ಪುಟ:ಬತ್ತೀಸಪುತ್ತಳಿ ಕಥೆ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಕರ್ಣಾಟಕ ಕಾವ್ಯಕಲಾನಿಧಿ. ವರಹಮಂ ಕೊಟ್ಟು ಕಳುಹಿಸಿದನು, ಕಣಾ! ನಮ್ಮ ರಾಯನ್‌ದಾರ್ ಧೈರಾದಿ ಗುಣಗಳುಂಟೆ ? ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ - ಸುರತಪ್ರಿಯೆಯೆಂಬ ಪುಳಿ ಪೇಳಿದ ನಾಲ್ಕನೆಯ ಕಥೆ

  • - ೫ ನೆಯ ಕಧೆ.

೪ ಐದನೆಯ ದಿವಸದ ಭೋಜರಾಯನು ಸ್ವಾನ ದೇವತಾರ್ಚನೆ ಭೋಜನ ತಾಂಬೂಲಮಂ ತೀರಿಸಿಕೊಂಡು, ನಿಂಹಾಸನದ ಬಳಿಗೆ ಎಂದಿನಂತೆ ಚಿತ್ರಶರ್ಮನ ಕೈಲಾಗಿನಿಂದ ಬಂದು, ನವರತ್ನ ನಯವಾದ ಹಾವುಗೆಯ ಬಲದ ಕಾಲಂ ನಿಡುವ ಸಮಯದಲ್ಲಿ, ಅಸೋಪಾನದ ಆನಂದಸಂಜೀವಿನಿ ಯೆಂಬ ಪುತ್ಥಳಿಯು-ಹೊ ಹೊ ನಿಲ್ಲು ನಿಲ್ಲು, ಎಲೈ ಭೋಜರಾಜನೆ? ನನ್ನ ಒಡೆಯನಾದ ವಿಕ್ರಮಾದಿತ್ಯರಾಯನ ಸಾಹಸಾದಿ ಗುಣಗಳುಂಟಾದರೆ ಈ ಸಿಂಹಾಸನವನೇಳು, ಅಲ್ಲದೆ ಕೆಲವಾರು, ಮೀರಾ ಕುಳಿತರೆ ತಲೆ ಸಹಸ್ರ ಹೋಳಾಗುವುದು, ಎನ್ನಲಾಗಿ ; ರಾಯನು ಖಿನ್ನನಾಗಿ ಬೇಯುತಿ ನಿಂ ಹಾಸನದಲ್ಲಿ ಕುಳಿತುಕೊಂಡು, ಚಿತ್ರರ್ವುನಿಂದ ಕೇಳಿದ ಕಥೆ '- ಎಲೈ ಪುತ್ತಳಿಯೇ ಕೇಳು. ನನ್ನ ರಾಯನು ಧಾರಾಪುರದಲ್ಲಿ ಸುಖರಾಜ್ಯಂಗೆಯ್ಯುವಲ್ಲಿ ಆಪುರದ ಬಹುದರಿದ್ರನಾದ ವೀರಸೇನನೆಂಬ ವಿಪ್ರನಿಗೆ ಭವಭೂತಿಯೆಂಬ ಮಗನು, ಬಹು ಪುಣ್ಯವಂತನಾದ ಪುಷ್ಪದತ್ತ ನೆಂಬ ದ್ವಿಜನಿಗೆ ಪಿಪ್ಪಲಿತನೆಂಬ ಮಗನು, ಅವರಿಬ್ಬರೂ ತಮ್ಮ ತಮ್ಮ ತಂಗೆ ಗಳಿಗೆ ಪಂಚಪ್ರಾಣವಾಗಿ ಇದ್ದರು. ಅವರಿಗೆ ಒಂದು ಅಕ್ಷರವೂ ಬಾರದ ನಿಮಿತ್ತ ವಿದ್ಯವಿಲ್ಲದ ಮಕ್ಕಳು ಇದ್ದು ಪ್ರಯೋಜನವಿಲ್ಲವೆಂದು ತಂದೆ ಗಳು ಆಡಿದ ಮಾತ ಕೇಳಿ, ಅವರಿಬ್ಬರೂ ಏಕವಾಗಿ ಹೋಟು, ಮಂಡಲ ಮತಿಯೆಂಬ ಪಟ್ಟಣಕ್ಕೆ ಹೋಗಿ, ಕಾಳ ತರ್ಮನೆಂಬ ಗುರುವಂ ಕಂಡು, ನವಿನಿ-ಎಲೈ ಗುರುವೆ ನಮಗೆ ಸರ್ವವಿದ್ಯವಂ ಹೇಳಿ ರಕ್ಷಿಸಬೇಕೆ ಲು ; ಆಗುರುವು-ಎಲೈ ತಸ್ಯರುಗಳಿರ ? ವಿದ್ಯೆ ಕಲಿಯಬೇಕಾದರೆ