ಪುಟ:ಬತ್ತೀಸಪುತ್ತಳಿ ಕಥೆ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸಪಳಿ ಕಥೆ. ಏತಕ್ಕೆ ಕುಳಿತಿದ್ದಿರಿ ? ಬೇಕಾದ ಸುಫಲ ತರಿಸಿಕೊಂಡು ಶನು ಪರಿ ಹರಿಸಿ ದಯಮಾಡಿಸಬಹುದೆನ್ನಲಾಗಿ; ಪುನಃ ಜನಗಳು ಹೋಗಿ ಫಲಗಳ ನೆಡುತ್ತಿರಲು ; ಆ ಬ್ರಾಹ್ಮ ೧೦ನು ಮಂಚಿಕೆಯನಿಳಿದು ರಾಯನ ಸಮೂಾಸಕ್ಕೆ ಬಂದು-ಎಲೈ ರಾಯಾ ? ನೀನು ಮಹಾ ದುಷ್ಟನು. ನನ್ನ ಹೊಲವ ಹಾಳುಮಾಡಿಬಿಟ್ಟೆಯಲ್ಲಾ, ಎಂದು ಕೋಪಿಸಲಾಗಿ , ಆ ಮಾತ ಕೇಳಿ, ರಾಯ ಆತನ ಸಂತೈಸಿ, ಜನರ ಕರೆಸಿ, ಹೊಲಕ್ಕೆ ಹೋಗದಂತೆ ಸೇವಿಸಿ, ತನ್ನ ಪ್ರಧಾನ ಚಿತ್ರಶರ್ಮನೊಡನೆ ಅಕ್ಷರಪಟ್ಟು ಇಂತೆಂದನು 'ಈ ಭಾಹ್ಮಣನಿಗೆ ಮಂಚಿಕೆಯೆಂದಾಗ ಒಂದು ಬುದ್ದಿ ; ಕೆಳಯಿಂಕೆ ಇಳಿದಾಗ ಒಂದು ಬುದ್ಧಿ, ಇದೆ'ನೆಂದು ಕೇಳಲಾಗಿ; ಚಿತ್ರತ ರ್ಮನು-ಇನ ಹಾಕಿರುವ ಮಂಚಿಕೆಯ ಕೆಳಗೆ ಏನಾದರೂ ಒಂದು ವಿಶೇಷ ವುಂಟಾಗಿರುವುದೆಂದು ರಾಯಸಿಗೆ ಬಿಸಲಾಗಿ, ರಾಯನು ಅವನ ಕರೆಸಿ ನಿನಗಿ ಭೂಮಿಯು ಏನು ಲಾಭವುಂಟೆನಲು; ಅವನು ವರುಷಕ್ಕೆ ನೂಕು ವರಹ ಉತ್ಪತ್ತಿಯಾಗುತ್ತದೆ ಎನ್ನಲು ;- ಇಷ್ಟು ಮಾತ್ರ ಕಷ್ಟಪಡುವುದೇ ತಕ್ಕೆ? ನಿನಗೆ ಬೇಕಾದಷ್ಟು ದ್ರವ್ಯನಂ ಕೊಡುವೆ. ಈ ಭೂಮಿ ನಮಗೆ ಬಿಟ್ಟುಕೊಡು ಎಂದು ಕೇಳಿದುದಕ್ಕೆ, ಅವನು ಆ ಭೂಮಿಯನೊಪ್ಪಿಸಿದನು. ಆಗ ಅವನಿಗೆ ಸವಾಲಕ್ಷೆ ವರವ ಕೊಡಿಸಿ ಸಾವಿರ ಕೆಂಡುಗ ಧಾನ್ಯ ಬರು ನಂಥ ಭೂಮಿ ಸಹ ಕೊಟ್ಟು ಕಳುಹಿಸಿ ಬಿಟ್ಟು, ಬಳಿಕ ಆ ಹೊಲದ ಸುತ್ತ ಸರವತ್ತಿಗೆ ಬಿಡಿಸಿ ಮಂಚಿಕೆಯು ಕೀಳಿಸಿ ಶೋಧಿಸಲಾಗಿ; ಪುರುಷಪ್ರಮಾ ಇದ ಕೆಳಗೆ ಕಲ್ಲು ಮಂಟಪದಲ್ಲಿ ಕೊಟಸೂರಪಕಾರಕಾಂತಿಯಿಂದ ನವ ರತ್ನಮದುವಾದ ಮುವತ್ತೆರಡು ಸುತ್ತ ಆಯುಕ್ತವಾದ ನಿಂಹಾಸನ ಮಹಾ ಅರ್ಭಟಿಸುವುದು ಕಂಡು, ಭೋಜರಾಯನು ಬಹುವರ್ಷದಿಂದ ಅದಕ್ಕೆ ಬಲಿ ಯಂ ಕೊಡಿಸಿ, ಮೇಲಕ್ಕೆ ತೆಗೆಸಿ, ಉತ್ಸಾಹದಿಂದ ಪಟ್ಟಣಕ್ಕೆ ಕೊಂಡು ಹೋಗಿ, ಆಸನಮಂಟಕ್ಕೆ ಇರಿಸಿ, ಸೋಡಶೋಪಚಾರದಿಂದ ಪೂಜೆಯಂ ಮಾಡಿಸಿ, ಬಹುದೇವಾರಿಗೆ ಸಂತರ್ಸಣೆಯಂ ಮಾಡಿಸಿ, ಧನಕನಕ ವಸ್ತುವಾಹನಗಳ ವಾನನಂ ಕೊಟ್ಟು, ತಾನು ನವರತ್ನಾಭರಣಾಲಂಕೃತ ನಾಗಿ, ತನ್ನ ಪುರಜನ ಸರಿಜನ ವಿದ್ವಾಂಸನ ಮುಂತಾದ ಜನಕೆಲ್ಲ ದಿವ್ಯಾ