಲ್ಲಿದ್ದ ಕಸವರಿಗೆ ಯಾವತ್ತೂ ತಂದು ಕwಜಕ್ಕೆ ತುಂಬಿ ಅಲ್ಲಿದ್ದ ದವಸವ ತೆಗೆದುಕೊಂಡು ಹೋಗಲಾಗಿ ; ಬ ಚ m

1. ವರರುಚಿಯ ಮುಖವ ನೋಡಿ ರಾಯನಿಂತೆಂದನು:- ಕುಹಕಕು ಚೋದ್ಯಗಳ ಮಾಡುವನು ಪೂಜ್ಯನೆ ? ಕಬಿನಿಂದ ಒಬ್ಬನ ಶ್ರೇಯಸ್ಸ ನೋಡಿ ಸಂತೋಷಪಡದೆ ಇರುವನು ದೊರೆಯೇ ? ಪರಿಹಾ ಸಕವ ಮಾಡುವಂಧವನು ಯೋಗ್ಯನೆ? ಭುಜಬಲವಿಲ್ಲದವ ಮನುಷ್ಯನೆ? ?? ಎ೦ಬ ನೀತಿಯು೦ಟಾಗಿ, ಭುಜಬಲ ವೂ ಧೈರವೂ ಪ್ರಧಾನವೆಂದು ಹೇಳಿ, ಧೈರಸ್ಥನಿಗೆ ಸಕಲಕಾರವೂ ಕೈಸೇರುವುದೆಂ ಬಂತೆ ಧೈರಗುಂದಬಾರದು, ಧೈಯ್ಯದಿಂದ ಸಕಲಕಾರವು ಬರುವುದು. ಮುನ್ನೊ ರೈ ರಾ ಯನು ಧೈಯ್ಯದಿಂದ ರಾಜ್ಯವ ಪಡೆದನು. ಆ ಕಥೆಯ ಪೇಳ್ವೆನು ಕೇಳೆ೦ದು ಇ೦ತೆ೦ ದನು:- ಮತ್ತೊ೦ದು ದುಂದುಭಿಯೆಂಬ ಪಟ್ಟಣದೊಳು ರಿವುಹನೆಂಬ ರಾಯನು ಸುಖರಾಜ್ಯಗೆಯ್ಯುತ್ತಿರಲು ಆ ಪಟ್ಟಣದಲ್ಲಿ ಒರ್ವ ಶಶಿಮುಖನೆಂಬ ಬಿಲ್ವನು. 2. ಕಸಗೋಲು.