ಪುಟ:ಬತ್ತೀಸಪುತ್ತಳಿ ಕಥೆ.djvu/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


h೩೪ ಟು M ಬ. ಕರ್ಣಾಟಕ ಕಾವ್ಯಕಲಾನಿಧಿ. ಎಲೈ ಚಿತ್ರಕರ್ಮನೇ ! ಕೇಳು. ನಮ್ಮ ವಿಕ್ರಮಾದಿತ್ಯರಾಯನು ಈ ಉಜ್ಜಯಿನಿಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತ ಸರ್ವರ ಪಾಲಿಸುತ್ತ ಪೊರೆಯುತ್ತಿರುವ ವೇಳೆಯಲ್ಲಿ ಬಂದುದಿನ ರಾತ್ರಿ ಕಾಲದಲ್ಲಿ ನಗರದ ನೆಗಾಗಿ ತನ್ನ ಸಂಗಡ ನಾಗರಿಕ ಪೀಠಮುರ್ದಕರ ಕರೆದುಕೊಂಡು ರಾಯನು ಹೋಟು ಕೇರಿಕೇರಿಯಲ್ಲಿ ರುವ ಹದಿನೆಂಟು ಜಾತಿ ಜನರ ಮನೆಯಲ್ಲಿ ನಡೆ ಯುವ ವರ್ತಮಾನವ ಕೇಳುತ ಬರುವಲ್ಲಿ -ಚಂಡಿಕಾದೇವಿಯ ಗುಡಿಯಲ್ಲಿ ಮಲಗಿರುವ ಪರದೇಶಿಗಳು ಚಾತುರನಾಡುತ್ತಿರುವುದ ಆ ಗುಡಿಯ ಪ ಕಾರದ ಗೋಡೆಯ ಹಿಂದೆ ನಿಂತು ಕೇಳುತ್ತಿರುವಲ್ಲಿ -ಆ ಚಂಡಿಕಾದೇವಿಯ ಗುಡಿಯಲ್ಲಿ ಅಷ್ಟಲ್ಲಿ-ಚಂದ್ರೋದಯವಾಗಲಾಗಿ, ಆ ಗುಡಿಯಿಂದೊಬ್ಬ ಈಚೆಗೆ ಬಂದು ಹೋಗುವನ ನೋಡಿ -ಇವ ಕಳ್ಳನೋ, ಬೇಹಿನನನೋ ಎಂದು ಹಿಂದೆ ರಾಯ ಹೋಗಲಾಗಿ ; ಅವನು ಕೋಟೆಯನಿಳಿದು ಉತ್ತರ ದಿಕ್ಕಿನೊಳೊಂದು ಗವಿಯ ಹೊಕ್ಕನು. ಅದ ಕಂಡು ರಾಯ ಆಗವಿಯ ಹೊಕ್ಕು ಅಲ್ಲಿರುವ ಭೂತಪ್ರೇತಗಳ ನವರತ್ನ ಗಳ ಕಂಡು ವಿಸ್ಮಿತನಾಗಿ ಹೋಗುವಲ್ಲಿ, ಮತ್ತೊಂದು ದ್ವಾರನ ಕಂಡು ಅದwಲ್ಲಿ ಹೊಕ್ಕು ಹೋಗು ತಿರುವಲ್ಲಿ ಅಲ್ಲೊಂದು ಚಂಡಿಕಾದೇವಿಯಿರುವ ಮಹಾವನದಲ್ಲಿ ಬೂರುಗದ ಮರದೊಳೊಂದು ಉಯ್ಯಾಲೆಯಲ್ಲಿ ತೂಗಾಡುತ್ತಿರುವ ಒಬ್ಬ ಗಂಧರ್ವ ಸ್ತ್ರೀಯ ಕಂಡು, ರಾಯ ವಿಸ್ಮಿತನಾಗಿ-ಈ ಯ ಬ್ರಹ್ಮ ಯಾ ರಿಗೆ ನೇಮಿಸಿರುವನೆಂದು ನೋಡುತ್ತಿರಲಾಗಿ; ಅವಳು ಉಯ್ಯಾಲೆಯಾಡುತ್ತ ದೇಶಿ, ವರಾಳಿ, ಘರ್ಜರಿ, ಮುಖಾರಿ, ತಿರಾಗ ಮುಂತಾದ ರಾಗಗಳ ಪಂಚಮ, ಮಂದರ, ಮಧ್ಯ ತಾರಕದಿಂದ ಪಾಡುವ ರಚನೆಗಳ ಅವಳ ಲಾವಣ್ಯಸೌಂದಯ್ಯಗಳ ಸಹ ನೋಡಿ, ರಾಯ ಭ್ರಮಿಸಿ, ಕಾಮಾಂಧಕಾರ ದಿಂದ ಭೀತಿಯ ಪಡದೆ ಆ ನವಿಲುಯ್ಯಾಲೆಯ ಮೇಲೆ ವಿಹೊಗಲಾಗಿ ಅವಳು ರಾಯನ ಕಂಡು, ಈತನಾರೆಂದು ಅತಿಶಯವ ಪಟ್ಟು-ಇವನೆಂಥ ವೀರನೋ ? ಇಂತಹ ಭಯಂಕರವಾದ ವನಕ್ಕೆ ಬಂದು ನನ್ನ ಯಾರು ಎಂತ ವಿಚಾರಿಸದೆ ಈವುಯ್ಯಾಲೆಯೇ ಬಂದಿದ್ದಾನೆ ಎಂದು ನೋಡಿ, ಅವ ಇಂತೆಂದಳು:-ಎಲೈ ಮಹಾಪುರುಷನೇ ! ನೀನು ಯಾರು ? ನರನೋ ? ಕಿನ್ನರನೋ? ಕಿಂಪುರುವನೋ? ಯಕ್ಷನೋ? ರಾಕ್ಷಸನೋ? ದೇವನೊ?