ಪುಟ:ಬತ್ತೀಸಪುತ್ತಳಿ ಕಥೆ.djvu/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಒ ೧೨ ಕರ್ಣಾಟಕ ಕಾವ್ಯ ಕಲಾನಿಧಿ. ರಾಯನು ಸದರಿನಲ್ಲಿ ಕುಳಿತಿರುವಾಗ, ಅನೇಕ ಹಾವಿನ ಪೆಟ್ಟಿಗೆಯಂತೆ ಬಿಟ್ಟು, ಡಕ್ಕೆಗಳಂ ಬೆಳಗಿ, ನಾಗಸರದ ಧನಿಯಂ ತೊ?, 'ಹಾವುಗಳ ವಿಚಿ ತದಿಂದಾಡಿಸಿ, ಹಾವಿನ ಮಳೆ ಹೆಡೆ ವಿಷವು ತೋರಿಸಿ, ಹಾವುಗಳ ಕಚ್ಚಿಸಿ ಮುದ್ದಾಡಿಸಿ ಮುದ್ದಿನಿ' ಈ ಮೆರೆಯಲ್ಲಿ ತನ್ನ ಅನೇಕ ವಿದ್ಯೆಯ ತೋಯಿಸ ಲಾಗಿ, ರಾಯನು ಇಂತೆಂದನು.-ಎಲೆ ಅಹಿತುಂಡಿಕನೇ ' ಸಕಲಜೀವರಾತಿ ಗಳಿಗೂ ಕಿವಿಗಳುಂಟಪ್ಪೆ, ಈ ಸರ್ಪಜಾತಿಗೆ ಏನುಕಾರಣ ಕಿವಿಗಳಿಲ ? ಎಂದು ಕೇಳಲಾಗಿ ಅವನು ಅದಕ್ಕೆ ಹೇಳಿದುದು -ಎಲೈ ಮಹಾರಾಯನೇ ? ಬ್ರಹ್ಮದೇವನು ಕಿವಿಗಳುಂಟುಮಾಡಿದರೆ ಮುಂದೆ ಭೂಲೋಕದಲ್ಲಿ ಭೋಜಚಕ್ರವರ್ತಿಯ ಕೀರ್ತಿ ಸರ್ಗಮರ್ತ್ಯ ಪಾತಾಳ ತುಂಬುವುದಿಂದ ಈ ಉರಗಜಾತಿಗಳ ಒಡೆಯನಾದ ಭೂಮಿಯ ಹೊತಿಹ ಮಹಾಶೆಸನು ಕೇಳಿದರೆ, ಆ ಮಹಾಶೇಷನ ಮಕುಟದ ಮೇಲಿರುವ ಲೋಕಂಗಳು ಮಡ ಕೆಯ ಅಡಿಕಲು ಬಿದ್ದೋಪಾದಿಯಲ್ಲಿ ಸಡಲಿ ಕೆಳಯಿಂಕೆ ಬೀಳು ವುವು. ಇದ ತಿಳಿದವನಾಗಿ ಅಜನು ಈ ಜಾತಿಗೆ ಕಿಎಗಳೆ ಮಾಡಲಿಲ್ಲ ಎಂದು ಅಕೆಯಂ ಮಾಡಲಾಗಿ ; ರಾಮನು ಮೆಚ್ಚಿ, ಅವನಿಗೆ ಸವಾಲಕ್ಷ ವರಹವಂ ಕೊಟ್ಟು ಕಳುಹಿಸಿದನು. ಇಂತಹ ಉದಾರತ್ನ ನಿಮ್ಮ ರಾಯ ನಿಗೆ ಉಂಟೆ ? ಎನ್ನಲಾಗಿ; ಪ್ರಥಮ ಸೋಪಾನದ ಜಯವತಿ ಎಂಬ ಪುತ್ರ ನಸುನಕ್ಕು ಮುಖವ ನೋಡಿ,-ಇಸಿ ' ನಿಮ್ಮ ರಾಯನ ಉವಾರ ಇದೆ ' ಎಂದು, ಹಾಸ್ಯವ ಮಾಡಿ ಹೇಳಿದ ಉಗಕರ. ಅದಂತೆಂದರೆ - ಕೇಳ್ಳೆಯ ಚಿತ್ರತರ್ಮನೇ ಚಕೆ ತರನಾದ ಈ ನಮ್ಮ ವಿಕ ಮಾದಿತ್ಯರಾಯನು ಸಿಂಹಾಸನಾರೂಢನಾಗಿ ಈ ರಾಜ್ಯಗಳ ಸರಿ ಪಾಲನೆ ಮಾಡುತ್ತಿರುವಲ್ಲಿ ಆತನ ವೀರವಿತರಣವನ್ನು ಬಣ್ಣಿಸಿ ಹೇಳುವು ದಕ್ಕೆ ಸಹಸ್ರ ಪಡೆ ಅ ಗಳಿಗೆ ತೀರದು. ಅದೆಂತೆಂದರೆ-ಹಿಮವತ್ರ ರ್ವತ, ಗೋಕರ್ಣ, ಕೇದಾರ, ಗಯೆ, ಕಾತಿ, ಕಾಂಜಿ, ೨ರಂಗ, ಮಧುರೆ, 2. ವಿಟಿಗೆಗಳಂ. 3. ಹಾವಿನ ವಿಷವಂತೋಯಿಸುವ, ಹಾವುಗಳಂ ಮುದ್ದಿ ಸುವ, ಹಾವುಗಳಂ ವಿಚಿತ್ರದಿಂದಾಡಿಸುವ, ಹಾವಿನ ಮಣಿ ಹೆಡೆಗಳಂ ತೋರಿ ಸುವ, ಹಾವುಗಳ ರಾಶಿಯಂ ತುಳಿವ, ಹಾವುಗಳ ಗೀತಗಳಿಂದ ಆಡಿಸುವ, ಬಂಧ ಗಳಂ ತೋರಿಸುವ 4, ಸಹ ಹೆಡೆಯುಳ್ಳ ಆದಿಶೇಷನಿಗೆ ಅಳವಲ್ಲ. s