ಪುಟ:ಬತ್ತೀಸಪುತ್ತಳಿ ಕಥೆ.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫ ಟ ಬತ್ತೀಸ ಪುತ್ಥಳಿ ಕಥೆ, ದುಃಖ ಪರಿಹರಿಸಿದರೆ ಸರಿ; ಇಲ್ಲದೆ ಇದ್ದರೆ ಊರ ಮುಂದಲ ಮಹಾಕಾಳಿ ಯೆದುರಾಗಿ ನಮ್ಮ ವಿತ್ತಸಾರಯಾವತ್ತೂ ದಾನವಂ ಮಾಡಿ, ದಂಪತಿಸಹ ಅಗ್ನಿಪ್ರವೇಶಮಾಡುತ್ತ ಇದ್ದೇವೆ ಎನ್ನಲಾಗಿ; ರಾಯ ತನ್ನ ಸದರಿನಲ್ಲಿ ಇರುವ ಲಕ್ಷವೂ ತೊಂಬತಾಲುಸಾವಿರಕವಿಗಳ - ಇದುರ್ಥ ಹೇಳಿ, ಎಂದು ಅಪೇಟಂ ಕೊಟ್ಟನು. ಯಾವತ್ತು ಕವಿಗಳ ಬೇಟ ನೋಡಿ ಸುಮ್ಮನಿದ್ದರು. ಅಷ್ಟ ಅಲ್ಲೇ ರಾಯ ಎದ್ದು ಹೋದನು. ಹೀಗೆ ಐದಾಜು ದಿನವಾದರೂ ಅದರರ್ಥ ಹೇಳದಿರಲು; ರಾಯನು ಮಹಾಕೋಪದಿಂದ. 'ನಾಳೆ ಈಅಕ್ಷರಾರ್ಥ ಹೇಳಿ ದರೆ ಸರಿ; ಇಲ್ಲದೆ ಇದ್ದರೆ ನಿಮ್ಮನ್ನೆಲ್ಲಾ ಕಲ್ಲುಗಾಣಕ್ಕೆ ಹಾಕಿಸುವೆ ನೆಂದು ಕಟ್ಟಳೆಯಂ ಮಾಡಲಾಗಿ, ವರರುಚಿ ಮುಂತಾದ ಕವಿಗಳೆಲ್ಲಾ-ಹರಹರ ' ನಮಗೆ ಮರಣಕಾಲ ಬಂತೇ ', ಎಂದು ಯೋಚಿಸುವಲ್ಲಿ ಕಳಿಂಗದೇಶದಿಂದ ಒಬ್ಬ ವಿದ್ವಾಂಸವಿಪ್ರನು ಬಂದು, ಈ ಸಮಾಚಾರವಂ ಕೇಳಿ, ಆ ಕ್ಷಣವೇ ಆ ಮಹಾಕಾಳಿಯ ಗುಡಿಯ ಬಳಿಗೆ ಹೋಗಿ, ಸ್ನಾನವಂ ಮಾಡಿ, ಆ ದೇವಿ ದರ್ಶನವಂ ಮಾಡಿಕೊಂಡು ಬರುವಷ್ಟಿ, ಸಾಯಂಕಾಲವಾಗಲಾಗಿ; ಅವನು ಅಲ್ಲೇ ಇರಲಾಗಿ, ಅರ್ಧರಾತ್ರಿಯಲ್ಲಿ ದೇವಿ ಬೇಂಟೆನಿಮಿತ್ತ ಹೋ ಟುದನ್ನು ಭೂತಗಣನೆಲ್ಲ ಕಂಡು-ಎಲೆ ತಾಯೆ ನಮಗೆ ಆಹಾರವಿಲ್ಲ ವೆಂದು ಬಿನ್ನಯಿಸಲಾಗಿ, ದೇವಿಯು-ಸೈರಿಸಿ, ನಾಳೆ ಭೋಜರಾಯ ತನ್ನ ಬಳಿಯಲ್ಲಿ ಇರುವ ಕವಿಗಳೆಲ್ಲರನೂ ಕಲ್ಲುಗಾಣಕ್ಕೆ ಹಾಕಿಸುವನು. ಆಗ ನಿಮಗೆ ಆಹಾರಕೊಡಿಸುವನು-ಎಂದು ಹೇಳಲಾಗಿ; ( ಇದು ನಿಜವೇ? ಆ ರಾಯ ಕವಿಗಳಿಗೆ ಬದುಕುವಂಥವನು ; ಕಲ್ಲುಗಾಣಕ್ಕೆ ಹಾಕಿಸುವ ಕಾರಣ ವೇನು?' ಎಂದು ಕೇಳಲಾಗಿ, 'ಈ ಮಾತು ಅಬದ್ಧವಲ್ಲ ಎಂದು ಎಲ್ಲ ವಿವರವಂ' ಹೇಳಿ, ಆಬಳಿಕ ಅಕ್ಷರಾರ್ಥ ಹೇಳಿದಳು. ಅದೇನೆಂದರೆ ಅನೇನ ತವ ಪುತ್ರಸ್ಯ ಪ್ರಸುಷ್ಯಸ್ಯ ವನಾಂತರೇ | 2 ಶಿಖಾಮಾಶ್ರಮ - ಪಾದೇನ ಖಡ್ಗನೋಪಹತಂ ಶಿರಃ | ) ಪಾ -1, ಪಿಪ್ಪಲೀಶನೆಂಬಾತನು ಭವಭೂತಿಯೆಂಬವನ ಕೊರಲಂ ಕೊಯ್ದು ದ ತಿಳಿಸೆ ( ಅಪ್ರತಿಖ ” ವೆಂಬ ನಾಲ್ಕು ಅಕ್ಷರವಂ ಬರೆದು ಕಳಿಸಿದನು. ಅದು ಅರ್ಧವಂ ಹೇಳಲಯದವರಿಲ್ಲ. ಆದುದರಿಂದ ರಾಯನು ಎಲ್ಲರನ್ನು ಕಲ್ಲುಗಾ ಣಕ್ಕೆ ಇಕ್ಕಿಸುವನೆಂದು ಕಟ್ಟು ಮಾಡಿದ್ದಾನೆ ಎಂದು. 2. ಶಿಖಾಯಾಂ ಕ್ರೌಂಚ, ೧ ೫ m