ಪುಟ:ಬತ್ತೀಸಪುತ್ತಳಿ ಕಥೆ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್9 ಬತ್ತೀಸಪುತ್ತಳಿ ಕಥೆ. ಆತ ಬಂದು ರಾಯನ ಕೇಳಲು, ನನ್ನ ಕರೆದು ಕೊಡಲಿಲ್ಲವೆ?' ಎಂದು ಕೇಳಿ ಅವನಿಗೆ ಎರಡು ಸವಾಲಕ್ಷ ವರಹ ಕೊಡು ಎಂಬದಾಗಿ ಹೇಳಿದನು. ಆ ದಿನವೂ ಕೊಡದೆ ಇರಲು, ಬೆಳಗಾಗಿ ಅವ ಬಂದು ಕೇಳಲು, ರಾಯನು 'ಮು ಸವಾಲಕ್ಷ ವರಹ ಕೊಡು' ಎಂಬುದಾಗಿ ಹೇಳಿದನು. ಆ ದಿನವು ಕೊಡದೆ ಇರಲು, ಮಳದಿನ ಆತ ಬಂದು ರಾಯನ ಕೇಳಲು, ನಾಲ್ಕುಸವಾ ಲಕ್ಷ ವರಹ ತಾನೇ ಕೊಟ್ಟು ಮನ್ನಿಸಿ ಕಳುಹಿದನು. ಹೀಗೆ ಒಂದು ಮಾತಿಗೆ ಇಷ್ಟು ವನ್ಯ ಕೊಡುವರುಂಟೆ ! ಇಂಥ ವಿತರಣವುಳ್ಳವ ನಮ್ಮ ರಾಯನು, ಎಂದುದಕ್ಕೆ ರತಿಕ್ರಿಯೆ ಎಂಬ ಪುತ್ತಳಿ ನಗುತ್ತ ಹಾಸ್ಯಂಗೆಯ್ಯು ಹೇಳಿದ ಉಪಕಥೆ :- ಕೆಳ್ಳೆಯ ಚಿತ್ರವರ್ಮನೆ : ನನ್ನ ಒಡೆಯನಾದ ವಿಕ್ರಮಾದಿತ್ಯ ರಾಯನ ಪ್ರತಾಪವ. ಅದೆಂತೆನೆ-ನಮ್ಮ ವಿಕ್ರಮಾದಿತ್ಯರಾಯನು ರತ್ನನಿಂ ಹಾಸನಾರೂಢನಾಗಿ ಸುಖದಿಂದ ರಾಜ್ಯಪಾಲಿಸುವಲ್ಲಿ ಒಂದುದಿನ ರಾಯ ಭೂಸಂಚಾರ ನಿಮಿತ್ತವಾಗಿ ಭಟ್ಟಿಯಂ ಕರೆದು, ನಾನು ಬರುವ ಪರಿಯಂ ತಕ ನೀನು ರಾಜ್ಯಭಾರವಂ ಮಾಡಿಕೊಂಡಿರು ಎಂದು ನೇಮಿಸಿ, ತಾನು ಹೊಟು ಪರಸಂಸ್ಥಾನಕ್ಕೆ ಹೋಗಿ, ಅಲ್ಲಿ ಅರಸನ ಕಾಣಿಸಿಕೊಳ್ಳಲಾಗಿ, ಅರಸು-ನಿನಾರೆಂದು ಕೇಳಿದುದwಂದ ಇಂತೆಂದನು -'ನಾನು ವಿಕ ನು ; ನನಗೆ ಏನಾದರೂ ಊಳಿಗ ನೇಮಕ ಮಾಡಿಸಿದರೆ ಇರುವೆ ಎನ್ನಲಾಗಿ, ಅರಸು - ನಿನಗೇನು ಸಂಬಳ? ?” ಎಂದು ಕೇಳಲಾಗಿ ; “ಎಲೈ ಅರಸ್ ! ನನ್ನ ಇರಿಸಿಕೊಳ್ಳುವುದುಂಟಾದರೆ ಬಲಗೈಗೆ ಸಾವಿರ ವರಹ ; ಎಡಗೈಗೆ ಸಾವಿರ ವರಹ. ಈ ಮೇರೆಗೆ ಎರಡುಸಾವಿರ ವರಹ ಸಂಬಳ ಮಾಡಿಕೊಟ್ಟರೆ ಇರುವೆನು ಎನಲಾಗಿ ; ಆ ಮಾತ ಸಮ್ಮುಖದಲ್ಲಿ ಇದ್ದವರೆಲ್ಲಾ ಕೇಳಿ“ಇವನಿಗೆ ಏತಕ್ಕೆ ಇಷ್ಟು ಸಂಬಳ ?' ಎಂದು ಜರಿಯಲಾಗಿ ; ಅರಸು ಇವ ನಲ್ಲಿ ಅಂಥ ಪರಾಕ್ರಮವಿಲ್ಲದೆ ಇಷ್ಟು ಸಂಬಳ ಏತಕ್ಕೆ ಕೆಳಾನು? ಎಂದು ಇರಿಸಿಕೊಂಡು, ಅರಮನೆಯ ಒಳಬಾಗಿಲಲ್ಲಿ ಕಾದಿರುವ ಚಾಕರಿಗೆ ನೇಮ ಕಪಾಡಿದನು. ಒಂದು ತಿಂಗಳಾದದಿಂದ ಸಂಬಳ ಕೇಳುವುದಕ್ಕೆ ಅರ ಸಿನ ಬಳಿಗೆ ಬರಲಾಗಿ ; ಅಪ್ಪಅಲ್ಲೆ ಅರಸು ಎದ್ದು ಅರಮನೆಗೆ ಹೋಗ ಲಾಗಿ, ವಿಕ್ರಮನು ಸಂಬಳ ತೆಗೆದುಕೊಂಡಲ್ಲದೆ ಹೋಗಬಾರದೆಂದು, ಆ - @ ಕ