ಪುಟ:ಬತ್ತೀಸಪುತ್ತಳಿ ಕಥೆ.djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩೩ ೧. ಬತ್ತೀಸಪುತ್ತಳಿಕಥೆ. ಬೊಕ್ಕಸ ಬಂಡಾರದಲ್ಲಿದ್ದ ಲಕ್ಷ್ಮಿಯರೆಲ್ಲಾ ಕೂಡಿ ಮಾತಾಡಿದರು. ಯಾರುಯಾರೆಂದರೆ? ಮಹಾಲಕ್ಷ್ಮಿ, ವರಲಕ್ಷ್ಮಿ, ವಿಜಯಲಕ್ಷ್ಮಿ, ಧನಲಕ್ಷ್ಮಿ ಧಾನ್ಯಲಕ್ಷ್ಮಿ, ಪುರಲಕ್ಷ್ಮಿ, ಕೀರ್ತಿಲಕ್ಷ್ಮೀ,-ಇವರೇಳು ಮಂದಿಯ-ಈ ಅರಸನ ಭಂಡಾರ ಬೊಕ್ಕಸ ಮುಂತಾದುದಲ್ಲಿ ನಾವು ತಪ್ಪದೆ ಇದ್ದು ಕೊಂಡಿದ್ದೆವು. ಈಗ ಅರಸಿನಲ್ಲಿ ಇರಬಾರದು ಎಂದಾಲೋಚಿಸಿ ಅದಿನ ರಾತ್ರಿ ಅರಸಿನ ಸ್ವಚ್ಛದಲ್ಲಿ ಮಹಾಲಕ್ಷ್ಮಿ ನಿಜರೂಪದಿಂದ ಹೋಗಿ, ಇದಿ ರಾಗಿ ನಿಂತು, ಎಲೈ ಅರಸ! ಈವರೆಗೂ ನಿನ್ನ ಅರಮನೆಯಲ್ಲಿ ನಾವು ಏಳು ಮಂದಿ ಲಕ್ಷ್ಮಿಯರೂ ನಿರವಾಗಿ ಇದ್ದೆವು ಇನ್ನು ಇರುವುದಿಲ್ಲ. ಅದೇತಕ್ಕೆಂದರೆ, ನಿನ್ನ ಅರಮನೆಗೆ ಅವಲಕ್ಷ್ಮಿಯು ಸೇರಿದಳು. ಅವಳು ಇರುವಲ್ಲಿ ನಾವು ಇರುವುದು ಇಲ್ಲವೆಂದು ಸ್ಥಾಪಿಸಿ ಹೊಗಲಾಗಿ ; ಅರ ಸು ಧೈಯ್ಯಲಕ್ಷ್ಮಿಯಿದ್ದ ಕಾರಣ ಅವರೆಲ್ಲಾ ಹೋದಾಗ ಆ ಲಕ್ಷ್ಮಿಯ ಬಿಡೆನೆಂದು ದೈವ ಪಿಡಿದಿರಲಾಗಿ , ಕೆಲವು ದಿನದಮೇಲೆ ಪರರಾಯರು ಬಂದು ಮಹಾಯುದ್ಧನ ಮಾಡಿ ಪಟ್ಟಣಕ್ಕೆ ಮುತ್ತಿಗೆಯ ವಾಡೆ, ಕಡುಕಷ್ಟ ವಾಗಿ ಜಯವಿಲ್ಲದೆ ಅಪಜಯವಾದರೂ ಧೈಯ್ಯದಿಂದಿರಲಾಗಿ- ಮಹಾಲಕ್ಷ್ಮಿ ಮುಂತಾಗೆಲ್ಲ ರು ಕಂಡು, ಅರಸಿನ ಧೈಯ್ಯಕ್ಕೆ ಮೆಚ್ಚಿ ಎದುರಾಗಿ ಬಂದು-ಎಲೈ ಅರಸೆ ' ನಿನ್ನ ಧೈರಕ್ಕೆ ಎಣೆಯಿಲ್ಲವೆಂದು ವರವ ಬೇಡೆನ್ನಲಾಗಿ ; ಅರಸು ಅವರ ಇಂತೆಂದನು -ಮಹಾಲಕ್ಷ್ಮಿ ಬಂಡಾರದಲ್ಲಿ, ಪುರಲಕ್ಷ್ಮಿ ಪಟ್ಟಣದಲ್ಲಿ, ಹಿ೦ರ್ತಿಲಕ್ಷ್ಮಿ ಚೌದಿಕ್ಕಿನಲ್ಲಿ, ವೀರಲಕ್ಷ್ಮಿ ವಿಜಯಲಕ್ಷ್ಮಿ ಭುಜಗಳಲ್ಲಿ, ಧನಲಕ್ಷ್ಮಿ ಬೊಕ್ಕಸದಲ್ಲಿ, ಧಾನ್ಯಲಕ್ಷ್ಮಿ ಕಣಜದಲ್ಲಿ ಸ್ಥಿರವಾಗಿರಬೇಕು ಎನ್ನಲಾಗಿ ; ಅದೇಮೇರೆಗೆ ಮಹಾಲಕ್ಷ್ಮಿಯ ವರವಾದುದwಂದ ಆಕ್ಷ ಣವೇ ಪರರಾಯರಿಗೆ ಅಪಜಯವಾಗಿ ಮುರಿದು ಓಡಿಹೋಗಲಾಗಿ; ಅರಸು ಅವರ ಪಟ್ಟಣದ ಹೊತ್ತು ಅಲ್ಲಿದ್ದ ಹಣಕಾಸು ಧಾನ್ಯ ಒಡವೆ ವಸ ಗಳು ರತ್ನಂಗಳದಿಯಾಗಿ ತೆಗೆದುಕೊಂಡು ಬಂದು, ತನ್ನ ಬೊಕ್ಕಸ ಬಂಡಾರ ಕ ಇದಕ್ಕೆ ತುಂಬಿಸಿ, ಆ ಕಸವರಿಗೆಯನೆಲ್ಲ ಸುಡಿಸಿಬಿಟ್ಟು, ಆ ಬಿನ ರಕ್ಷಿಸಿ ಸುಖವಾಗಿದ್ದನು. ಅದುಕಾರಣ ರಾಜರಿಗೆ ಧೈರವೇ ಪ್ರಧಾನವು-ಎಂದು ಹೇಳಿದ ವರರುಚಿಯ ಮಾತ ಕೇಳಿ, ರಾಯು ಮೆಚ್ಚಿ , ವರರುಚಿಗೆ ಸವಾ ಲಕ್ಷ ದ್ರವ್ಯವ ಕೊಟ್ಟನು~ ಎಂದು ಚಿತ್ರಶರ್ಮನು ಹೇಳಿದ ಮಾತಿಗೆ ನಾನಲೋಚನೆಯೆಂಬ ಪುತ್ತಳಿ ಹಾಸ್ಯಗೆಯ್ದು ಹೇಳಿದ ಉಪಕಥೆ:-- ಟ m ಕ ದಿ