ಪುಟ:ಬತ್ತೀಸಪುತ್ತಳಿ ಕಥೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅv ಕರ್ಣಾಟಕ ಕಾವ್ಯ ಕಲಾನಿಧಿ. ನೀತಿಯಿಂ ನಮ್ಮ ಆಜ್ಞೆ ತಪ್ಪದಂತೆ ತನ್ನ ಜೀವ ಉಳಿಸಿಕೊಂಡು ಬಂದ ಬಂಟನಿಗೆ ಅವ ತಂದು ಒಪ್ಪಿಸಿದ ಐದು ರತ್ನ ವಂ ಅವನಿಗೆ ಕೊಟ್ಟು, ವರ್ತ ಕನಾದ ರನ್ನ ವರದನಿಗೆ ಹದಿನೈದು ರತ್ನದ ಕಯವು ಇನಾಮುಗಳು ಸಹ ಕೊಟ್ಟು ಮನ್ನಿಸಿ ಕಳುಹಿಸಿದನು ಕಣಾ ! ಇಂತು ಕರ್ಣಾಟಕ ಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಅನಂದಸಂಜೀವಿನಿ ಎಂಬ ಪುತ್ತಳಿ ಪೇಳಿದ ಐದನೆಯ ಕಥೆ. ... ೬ ನೆಯ ಕಧೆ. M ಆ೫ನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು ಸಾಲಂಕಾರಭೂಷಿತನಾಗಿ ಚಿತ್ರಶರ್ಮನ ಕೈಲಾಗಿನಲ್ಲಿ ರತ್ನಖಚಿತವಾದ ಮಾವುಗೆ.೦ ಮೆಟ್ಟಿಕೊಂಡು ನಿಂಹಾಸನದ ಬಳಿಗೆ ಬಂದು, ಬಲದ ಕಾಲಂ ನೀಡುವ ಸಮಯದಲ್ಲಿ , ಆ ಸೋಪಾನದ ರತಿವಿಯ ಎಂಬ ಪುಳಿಯ-ಹೊ ಹೊ ! ನಿಟ್ಟುಸಿಲ್ಲು ಭೋಜರಾಯನೇ ? ನಮ್ಮ ರಾಯನಂತ ವೀರವಿತರಣಗಳುಳೆಡೆ ಏಟು, ಇಲ್ಲದಿದ್ದರೆ ಕೆಲಸಾರು, ತಾ ಕುಳಿತೆಯಾದರೆ ತಲೆ ಸಹಸ್ರ ಹೋಳಾಗು ವುದು' ಎಂದು ಧಿಕ್ಕರಿಸಲಾಗಿ, ಭೋಜರಾಯನು ಬೇಲೆ ನಿಂಹಾಸನದಲ್ಲಿ ಕುಳಿತು ಚಿತ್ರಶರ್ಮನಿಂದ ಬೆಳೆಸಿದ ಕಥೆ - ಎಲೆ ಪುತ್ತಳಿಯೆ ಕೇಳು. ನನ್ನ ರಾಯನು ಧಾರಾಪುರದಲ್ಲಿ ಸುಖ ರಾಜ್ಯಂಗೆಯ್ಯುವಲ್ಲಿ ಒಂದುದಿನ ವೈಹಾಳಿಗೆ ಹೋಗಿ, ಶಿವನಸಮುದ್ರ ನೋ ಡುತ್ತ ಇರಲು, ಒಬ್ಬ ವಿಸ್ತನು ಕಟ್ಟಿಗೆಯ ಹೊರೆಯಂ ಹೊತ್ತುಕೊಂಡು ಹೊಳೆಯ ಕಷ್ಟದಿಂದ ದಾಂತಿ ಬರುತ್ತಿರುವುದ ಕಂಡು, ಆತನು ದಾಂಟಿ ಈ ಚಿಗೆ ಬಂದಬಳಿಕ ರಾಯ ಇಂತೆಂದನು -'ಎಲಾ ಬ್ರಾಹ್ಮಣ ! ಕಟ್ಟಿಗೆಯ ಹೊತ್ತು ಕಷ್ಟಪಡುವುದೇನು? ಎನ್ನಲಾಗಿ ; ಅವನನ್ನ ಪೂರ್ವಾರ್ಜಿತ' ದೆಂದು ಹೇಳಿದ ಮಾತಿಗೆ, ರಾಯನು ಮಲಗಿ, ಅವನಿಗೆ ಸವಾಲಕ್ಷವರಹ ಕೊಡಹೇಳಿ ನನಗೆ ಕಟ್ಟುವಾಡಿಸಿದ. ಆದಿನ ಕೊಡದಿರಲು ....ದಿನ