ಪುಟ:ಬತ್ತೀಸಪುತ್ತಳಿ ಕಥೆ.djvu/೧೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸಪುತ್ತಳಿಕಥೆ . ೧೩೫ ಯಾರು ? ಎಂದು ಕೇಳಲಾಗಿ;-ನಾನು ವಿಕ್ರಮಾದಿತ್ಯರಾಯ, ಈರಾತ್ರೆ ನಗ ರಶೋಧನೆಗಾಗಿ ಬರಲಾಗಿ, ಒಬ್ಬ ಪರದೇಶಿ ಈ ಗವಿಯ ಹಕ್ಕುದ ಕಂ ಡು, ನಾನು ಅವನ ಹಿಂದೆ ಬಂದೆ ಎಂದ ಮಾತ ಅವಳು ಕೇಳಿ-ನೀನು ಒಂ ದುದು ಲೇಸಾಯಿತೆಂದು ಅವನ ಕುಳ್ಳಿರಿಸಿಕೊಂಡು, ಪಗಡೆಯ ಆಡುವ ಎನ್ನಲಾಗಿ; ರಾಯ -ಜಂಜಾಟ ಬೇಡ ಎಂದುದಕ್ಕೆ, ಅವಳು ಆ ಮಾತಿಗೆ -ಜೂಜಾಟವ ಕಾಳಗವ ಒಲ್ಲೆನೆನ್ನು ವುದು ರಾಜರ ಧರ್ಮವಲ್ಲ ಎಂದು, ಆಬಳಿಕ ನೀನು ಒಪ್ಪಿದಂತೆ ಆಡೆಂದು ಚಾರಿಯ ಹಾಸಿ, ಕಾಯ ಹೂಡಿ, ಪಗಡೆಯನಾಡಿ ರಾಯನ ಸೋಲಿಸಲಾಗಿ ; ರಾಯ ಲಜ್ಜೆ ತನಾಗಿ-- ಇನ್ನೊಂದು ಸಾರಿ ಆಡಿದರೆ ಗೆಲೆನು ಎನ್ನಲಾಗಿ ; ಆ ಮಾತಿಗವಳು--ನಾನು ಕೇಳಿದೊಡವೆಯ ತಂದು ಕೊಟ್ಟರೆ ಆಡುವೆನು ಎಂದುದಕ್ಕೆ, ರಾಯ-ನಿನಗೇನು ಬೇಕು ಕೆಳು ತಂದುಕೊಡುವೆನು ಎನ್ನಲಾಗಿ ; ಅವಳು-ಈಮಹಾವನದಲ್ಲಿ ಮುಳ್ಳು ಮುತ್ತುಗದ ಮರದಲ್ಲಿ ಬಂದು ಭೇತಾಳ ತಲೆ ಕೆಳಗಾಗಿ ನೇತಾ ಡುತ್ತಿದೆ. ಅದ ನನಗೆ ತಂದು ಕೊಟ್ಟರೆ ಆದಿತೆಂದು ಹೇಳಲಾಗಿ ; ರಾ ಯ ಒಂದು ಭಯಂಕರವಾದ ಬಳಿಯಲ್ಲಿ ಚಂಡಿಕಾದೇವಿಯ ಗುಡಿಯ ಮುಂ ದೆ ಮುಳ್ಳುಮುತ್ತುಗದ ಮರದಲ್ಲಿ ತಲೆಕೆಳಗಾಗಿ ಒಣಗಿದ ಶರೀರದಲ್ಲಿ ನೇತಾಡುವ ಭೇತಾಳನ ಕಂಡು ಅದ ಹಿಡಿಯ ಹೋಗಲು, ಆ ಭೇತಾಳನು ಹುಲಿಯಾಗಿ, ಕರಡಿಯಾಗಿ, ನವಿಲಾಗಿ, ನಿಂಹವಾಗಿ, ಕಾಡುಹಂದಿಯಾಗಿ ಆನೆಯಾಗಿ ನಾನಾಪ್ರಕಾರವಾಗಿ ಕಾಣುವುದ ಕಂಡರೂ ಧೈಯ್ಯದಿಂದ ಹಿಡಿ ದು ಕಟ್ಟಿ ತೆಗೆದುಕೊಂಡು ಬರುವ ದಾರಿಯಲ್ಲಿ -ಆ ಭೇತಾಳನೊಂದು ಕಥೆ ಯ ಹೇಳಿತು. ರಾಯ ಆ ಕಥೆಗೆ ಉತ್ತರವ ಕೊಟ್ಟು ಕೊನೆಯ ಮಾತಿಗೆ ಉತ್ತರವ ಕೊಡದೆ ಮೌನದಲ್ಲಿ ತಂದು ಅವಳ ಬಳಿಯಲ್ಲಿ ಬಿಡಲಾಗಿ ; ಆ ನಿ ಗ ಭೇತಾಳನಿಗೂ ಮುಖದರ್ಶನವಾಗುವುದು ಶಾಪವಿಮೋಡ ನೆಯಾಗಿ, ಈರ್ವರು ವಿದ್ಯಾಧರಿ ಪುಪ್ಪದಂತರಾಗಿ ರಾಯನೆದುರಿಗೆ ನಿಲ್ಲಲು ; ರಾಯ ಕಂಡು ಚೋದ್ಯಂಬಟ್ಟು-ನೀವಾರೆಂದು ಕೇಳಲಾಗಿ ; ಆ ಪುಷ್ಪದಂತ ನಿಂತೆಂದನು:-ಕೇಳೋ ಮಹಾರಾಯನೇ ! ಪೂರ್ವದಲ್ಲಿ ಕೈಲಾಸದಲ್ಲಿ ಪರ ಮೇಶರನು ಪಾರ್ವತಿ ಸಹ ಸಫಾವಿನೋದದಿಂದಿರುವ, ಪಾರ್ವತಿ ಪರ ಮೇಶರನೊಡನೆ ಬ್ರಹ್ಮಕಥೆಯ ನಿರೂಪಿಸಬೇಕೆಂದು ವಿಜ್ಞಾಪಿಸಲಾಗಿ;