ಪುಟ:ಬತ್ತೀಸಪುತ್ತಳಿ ಕಥೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ೨ ವ ಬತ್ತೀಸ ಪುತ್ತಳಿ ಕಥೆ. ಕೇಳ್ಳೆಯ ಚಿತ್ರಕರ್ಮನೇ! ನಮ್ಮ ವಿಕ್ರಮಾದಿತ್ಯರಾಯನು ಸುಖ ದಿಂದ ರಾಜ್ಯಪಾಲಿಸುವಲ್ಲಿ ಬಂದುದಿನ ಡೋಲಗಕೊಟ್ಟು ಕುಳಿತಿರು ವಾಗ ಅಲಂಬಕೀರ್ತಿ ಎಂಬ ಪುರದ ರನ್ನ ವರದನೆಂಬ ವ್ಯಾಪಾರಿ ಬಂದು, ಐ ದು ರತ್ನನಂ ಕಾಣಿಕೆಯಿತ್ತು ರಾಯನ ಕಾಣಿಸಿಕೊಳ್ಳಲಾಗಿ ; ರಾಯನು ಅವನ ಕುಳ್ಳಿರಿಸಿಕೊಂಡು, 'ಈ ರತ್ನಗಳಿಗೇನು ಕ್ರಯ ಹೇಳು' ಎಸಲಾಗಿ, ಅದಕ್ಕವನು-“ಇನ್ನು ಹತ್ತು ರತ್ನ ಊರಲ್ಲಿ ಇದೆ, ಅದನ್ನು ತರಿಸಿದರೆ ಆಬಳಿಕ ಕ್ರಯವಂ ಹೇಳುವೆ” ಎಂದ ಕಾರಣ, ರಾಯನು ಗಾಳಿಯನೆಂಬ ಮಳೆಯಗಾಯ ಬಂಟನ ಕರೆದು, 'ಅಲಂಬಕೀರ್ತಿಯೆಂಬ ಪುರಕ್ಕೆ ಹೋಗಿ, ಈ ರನ್ನ ವರದನ ಮನೆಯಲ್ಲಿ ಹತ್ತು ರತ್ನವಿದೆಯಂತೆ. ಅದ ತೆಗೆದು ಕೊಂಡು ಮಲದಿನಕ್ಕೆ ಬಾರೆಂದು” ಕಟ್ಟಳೆಮಾಡಿ ಆವಾಣಿಜನ ಗುಕುತಂ ಕೊಟ್ಟು ಕಳುಹಿಸಲಾಗಿ ; ಅವನಾಪುರಕ್ಕೆ ಹೋಗಿ, ಅ ಸೆಟ್ಟಗುಲುತ ಅವನ ಮನೆಯವರಿಗೆ ಕೊಟ್ಟು ಹತ್ತು ರತ್ನ ತೆಗೆದುಕೊಂಡು ಬಹುವೇ ಗದಿಂದ ಬರುವಾಗ, ಮಾರ್ಗದಲ್ಲಿ ಹುಡುಗಿಯೆಂಬ ಹೊಳೆ ಪೂರ್ಣಪ್ರವಾ ಹದಿಂದ ಹರಿಯುತ್ತಿರುವುದು ಕಂಡು, ರಾಯನ ಕಟ್ಟು ಮಿಾದರೆ ಶಿಕ್ಷೆ ಯಾದೀತೆಂದು ಅಂದೆ, ಅಂಬಿಗನ ಕರೆದು-ಈ ನದಿ ದಾಟಿಸೆನ್ನಲು, ಅಂಬಿ ಗನು-'ತುಂಬಿದ ನದಿ ದಾಟಿಸುವುದು, ಮಹಾಪುರುಷರಲ್ಲಿ ವಿರೋಧಿಸು ವುದು ಎರಡೂ ಆಗದು ಎಂಬ ನೀತಿಯಿರುವುದರಿಂದ ದಾಟಿಸಕೂಡದು ' ಎಂದನು. ಆ ಮಾತಿಗೆ, ನನ್ನ ಜೀವ ಹೋದರೂ ಹೋಗಲಿ, ಬೇಗ ದಾ ಟಿಸು ಎನ್ನಲಾಗಿ ; ಅಂಬಿಗ-“ಸುಮ್ಮನೆ ದಾಟಿಸುವುದಿಲ್ಲ' ಎನ್ನಲಾಗಿ, ಆ ಹತ್ತು ರತ್ನದಲ್ಲಿ ಐದು ರತ್ನನಂ ಕೊಟ್ಟು, ಆನದಿಯಂ ದಾಟಿ, ರಾಯನ ನೇಮಕದ ಮೇರೆ ಬಂದು, ರಾಯನೊಡನೆ, ತಾನು ಹೋಗಿ ಬಂದ ವೃತ್ತಾಂ ತವ ಶ್ರುತಪಡಿಸಿ, ಉಳಿದ ಐದು ರತ್ನ ವಂ ಮುಂದಿರಿಸಿ, ಭಯದಿಂ ನಿಂದಿ ರಲು; ಆರಾಯನು ಐದು ರತ್ನನಂ ತೆಗೆದುಕೊಂಡು, ನೀನು ಕೊಟ್ಟು ಬಂದ ಪಂಚರತ್ನದ ಕ್ರಯಕೊಡಿಸುವೆ ಹೆದರಬೇಡ, ಎಂದನು. ಅದುಕಾರಣ * ರಾಯ ರಾಜ್ಯಭಾರವಂ ಮಾಡಿದುದಕ್ಕೆ ಕಟ್ಟಲೆ ತಪ್ಪದೆ ನಡೆವುದೇ ಫಲ; ತಪಸಿಗೆ ಚರ ತಪ್ಪದೆ ನಡೆವುದೇಫಲ ; ವಿದ್ಯೆ ಕಲಿತುದಕ್ಕೆ ಜ್ಞಾನೋದಯ ವಾಗುವುದೆ ಫಲ ; ಧನಾಡ್ಯನಾದುದಕ್ಕೆ ದಾನ ಕೊಡುವುದೇ ಫಲ ” ಎಂಬ