ಪುಟ:ಬತ್ತೀಸಪುತ್ತಳಿ ಕಥೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಇಂತೆಂದನು:-ಕೇಳ್ಳೆ ಆಗದ ಕಾರ ಏನು ಮಾಡಿದರೂ ಆಗಲರಿಯದು. ಆಗುವ ಕಾರ ತನಗೆ ತಾನೇ ಆಗುವುದೆಂಬ ಎರಡು ಬಗೆ ನೀತಿಯ ತಿಳಿದಾ ಗ್ರ ವ್ಯಾಕುಲ ತಪ್ಪದು ಎನ್ನಲಾಗಿ; ಚಿತ್ರಶರ್ಮನು ಭೋಜರಾಯನ ಚತು ರೂಪಾಯದಿಂದೊಡಂಬಡಿಸಿ, ವ್ಯಸನಪಡಲಾಗದೆಂದ ಬಳಕ, ರಾಜೇಂದ್ರ ಚೂಡಾಮಣಿ ಭೋಜರಾಯನು ಮನಸ್ಸಿಗೆ ನೆಮ್ಮದಿ ಮಾಡಿಕೊಂಡು ಧಾರಾ ಪುರದಲ್ಲಿ ಸುಭರಾಜ್ಯನ ಗೆಯ್ಯುತ್ತಿದ್ದನು. ಎಂದಿಂತು ಪಾರ್ವತಿಗೆ ಪರಮೇಶರನಿರೂಪಿಸಿದ ಬೃಹತ್ಕಥೆ'ಯೆಂಬ ಬಸಪುತ್ತಳಿಯ ಪ್ರಸಂಗದ ಪ್ರಬಂಧವ ಲೋಕಕಂತನಾದ ವಿಕ ಮಾದಿತ್ಯರಾಯನ ವೀರತ್ವ 'ಕನಕಪಾಂಡುರಂಗನಾಥನ ಕುಮಾರ ಭಾಳಲೋಚನನೆಂಬ ಕರಣಿ ಕವೀಶರನು ದೇವನಿಂದ ನಿರ್ಮಿಸಿದಂಥ ಈ ಧೈರಾಮೃತವ ಸುಜನರಾದವರು ಹೇಳಿ ಕೇಳಿದರೆ ಇಷ್ಟಾರ್ಥ ಸಿದ್ದಿ ಪುದೆಂದು ಹೇಳಿದನು ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ವಾವಲೋಚನೆಯೆಂಬ ಪುತ್ತಳಿಯು ಹೇಳಿದ ಮೂವರ "ಡನೆಯ ಕಥೆಗೆ ಮಂಗಳಂ. ಬತ್ತಿ ಸುತ್ತ ೪೦ಕಥೆ ಸಂಪೂರ್ಣ೦. (*) ಪಾ-1, ಬ್ರಹ್ಮಸತ್ಕಥೆ. 2. ಕ್ಷೇಮೇಂದ್ರಭೂಭುಜಿಂ ಪೇಳ ಹದಿನೆಂಟನೆಯ ಲಂಬಕದ ಬತ್ತಿ ಸಪುತ್ತಳಿ ಕಧಾಪ್ರಬಂಧವ, ಇ೦ಪೊದವಿದ ಬೃಹತ್ಕಥಾರಸದೊಳುಳ್ಳ ಜಗಕ್ಕೆ ನೆಗಳೆ ವೆತ್ತ ಸಂದನುಪಮವಿಕ್ರಮಾರ್ಕನ ಸುವೀರತೆಯ, ಕಡುಭೋಗದೆಳೆಯೆಂಬ ಅನನು ತಮಾದ ಪುತ್ತಳಿಯ ಸತ್ಕಥೆಯ ಕನಕಪಾಂಡುರಂಗನಾಥನ ಸುತ ಭಾಳಲೋಚ ನ ಕರಂ ಕವಿದೇವನಿಂದ ನೆಗಟ್ಟಿದಂ ಸಲೆ ಧೈಯ್ಯಾಮೃತಮಂ ನೆಗಳವಡೆದಿರ್ಪ ನಾಮ ನೂರಿಕ ಕಧಾದಿನೆಯಂ ಮೇಣಾಶಕುನ ಪ್ರಪಂಚಚಯಮಂ ಬತ್ತೀಸಸತ್ಪುತ್ರಿಕಾ ಸೀಲ ಸಿ೦ಹಾಸನದೊಂದು ಸತ್ಕಥೆಗಳಂ ದಕ್ಷಾಧ್ವರಧ್ವಂಸನುಜ್ಜಲಚಾರಿತ್ರವನೈದೆ ನಿರ್ಮಿಸಿದನೀ ಭಾಳೇಕದೇವೋತ್ತಮಂಕುಳಿರ್ವೆಲರಂತೆ ನಂದನ ತವಾಲದ ಕಣ ಳಂತೆ ಪುಷ್ಪಮಂಡಲನವಗಂಧದಂತೆ ಪುದಿದಿನ್ನ ವಿರಂತೆ ನಿಜಪ್ರಿಯಾಂಗನೋಜ್ವಲ ರತಿಯಂತೆ ಚೆಂದನದಂತೆ ಇದುಯಿನಸೌರಭದಂತೆ ಚಾರುಪುತ್ತಳಿಯ ಕಥಾರಸ ದಂತೆ ಜನರಂ ತಲೆದೂಗಿಸದೇ ನಿರಂತರಂ-ಎಂದು ಒಂದು ಪ್ರತಿಯಲ್ಲಿ ಇದೆ. ಇವು ಕೆಟ್ಟು ಹೋದ ಪದ್ಯಂಗಳಂತಿವೆ. - - - -