ಪುಟ:ಬತ್ತೀಸಪುತ್ತಳಿ ಕಥೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕರ್ಣಾಟಕ ಕಾವ್ಯಕಲಾನಿಧಿ, ಎಂದು ಪೂರ್ತಿಮಾಡಿ ಹೇಳಿದುದ,ಅಲ್ಲಿದ್ದ ಬಾ ಹಣ ಕೇಳಿ,ಬೆಳಗಾಗೆ ರಾಯನ ಆಸ್ಥಾನಕ್ಕೆ ಬಂದು ಕವಿಗಳ ಸಮೀಪದಲ್ಲಿ ಕುಳಿತಿರುವಾಗ, ಕಳಿಂಗ ದೇಶದ ಬ್ರಾಹ್ಮಣ ಎದ್ದು ರಾಯನಿಗೆ ಆಶೀರ್ವಾದಮಾಡಿ ನುಡಿದನು:-ಕಳ್ಳ ರಾಯ, ಅಕ್ಷರಾರ್ಥದ ವಿವರವೇನೆಂದರೆ-ಪಿಪ್ಪಲೀಶ ಭವಭೂತಿ ಇವರಿರ್ವರು ವಿದ್ಯಾಭ್ಯಾಸವಂ ಮಾಡಿ ಜತೆಗೂಡಿ ಅರಣ್ಯದಲ್ಲಿ ಬರುವಾಗ ವಿರೋಧಹುಟ್ಟಿ ಪಿಪ್ಪಲೀಶ ಭವಭೂತಿಯ ಶಿಖೆಯಂ ಪಿಡಿದು ಅವನ ಕೊರಲಂ ಹಿದನು, ಎಂದು ಅಕ್ಷರಾರ್ಥ ಹೇಳಿದುದ ರಾಯ ಕೇಳಿ, ದಂಪತಿಗಳಿಗೆ ಹೇಳಲಾಗಿ; ಅವರು ಕೇಳಿ ಪ್ರತಾಪದಿಂದ ಮಹಾಕಾಳಿಯ ಗುಡಿಯಬಳಿಗೆ ಹೋಗಿ, ಸ್ನಾನ ವಂ ಮಾಡಿ ಅಗ್ನಿಕೊಂಡವಂ ತೆಗೆದು ಬೆಂಕಿಯ ಹಾಕಿಸಿ ಹರಿದ್ರಾವಸ್ವಂ ಧರಿಸಿ ತಮ್ಮ ಸರಸ್ಪದಾನವಂ ಮಾಡಿ, ಅಗ್ನಿಗೆ ಬೀಳುವ ವೇಳೆಯಲ್ಲಿ ಆ ದೇವಿ ಪ್ರತ್ಯಕ್ಷವಾಗಿ, ಕೈವಿಡಿದು-'ಎಲೈ ದಂಪತಿಗಳಿರಾ' ಏತಕ್ಕೆ ಆಗ್ನಿಗೆ ಬಿದ್ದಿರಿ? “ಎಂದು ಕೇಳಲಾಗಿ, ಅವರಿಂತೆಂದರು:-ದೇವಿ! ನಮಗಿದ್ದ ಒಬ್ಬ ಮಗನ ಈ ಮೋರೆ ನೀನು ಮೂಡಿಸಿದ ಬಳಿಕ ನನ್ನ ದೇಹಗಳನ್ನೂ ನಿನಗೆ ಪ್ರೀತಿ ಪುಣ್ಯವಂ ಪಡೆಯಬೇಕೆಂದು ಈಕೆಲಸ ಮಾಡಿದೆವು ಎನ್ನಲಾಗಿ; ಅದೇ ವಿಯು ಮೆಚ್ಚಿ ಅಗ್ನಿಗೆ ಏತಕ್ಕೆ ಬಿದ್ದಿರಿ? ನಿಮ್ಮ ಮಗ ಇಂಥ ವನದ ಗವಿಯ ಬಳಿಯಲ್ಲಿ ಮಲಗಿ ಇದ್ದಾನೆ. ಅಲ್ಲಿಗೆ ನೀವು ಹೆ ೧ಗಿ ನಮ್ಮ ತೀರ್ಥವ ಹಾಕಿ ಕೈಯಲ್ಲಿ ನನ್ನ ಪ್ರಸಾದ ಕೊಟ್ಟರೆ ನಿಮ್ಮ ಮಗ ಎದ್ದು ನಿಮ್ಮ ಸಂಗಡ ಬರುವನು' ಎಂದು ಗುರುತ ಹೇಳಿ ಮಾಯವಾದಳು. ದಂಪತಿಗಳು ದೇವಿ ಹೇಳಿದ ವನದ ಗವಿಯೆಡೆಗೆ ಹೋಗಿ ಮಲಗಿರುವ ಮಗನಂ ಕಂಡು, ಅವನ ಮೇಲೆ ತೀರ್ಥವಂ ಹಾಕಿ, ಕೈಯಲ್ಲಿ ಪ್ರಸಾದ ಕೊಡಲು, ಭವಭೂತಿಗೆ ಬೆವ ಬಂದು, ಎದ್ದು , ತಾಯಿತಂದೆಗೆ ನಮಿಸಿ ನಿಂದಿರುವ ಮಗನ ನೋಡಿ, ಅತಿಸಂ ತೋಷದಿಂದ ಮಗನ ಕರೆದುಕೊಂಡು ಊರಿಗೆ ಬಂದು, ರಾಯನಿಗೆ ತಮ್ಮ ಮಗನ ತೋsಸಿದುದಕಂದ, ರಾಯನು ಆ ಪಿಪ್ಪಲೀಶನ ಕರೆಸಿ,-ಸಂಗಡ ಬಂದವನ ಹೀಗೆ ಕೊಲ್ಲಬಹುದೇ? ಎಂದು, ಅವನಿಗೆ ತಕ್ಕ ಶಿಕ್ಷೆಯಂ ಮಾಡಿಸಿ, ದಂಪತಿ ಮಗನ ಸಹ ಮನ್ನಿಸಿ, ಅಕ್ಷರಾರ್ಥ ಹೇಳಿದ ಬ್ರಾಹ್ಮಣನಿಗೆ ಸವಾ ಲಕ್ಷ ವರಹವಂ ಕೊಟ್ಟು ಕಳುಹಿಸಿದನು ಎಂದು ಹೇಳಿದುದಕ್ಕೆ ಆನಂದ ಸಂಜೀವಿನಿ ಎಂಬ ಪುತ್ತಳಿಯು ನಗುತ್ತ ಹಾಸ್ಯಗೈದು ಹೇಳಿದಉಪಕಥೆ:-